ವರಮಹಾಲಕ್ಷ್ಮಿ ಹಬ್ಬ ಮುಖ್ಯವಾಗಿ ಮದುವೆ ಆಗಿರುವಂತಹ ಹೆಂಗ ಸರಿಗೆ ವಿಶೇಷವಾದದ್ದು ಎಂದು ಹೇಳಬಹುದು ಅವರು ಮುತ್ತೈದೆ ಹೆಂಗಸರನ್ನು ಕರೆದು ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಿ ಪ್ರಸಾದವನ್ನು ನೀಡಿ ಲಕ್ಷ್ಮಿಯನ್ನು ಬರಮಾಡಿಕೊಳ್ಳುತ್ತಾರೆ. ಅಂದಿನ ದಿನ ಮಹಾ ಲಕ್ಷಿ ಗೆ ವಿಶೇಷ ವಾದಂತಹ ಪೂಜೆ ಮಾಡಿ ಸೀರೆ ಉಡಿಸಿ ಅಲಕ್ಷ್ಮಿಯನ್ನು ಆಹ್ವಾನ ಮಾಡಿ ಲಕ್ಷ್ಮಿಗೆ ಪ್ರಿಯವಾದ ಅಂತಹ ಹಲವಾರು ಬಗೆ ಬಗೆ ಯ ತಿಂಡಿಗಳನ್ನು ಮಾಡುತ್ತಾರೆ ಲಕ್ಷ್ಮಿಗೆ ನೈವೇದ್ಯ ನೀಡುತ್ತಾರೆ ‘ಕಮ ಲದಾ ಮೊಗದೋಳೆ ಕಮಲದಾ ಕಣ್ಣೋಳೆ’ ಎಂದು ದೇವಿಯನ್ನು ಪರಿಪರಿಯಾಗಿ ಸ್ತುತಿಸುತ್ತ ಆರತಿ ಬೆಳಗಿರೆ ನಾರಿಯರು ಎಂದು ಹಾ ಡುತ್ತ ಧನ್ಯತಾಭಾವ ತುಂಬಿಕೊಳ್ಳುವ ಹೆಂಗಸರಿಗೆ ಸಡಗರವೋ ಸಡ ಗರ. ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆ ಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ.
ಹಬ್ಬಗಳ ಸಾಲೇ ಸಾಲು ಹೂವು, ಹಣ್ಣು, ತರಕಾರಿ ರೇಟುಗಳು ಗಗನ ಕ್ಕೇರಿದ್ದರೂ ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾ ಲಕ್ಷ್ಮಿ ಹಬ್ಬವನ್ನು ಬಿಡುವಂತೆಯೇ ಇಲ್ಲ. ಹಣ್ಣು, ಹೂವು, ತರಕಾರಿಗ ಳ ಮೇಲೆ ಹಣ ಸುರಿದು ಜೇಬು ಖಾಲಿಯಾಗಿದ್ದರೂ ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಮಹಾಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಡ ಗರ. ಮನೆಮನೆಗಳಲ್ಲಿ ಸಂಭ್ರಮದ ವಾತಾವರಣ. ಕೆಲಸಕ್ಕೆ ಹೋಗುವ ಹೆಂಗಸಾದರೂ ಸಾಧ್ಯವಾದಷ್ಟು ಬೇಗ ಎದ್ದು ಪೂಜೆ ಮುಗಿಸಿ ಗಡಿಬಿ ಡಿಯಿಂದ ಬಗೆಬಗೆಯ ತಿನಿಸುಗಳನ್ನು ಮಾಡಿ, ಇನ್ನರ್ಧ ಗಂಟೆ ಲೇಟಾ ಗಿ ಹೋದರು ಪರವೆಗಿಲ್ಲ ಎಂದು ತುಂಬು ಮನಸ್ಸಿನಿಂದ ಪೂಜೆ ಮಾಡಿ ಮನೆಮಂದಿಗೆ ಮೃಷ್ಟಾನ್ನ ಬಡಿಸುವ ಸಡಗರ. ನೀವು ಕೂಡ ವರಮ ಹಾಲಕ್ಷ್ಮಿಯ ಪೂಜಾ ವಿಧಿ ವಿಧಾನವನ್ನು ತಿಳಿದುಕೊಳ್ಳ ಬೇಕಾದರೆ ಈ ಮೇಲಿನ ವಿಡಿಯೋವನ್ನು ತಪ್ಪದೆ ನೋಡಿ.