ತಂದೆ-ತಾಯಿಗಳನ್ನು ನಾವು ದೇವರ ಸಮಾನ ದಲ್ಲಿ ಪೂಜಿಸಿತ್ತೇವೆ ನಮಗೆ ಜನ್ಮ ನೀಡಿದಂತಹ ತಂದೆ ತಾಯಿಗಳಿಗೆ ಗೌರವವನ್ನು ನೀಡ ಬೇಕು ನಮ್ಮನ್ನು ಚಿಕ್ಕವಯಸ್ಸಿನಲ್ಲಿ ಪ್ರೀತಿ ಮತ್ತು ಕಾಳಜಿಯಿಂದ ನೋ ಡಿಕೊಂಡಿರುತ್ತಾರೆ ನಾವು ಎಷ್ಟು ಜನ್ಮ ಹುಟ್ಟಿಬಂದರು ಅವರ ಋಣ ವನ್ನು ತೀರಿಸಲು ಸಾಧ್ಯವಿಲ್ಲ ಅಂತಹ ತಂದೆತಾಯಿಗಳನ್ನು ನಾವು ನಮ್ಮ ಕಣ್ಣಗಳಂತೆ ನೋಡಿಕೊಳ್ಳ ಬೇಕು ಹಾಗೆ ತಂದೆ ತಾಯಂದಿರು ವಯಸ್ಸಾದಂತೆ ಮಕ್ಕಳಂತ ಮನಸ್ಥಿತಿ ಯನ್ನು ಹೊಂದಿರುತ್ತಾರೆ ನಾವು ಅವರನ್ನು ತುಂಬಾ ಕಾಳಜಿ ಮಾಡಬೇಕು. ಆದರೆ ಇತ್ತೀಚಿಗೆ ಜಗತ್ತಿನಲ್ಲಿ ವೃದ್ಧಾಶ್ರಮಗಳು ಜಾಸ್ತಿಯಾಗಿದೆ ತಂದೆತಾಯಿಗಳನ್ನು ನೋಡಿಕೊಳ್ಳಲು ಆಗದೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಇಲ್ಲೊಂದು ನಡೆದಿರುವಂತಹ ಹೃದಯ ಕಲಕುವಂತಹ ಘಟನೆಯನ್ನು ನೋಡಿದರೆ ಎಂಥವರ ಮನಸ್ಸಿಗು ನೋವುಂಟು ಮಾಡುತ್ತದೆ.
ಇಲ್ಲೊಬ್ಬ ವೃದ್ದನನ್ನು ಆತನ ಮಕ್ಕಳು ಮನೆಯಿಂದ ಓಡಿಸಿ ತುಂಬಾ ದಿನಗಳೆ ಆಗಿರುತ್ತದೆ ಆತ ಎರಡು ದಿನಗಳ ಕಾಲ ಪೊಲೀಸ್ ಸ್ಟೇಷನ್ ಮುಂದೆ ಚಳಿ,ಗಾಳಿ ಬಿಸಿಲಿನಲ್ಲಿ ಕುಳಿತು ಊಟ ಸಹ ಮಾಡದೆ ತಮ್ಮ ಮಕ್ಕಳು ಮನೆಗೆ ಕರೆದುಕೊಂಡು ಹೋಗುತ್ತಾರೆ ಇಲ್ಲವಾದರೆ ಯಾರದು ಆಶ್ರಯ ನೀಡುತ್ತಾರೆ ಎಂದು ಪೊಲೀಸ್ ಸ್ಟೇಷನ್ ಮುಂದೆ ಕುಳಿತಿರು ತ್ತಾರೆ ಆದರೆ ಯಾರೂ ಕೂಡ ಆತನಿಗೆ ಆಶ್ರಯ ನೀಡುವುದಿಲ್ಲ ಆನಂ ತರ ಆಶ್ರಯ ಪೌಂಡೇಶನ್ ಅವರು ಈತನನ್ನು ಕರೆದುಕೊಂಡು ಈತನಿ ಗೆ ಆಶ್ರಯ ನೀಡಬೇಕು ಊಟ ಹಾಕಬೇಕು ಎಂದು ಕರೆದುಕೊಂಡು ಹೋಗುತ್ತಾರೆ ಆದರೆ ಅಷ್ಟರಲ್ಲೇ ಸಮಯ ಮುಗಿದಿರುತ್ತದೆ ಆತನನ್ನು ಕರೆದುಕೊಂಡು ಹೋಗಿ ಚೇರ್ ನ ಮೇಲೆ ಕೂರಿಸುತ್ತಾರೆ ಕೂರಿಸಿದ ಕೆಲವೇ ನಿಮಿಷಗಳಲ್ಲಿ ಆತನ ಪ್ರಾಣ ಹೋಗಿದೆ ತಮ್ಮ ಮಕ್ಕಳಿಗೆ ಉತ್ತಮ ಜೀವನವನ್ನು ಕೊಟ್ಟಂತಹ ತಂದೆಗೆ ಈ ರೀತಿಯಾದಂತಹ ಪರಿಸ್ಥಿತಿ ಉಂಟಾಗಿದೆ.