ಬಹಳ ಸಮಸ್ಯೆಗಳನ್ನೇ ಹೊತ್ತು ಬಿಗ್ ಬಾಸ್ ನಿಂದ ಹೊರ ಬಂದ ಚಕ್ರವರ್ತಿ ಚಂದ್ರಚೂಡ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ? ಇದೆಲ್ಲಾ ಬೇಕಿತ್ತಾ ಚಕ್ರವರ್ತಿ.

ಬಿಗ್ ಬಾಸ್ ಸೀಸನ್ ಎಂಟರ ಎರಡನೇ ಇನ್ನಿಂಗ್ಸ್ ನಲ್ಲಿ ಇದೀಗ ಚಕ್ರ ವರ್ತಿ ಚಂದ್ರಚೂಡ ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನಗಳ ಕಾ ಲ ಗಲಾಟೆಗಳು ಹಾಗೂ ಇನ್ನಿತರ ವಿಚಾರಗಳ ಬಗ್ಗೆಯೇ ಸುದ್ದಿಯಾದ ಚಕ್ರವರ್ತಿ ಚಂದ್ರಚೂಡ ಕೊನೆ ದಿನಗಳಲ್ಲಿ ಪ್ರಿಯಾಂಕ ತಿಮ್ಮೇಶ್ ಗೆ ತೋರಿಸಿದ ಬೆರಳಿನ ಪರಿಣಾಮವಾಗಿ ಇದೀಗ ಬಿಗ್ ಬಾಸ್ ಮನೆಯಿಂ ದ ಹೊರಗೆ ಕಾಲಿಡುವಂತಾಯಿತು.. ಇನ್ನು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ಚಕ್ರವರ್ತಿ ಚಂದ್ರಚೂಡ ಅವರಿಗೆ ನಿಜ ಕ್ಕೂ ಸಿಕ್ಕ ಸಂಭಾವನೆಯಾದರು ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. ಹೌದು ಎಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಗೆ ಹೆಚ್ಚು ಕಾಂಟ್ರೋವರ್ಸಿ ಇರುವ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಹ ಜ..

WhatsApp Group Join Now
Telegram Group Join Now

ಅದೇ ರೀತಿ ನಟಿ ಶೃತಿ ಅವರ ಜೊತೆ ಎರಡನೇ ಮದುವೆಯಾಗಿ ಮೊ ದಲ ಪತ್ನಿ ಪೊಲಿಸರ ಮೊರೆ ಹೋದ ನಂತರ ಶೃತಿ ಅವರ ಜೊತೆ ಮಾತನಾಡಿಕೊಂಡು ಮದುವೆಯನ್ನು ಅಸಿಂಧು ಮಾಡಿಕೊಂಡರು.. ಇನ್ನು ಚಕ್ರವರ್ತಿ ಚಂದ್ರಚೂಡ ಮಾತಿನ ಮಲ್ಲನೂ ಹೌದಾಗಿದ್ದು ತಾನು ಆಡಿದ ಮಾತುಗಳನ್ನು ಸಮರ್ಥನೆ ಮಾಡಿಕೊಳ್ಳುವುದರಲ್ಲಿ ಎತ್ತಿದ ಕೈ ಎನ್ನಬಹುದು.. ಅದೇ ಕಾರಣಕ್ಕೆ ತಾನು ಆಡಿದ ಅನೇಕ ಮಾತುಗಳಿಗೆ ಸುದೀಪ್ ಅವರ ಮುಂದೆಯೇ ಸಮರ್ಥನೆ ಗಳನ್ನು ಕೊಟ್ಟು ಆ ರೀತಿ ಮಾತನಾಡೇ ಇಲ್ಲ ಎಂದು ಕೊನೆಗೆ ವೀಡಿಯೋ ರೆಕಾರ್ಡ್ ತೋ ರಬೇ ಕಾ ಎಂದಾಗ ಮಾತ್ರವೇ ಒಲ್ಲದ ಮನಸ್ಸಿನಲ್ಲಿ ತಪ್ಪನ್ನು ಒಪ್ಪಿ ಕೊಳ್ಳು ತ್ತಿದ್ದ ವ್ಯಕ್ತಿ ಎನ್ನಬಹುದು..

ಇದೀಗ ಬಿಗ್ ಬಾಸ್ ಪ್ರೇಕ್ಷಕರಿಗೆ ಕೊನೆಯ ವಾರದಲ್ಲಿ ನಡೆದುಕೊಂಡ ರೀತಿಯಿಂದ ಕಿರಿಕಿರಿಯ ಜೊತೆಗೆ ಆತನನ್ನಿ ಹೊರಗೆ ಹಾಕಿ ಎನ್ನುವ ಮಾತುಗಳು ಹೆಚ್ಚಾಗಿ ಕೇಳಿ ಬಂದಿದ್ದು ಒಂದು ಫ್ಯಾಮಿಲಿ ಶೋ ನಲ್ಲಿ ಒಬ್ಬ ಹೆಣ್ಣುಮಗಳಿಗೆ ಕೆಟ್ಟ ಸನ್ನೆ ತೋರಿ ತಮ್ಮ ಹಳ್ಳ ತಾವೇ ತೋಡಿ ಕೊಂಡರೆನ್ನಬಹುದು.. ಹೌದು ಚಕ್ರವರ್ತಿ ಚಂದ್ರಚೂಡರನ್ನು ವಾರ ಮಧ್ಯೆಯೇ ಮಧ್ಯರಾತ್ರಿಯಲ್ಲಿ ಎಲಿಮಿನೇಟ್ ಮಾಡಿ ಕಳುಹಿಸಲಾಗಿದ್ದು

ಅವರಿಗೆ ವೇದಿಕೆ ಮೇಲೆ ಸುದೀಪ್ ಅವರ ಜೊತೆ ಅನುಭವ ಹಂಚಿ ಕೊಳ್ಳುವ ಅವಕಾಶವೂ ಸಿಗದಂತಾಯಿತು.. ಇದಕ್ಕೂ ಸಹ ಕಾರಣ ವಿದೆ.. ಹೌದು ಚಕ್ರವರ್ತಿ ಚಂದ್ರಚೂಡ ಕಳೆದ ವಾರದ ಕತೆಯಲ್ಲಿ ಸುದೀಪ್ ಅವರು ಪ್ರಿಯಾಂಕ ಗೆ ಚಕ್ರವರ್ತಿ ಕೆಟ್ಟ ಸನ್ನೆ ಮಾಡಿದ್ದರ ಬಗ್ಗೆ ಪ್ರಶ್ನೆ ಮಾಡಿ ಗ್ರಹಚಾರ ಬಿಡಿಸಿದ್ದರು.. ಆಗ ತಿರುಗಿಸಿ ಚಂದ್ರ ಚೂಡ ನಾನು ಎಲ್ಲರಿಗೂ ಗೌರವ ಕೊಡುತ್ತೇನೆ ಆದರೆ ನನಗೆ ಯಾರ ಮೇಲಿ ಭಯವಿಲ್ಲ..

ನನ್ನನ್ನು ಹೆಣ್ಣು ನಿಂದಕನಂತೆ ತೋರುತ್ತಿದ್ದೀರಾ.. ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದೀರಾ.. ಇವರೆಲ್ಲಾ ಹಿಮಾಲಯದ ಸಂತರು.. ನಾನು ಮಾತ್ರ ಸರಿ ಇಲ್ಲಾ ಅನ್ನೋ ರೀತಿ ನೀವು ತೋರುಸ್ತಾ ಇದ್ದೀರಾ ಎಂದು ನೇರವಾಗಿಯೇ ಅವಾಜ್ ಹಾಕಿದ್ದರು.. ಇದಕ್ಕೆ ತಿರುಗಿಸಿ ಸುದೀಪ್ ಅವರು ಚಕ್ರವರ್ತಿ ಅವರ ಗುಣದ ಬಗ್ಗೆ ಮತ್ತೊಮ್ಮೆ ಗ್ರಹಚಾರ ಬಿಡಿಸಿ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆ ರೀತಿ ಮಾಡಿದರೆ ಬೆಣ್ಣೆ ಸವರಿ ಮಾತನಾಡಿಸಬೇಕಾ ಎಂದು ಬೆವರಿಳಿಸಿದ್ದರು.. ಕೊನೆಗೆ ತೆಪ್ಪಗಾದ ಚಕ್ರವರ್ತಿ ಚಂದ್ರಚೂಡ ಅವರು ತಲೆ ಬಾಗಿ ಈ ವಿಚಾರದ ಬಗ್ಗೆ ಕ್ಷಮೆಯನ್ನೂ ಸಹ ಕೇಳಿದ್ದರು. ಇನ್ನು ನಿನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಚಕ್ರವರ್ತಿ ಚಂದ್ರಚೂಡ ಅವರ ಸಂಭಾವನೆ ವಿಚಾರಕ್ಕೆ ಬಂದರೆ ಇವರಿಗೂ ಸಹ ಉಳಿದ ಸ್ಪರ್ಧಿಗಳಂತೆ ವಾರದ ಸಂಭಾವನೆ ನಿಗಧಿಯಾಗಿತ್ತು..

ಹೌದು ಚಕ್ರವರ್ತಿ ಚಂದ್ರ ಚೂಡ ಅವರಿಗೆ ಒಂದು ವಾರಕ್ಕೆ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆಯನ್ನು ನಿಗಧಿ ಮಾಡಲಾಗಿತ್ತು.. ಹೌದು ಬಿಗ್ ಬಾಸ್ ಶುರುವಾದ ತಿಂಗಳ ಬಳಿಕ ಏಪ್ರಿಲ್ ಒಂದರಂದು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದ ಚಕ್ರವರ್ತಿ ಚಂದ್ರಚೂಡ ಅವರು ಒಟ್ಟು ಎಂಭತ್ತೆರೆಡು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ಯಶಸ್ವಿಯಾದರು.. ಹೌದು ಚಕ್ರವರ್ತಿ ಚಂದ್ರಚೂಡ ಅವರು ಬಿಗ್ ಬಾಸ್ ಮನೆಯಲ್ಲಿ ಒಟ್ಟು ಹನ್ನೆರೆಡು ವಾರಗಳ ಕಾಲ ಉಳಿದಿದ್ದು ಅವರಿಗೆ ವಾರಕ್ಕೆ ಇಪ್ಪತ್ತು ಸಾವಿರದಂತೆ ಒಟ್ಟು ಎರಡು ಲಕ್ಷದ ನಲವತ್ತು ಸಾವಿರ ರೂಪಾಯಿ ಸಂಭಾವನೆ ರೂಪದಲ್ಲಿ ಅವರ ಕೈ ಸೇರಿದೆ ಎನ್ನಲಾಗಿದೆ.. ಒಟ್ಟಿನಲ್ಲಿ ತಮ್ಮ ಜ್ಞಾನ ಭಂಡಾರದ ಮೂಲಕ ಪತ್ರವಳ್ಳಿ ಪದದ ಅರ್ಥ ಹಾಗೂ ಮಧ್ಯದ ಬೆರಳು ಸಮ ತೋಲನದ ಬೆರಳು ಎಂದು ತಿಳಿಸಿ ಇದೀಗ ಬಿಗ್ ಬಾಸ್ ಮನೆಯಿಂದ ಹೊರ ನಡೆದಿದ್ದಾರೆನ್ನಬಹುದು. ತಪ್ಪದೇ ಈ ಮಾಹಿತಿಯನ್ನು ನೋಡಿದ್ದಕ್ಕೆ ಧನ್ಯವಾದಗಳು.

[irp]