ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ರೈತ ಮಹೇಶ್ ಕುಮಾರ್ ಮತ್ತು ಮಂಜು ಲಾಭದ ನಿರೀಕ್ಷೆಯಲ್ಲಿ ನಾಟಿ ಕನಕಾಂಬರವನ್ನು ತಮ್ಮ ಜಮೀನಿನಲ್ಲಿ ಹಾಕಿದ್ರು ಲಾಭ ಬರದೆ ಇಲ್ಲಿ ಹಾಕಿದ ಬಂಡವಾಳವನ್ನು ಬರದೆ ಕೈಸುಟ್ಟುಕೊಂಡು ರೈತರಿಗೆ ನಿರಾಶೆಯಾಗಿದ್ದು ಮುಖ್ಯವಾಗಿ ನಾಟಿ ಕನಕಾಂಬರಿ ಗೆ ಬರುತ್ತಿದ್ದ ಸೊರಗುರೋಗ ಇಳುವರಿಯನ್ನು ಕಡಿಮೆ ಮಾಡಿ ನಷ್ಟವಾಗುವಂತೆ ಮಾಡುತ್ತಿದ್ದು ಇದರಿಂದ ಹೇಗೆ ಪಾರಾಗುವುದು ಎಂದು ಆಲೋಚಿಸಿದ ರೈತರು ಕೊನೆಗೆ ಬೆಂಗಳೂರಿನ ಹೆಸರಘಟ್ಟದ ಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಭೇಟಿ ಕೊಟ್ರು ಆಗ ಅಲ್ಲಿನ ಕೃಷಿ ವಿಜ್ಞಾನಿ ಡಾಕ್ಟರ್ ಅಶ್ವತ್ ಅವರು ಅಭಿವೃ ದ್ಧಿಪಡಿಸಿದ ಅರ್ಕ ಚೆನ್ನ ಕನಕಾಂಬರಿಯ ಬಗ್ಗೆ ಮಾಹಿತಿ ಪಡೆದು ಈ ಬಾರಿ ಇದನ್ನು ಬೆಳೆಯಬೇಕೆಂದು ನಿರ್ಧರಿಸಿ ತಮ್ಮ ಜಮೀನಿಗೆ ಅರ್ಕ ಚೆನ್ನ ಹಾಕಿದ್ದು ಅಷ್ಟೇ.
ಈಗ ಇವರ ಜಮೀನಿನಲ್ಲಿ ಕನಕ ವರ್ಷ ಸುರಿಯುತ್ತಿದ್ದು ಇವರ ಬದು ಕು ಬಂಗಾರವಾಗಿದೆ. ಸುಮಾರು ಎರಡು ವರ್ಷದಿಂದ ದುಪ್ಪಟ್ಟು ಲಾಭ ಗಳಿಸುತ್ತಿದ್ದಾರೆ ಹಾಗಾದರೆ ಅರ್ಕ ಚೆನ್ನ ಹೇಗೆ ಲಾಭ ಕೊಡುತ್ತದೆ ಗೊ ತ್ತಾ ಅರ್ಕ ಚೆನ್ನ ಸುಮಾರು ರೋಗವನ್ನು ಎದುರಿಸುವ ಶಕ್ತಿ ಹೊಂದಿದೆ ಒಂದು ಬಾರಿ ಈ ಸಸಿಯನ್ನು ನೆಟ್ಟರೆ ಸುಮಾರು ಆರು ವರ್ಷ ಇಳುವ ರಿ ಕೊಡುತ್ತದೆ ನಾಟಿ ಮಾಡಿದ ಮೂರು ತಿಂಗಳಲ್ಲಿ ಇಳುವರಿ ಬರುತ್ತ ದೆ. ನಾಟಿ ಕನಕಾಂಬರಿ ಗಿಂತ ಹೆಚ್ಚು ಪಟ್ಟು ಇಳುವರಿ ಸಿಗುತ್ತದೆ ಹೂ ದಪ್ಪ, ಬಲಿಷ್ಟ ಕಾಂಡ ಮತ್ತು ಹೂವಿನ ಬಣ್ಣ ಚೆನ್ನಾಗಿರುತ್ತದೆ. ಗಿಡ ದಿಂದ ಕಿತ್ತ ನಂತರ ಹೂವು ನಾಲ್ಕು ದಿನ ಪ್ರಶ್ ಆಗಿರುತ್ತದೆ ಹಾಗೆ ಎಲ್ಲ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು ಎರಡು ಎಕರೆಯಲ್ಲಿ ಅರ್ಕ ಚೆನ್ನ ಹಾಕಿದ ಮಹೇಶ್ ರವರು ಪ್ರತಿ ವರ್ಷ 60 ಕೆಜಿ ಇಳುವರಿ ಪಡೆಯುತ್ತಿದ್ದಾರೆ.