ವೃಷಭ ರಾಶಿ ಇದು ರಾಶಿ ಚಕ್ರದ ಎರಡನೇ ರಾಶಿ ಈ ರಾಶಿ ಕಾಲಪು ರುಷನ ಮುಖ ಮತ್ತು ಕುತ್ತಿಗೆಯ ಭಾಗವನ್ನು ಪ್ರತಿನಿಧಿಸುತ್ತದೆ. ಕೃತಿಕಾ ನಕ್ಷತ್ರದ 3 ರೋಹಿಣಿ ನಕ್ಷತ್ರದ 4 ಹಾಗೂ ಮೃಗಶಿರ ನಕ್ಷತ್ರದ 2 ಪಾದ ಗಳು ಈ ರಾಶಿಗೆ ಸೇರುತ್ತದೆ. ಗೂಳಿ ಇದು ವೃಷಭ ರಾಶಿಯ ಸಂಕೇತ ಇದು ಶಕ್ತಿ ಹಾಗೂ ಬಲದ ಪ್ರತೀಕ ಅಂತ ಹೇಳಬಹುದು, ಅನಗತ್ಯವಾಗಿ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳಲು ಇಷ್ಟಪಡ ಲ್ಲ ಆದರೆ ಇವರ ತಂಟೆಗೆ ಹೋದರೆ ಮಾತ್ರ ಸುಮ್ನೆ ಇರೋ ಜಯ ಮಾನ ಅಲ್ಲ ಮೈಮೇಲೆ ಏರಿ ಬರುವ ಸ್ವಭಾವ ಇವರದು. ಗೂಳಿ ಒಮ್ಮೆ ಗುದ್ದಿದ್ದರೆ ಅಂತೂ ಬಿಡುವುದೇ ಇಲ್ಲ ಈ ರಾಶಿಯವರು ಕೂಡ ಹಾಗೆ ಸಿಟ್ಟು ಮೂಗಿನ ತುದಿಯಲ್ಲಿ ಇದ್ರೂ ಸಮಯ ಬಂದಾಗ ಮಾತ್ರ ಅದನ್ನು ತೋರಿಸುತ್ತಾರೆ ಈ ವೃಷಭ ರಾಶಿಯವರನ್ನು ರಾಶಿಯಲ್ಲಿ ವಿಶ್ವಾಸಾರ್ಹ ಎಂದು ನಂಬುತ್ತಾರೆ.
ವೃಷಭ ರಾಶಿಗೆ ಅಧಿಪತಿ ಶುಕ್ರ ಇದರ ಪ್ರಕಾರ ಹೇಳುವುದಾದರೆ ಈ ರಾಶಿಯವರು ನೋಡಲು ಮಧ್ಯಮ ಎತ್ತರ, ಆಕರ್ಷಕ ಮೈಕಟ್ಟು ಹೊಂದಿರುತ್ತಾರೆ ಹೊಳೆಯುವ ಹಲ್ಲು, ಸುಂದರವಾದ ಮೈಬಣ್ಣ, ಆಕರ್ಷಕ ಮುಖ ಹಾಗೆ ಸುಂದರವಾದ ಕಣ್ಣು, ದಪ್ಪ ಕುತ್ತಿಗೆ, ದುಂಡು ಮುಖ ನಮ್ಮೆಲ್ಲರನ್ನು ಬೆರಗುಗೊಳಿಸುತ್ತವೆ ಹೆಚ್ಚಾಗಿ ಸುರುಳಿಯಾಕಾರದ ಕೂದಲನ್ನು ಹೊಂದಿರುತ್ತಾರೆ ಮುಖದ ಮೇಲೆ ವಿಶಿಷ್ಟವಾದ ಚಿತ್ರದ ಕುರುಪು ಇರಬಹುದು. ಶುಕ್ರನ ಜೊತೆ ಶನಿ ಹಾಗೆ ಬುಧ ಕೂಡ ಈ ರಾಶಿಗೆ ತುಂಬಾನೇ ಮುಖ್ಯ ಶನಿ ಮತ್ತು ಬುಧ ಪ್ರಬಲವಾಗಿದ್ದರೆ ರಾಜಯೋಗಗಳನ್ನು ಉಂಟುಮಾಡುತ್ತದೆ ಇಲ್ಲಿ ರಾಜಯೋಗ ಅಂದರೆ ಉದ್ಯೋಗದಲ್ಲಿ ರಾಜಕೀಯದಲ್ಲಿ ಉನ್ನತ ಸ್ಥಾನ ದೊರೆಯುತ್ತದೆ ಎಂದರ್ಥ ಇವರು ಹೆಚ್ಚಾಗಿ ಅಲಂಕಾರ ಪ್ರಿಯರು ಆಗಿರುತ್ತಾರೆ.