ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಎಂಬ ಗ್ರಾಮದ ನಿವಾಸಿ ಪೂಜಾ ಈಕೆಗೆ 20 ವರ್ಷ ಈಕೆಯನ್ನು ಕಂಡರೆ ಅಪ್ಪ ಅಮ್ಮ ನಿಗೆ ಜೀವ ಮಗಳನ್ನು ಅಷ್ಟು ಪ್ರೀತಿಯಿಂದ ಸಾಕಿದ್ದರು. ಕಳೆದ 5 ತಿಂಗಳ ಹಿಂದೆ ಮಗಳಿಗೆ ವಯಸ್ಸು ಇಪ್ಪತ್ತಾಯಿತೆಂದು ಮಗಳಿಗೆ ಒಳ್ಳೆ ಕಡೆ ಹುಡುಗನನ್ನು ನೋಡಿ ನಿಶ್ಚಿತಾರ್ಥವನ್ನು ಸಹ ಮಾಡಿದ್ದರು. ಆ ದರೆ ಅದಾಗಲೇ ಇತ್ತ ಪೂಜಾ ಫೋನಿನಲ್ಲಿ ಪರಿಚಯವಾದ ಒಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದು ಬಿಟ್ಟಿದ್ದಳು ಕೇವಲ ಫೋನಿನಲ್ಲಿ ಮಾತನಾ ಡಿದ್ದನ್ನೇ ಪ್ರೀತಿ ಎಂದುಕೊಂಡು ಅಪ್ಪ ಅಮ್ಮನ ಪ್ರೀತಿಯನ್ನು ಮರೆತು ಸಕಲೇಶಪುರ ಮೂಲದ ದೀಪಕ್ ಎಂಬಾತ ಫೋನ್ ಮೂಲಕ ಪರಿಚ ಯವಾಗಿದ್ದು ಅಷ್ಟೆ ಅತ್ತ ಮನೆಯಲ್ಲಿ ನೋಡಿದ ಹುಡುಗನ ಜೊತೆ ನಿಶ್ಚಿ ತಾರ್ಥ ಮಾಡಿಕೊಂಡಿದ್ದ ಪೂಜಾ ಅಪ್ಪ ಅಮ್ಮನ ಗೌರವದ ಬಗ್ಗೆ ಆ ಲೋಚಿಸದೆ ಅಪ್ಪ ಅಮ್ಮನನ್ನು ಬಿಟ್ಟು ಬಂದು ಪ್ರೀತಿಸಿದ ಹುಡುಗನ ಮದುವೆಯಾದ ಪೂಜಾ ತನ್ನ ಬದುಕು ಸ್ವರ್ಗವಾಗಿರುತ್ತದೆ ಅಂದುಕೊಂ ಡಿದ್ದಳು.
ಗುರುತು ಪರಿಚಯ ಇಲ್ಲದವನನ್ನು ನಂಬಿ ಬಂದದ್ದಕ್ಕೆ ಅವಳ ಬದುಕು ಮುಳ್ಳಿನ ಹಾಸಿಗೆಯಾಗಿತ್ತು. ದೀಪಕ್ ಹಾಗೂ ಆತನ ಮನೆಯವರು ನಿತ್ಯನರಕದರ್ಶನ ಮಾಡಿಸುತ್ತಿದ್ದರಂತೆ ಅತ್ತ ಹೆತ್ತವರನ್ನು ಬಿಟ್ಟು ಬಂದು ಜೀವನ ಹಾಳು ಮಾಡಿಕೊಂಡೆ ಎಂದು ಪೂಜಾ ಕೊರಗಿ ಕೊರಗಿ ಕಣ್ಣೀ ರಿಟ್ಟು ಕೊನೆಗೆ ದುಡುಕಿ ಬೇರೆಯದ್ದೇ ನಿರ್ಧಾರ ತೆಗೆದುಕೊಂಡು ಬಿಟ್ಟ ಳು. ಹೌದು ಜೀವನದ ಬಗ್ಗೆ ನೂರಾರು ಕನಸು ಕಂಡು ದೀಪಕ್ ನಂಬಿ ಬಂದಿದ್ದ ಪೂಜಾ ಅತ್ತ ಹೆತ್ತವರೂ ಇಲ್ಲ ಇತ್ತ ಪ್ರೀತಿಸಿದ ಹುಡು ಗನು ಸರಿಯಾಗಿಲ್ಲ ಇದರಿಂದ ಮನನೊಂದು ಹೇಮಾವತಿ ನದಿಗೆ ಹಾರಿ ಜೀವ ಕಳೆದು ಕೊಂಡುಬಿಟ್ಟಳು. ವಿಚಾರ ತಿಳಿದು ಹೇಮಾವತಿ ನದಿ ಬಳಿ ಬಂದಿರುವ ಪೂಜಾಳ ತಂದೆ ತಾಯಿಯ ಸಂಕಟ ನೋವು ಆಕ್ರಂದನದಿಂದ ಗೋಳಾಡುತ್ತಿದ್ದಾರೆ.