ನನಗೆ ಕಾಲ್ ಕಟ್ ಆಗಿದೆ ಓಡಕ್ಕೆ ಆಗಲ್ಲ ಅರ್ಥ ಮಾಡಿಕೊಳ್ಳಿ..! ಒಂದೇ ಒಂದು ರೆಕಾರ್ಡ್ ತೋರ್ಸಿ ನಾನು ಹಂಗೆ ಹೇಳಿದ್ದನಂತ..?

ಲವ್ ಯು ರಚ್ಚು ಸಿನಿಮಾ ನಡೆಯುವಾಗ ಒಂದು ದುರ್ಘಟನೆ ಎದು ರಾಗಿದೆ ಇದೀಗ ಅಜಯರಾವ್ ಮೇಲೆ ಇಲ್ಲಿ ಜನರು ಹಲವಾರು ರೀತಿ ಯಲ್ಲಿ ಮಾತನಾಡಿ ಕೊಳ್ಳುತ್ತಿದ್ದಾರೆ ಆದರೆ ಅಜಯ್ ಅವರು ಹೀಗೆ ಹೇಳಿಕೆ ನೀಡಿದ್ದಾರೆ ಘಟನೆ ನಡೆದಾಗ ನಾನು ಸ್ಪಾಟ್​ನಲ್ಲಿ ಇರಲಿಲ್ಲ ನಾನು ಅಲ್ಲಿ ಇದ್ದಿದ್ದರೆ ಎಚ್ಚರಿಕೆ ವಹಿಸುವಂತೆ ಹೇಳುತ್ತಿದ್ದೆ ಎಂದು ಲವ್ ಯೂ ರಚ್ಚು ಚಿತ್ರದ ನಾಯಕನಟ ಅಜಯ್ ರಾವ್ ಹೇಳಿಕೆ ನೀಡಿದ ಬೆನ್ನಲ್ಲೇ ಗಾಯಾಳು ಫೈಟರ್ ರಂಜಿತ್ ನಾಯಕನಟನ ಹೇಳಿಕೆ ಯನ್ನ ತಳ್ಳಿಹಾಕಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಫೈಟರ್ ರಂಜಿತ್, ತಾನು ಪೆಟ್ಟಾಗಿ ಬಿದ್ದಾಗ ಹೀರೋ ಅಲ್ಲೇ 10-15 ಮೀಟ ರ್ ದೂರದಲ್ಲೇ ಇದ್ದರು. ನನ್ನ ಸಹಾಯಕ್ಕೆ ಬರದೇ ಸುಮ್ಮನೆ ನೋಡುತ್ತಾ ಕೂತಿದ್ದರು. ಘಟನೆ ಸ್ಥಳದಲ್ಲಿ ತಾನು ಇರಲಿಲ್ಲ ಅಂತ ಮಾಧ್ಯಮದ ಮುಂದೆ ಯಾಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಅಜ ಯ್ ರಾವ್ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now

ನಿನ್ನೆ ಬಿಡದಿಯಲ್ಲಿ ಲವ್ ಯೂ ರಚ್ಚು ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ವೇಳೆ ಅವಘಡ ಸಂಭವಿಸಿ ವಿವೇಕ್ ಎಂಬ ಫೈಟರ್ ಸಾವನ್ನಪ್ಪಿದ್ದರು. ಮತ್ತೊಬ್ಬ ಫೈಟರ್ ರಂಜಿತ್ ಗಾಯಗೊಂಡು ಇದೀಗ ಆಸ್ಪತ್ರೆಯಲ್ಲಿದ್ದಾರೆ. ಮೆಟಲ್ ರೋಪ್ ಬಳಸಿ ಸಾಹಸ ಚಿತ್ರೀಕರಣ ನಡೆಸಲಾಗುತ್ತಿತ್ತು. ಈ ವೇಳೆ ಕ್ರೇನ್ ಆಕಸ್ಮಿಕವಾಗಿ ಹೈ ಟೆನ್ಷನ್ ವೈರ್​ಗೆ ತಾಕಿದ ಪರಿಣಾಮ ಇಬ್ಬರು ಫೈಟರ್​ಗಳಿಗೆ ಶಾಕ್ ಹೊಡೆದಿದೆ. ವಿವೇಕ್ ಈ ಸಂದರ್ಭದಲ್ಲಿ ಮೆಟಲ್ ರೋಪ್ ಎಳೆಯುತ್ತಿದ್ದರೆನ್ನ ಲಾಗಿದೆ. ಈ ಘಟನೆ ಬಗ್ಗೆ ನಾಯಕನಟ ಅಜಯ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದರು. ಸರಿಯಾದ ಮುಂಜಾಗ್ರತೆ ಇರಲ್ಲಿಲ್ಲ ಹಾಗೇ ನನ್ನ ಕಾಲು ಏಟಾಗಿದೆ ಎರಡು ವರ್ಷದಿಂದ ನನಗೆ ಓಡಲು ಆಗುವುದಿಲ್ಲ ಕೇವಲ ನಡೆಯಲು ಮಾತ್ರ ಸಾಧ್ಯ ಎಂದು ಅವರು ಹೇಳಿಕೆ ನೀಡಿದ್ದಾರೆ.

[irp]