ಬಿಗ್ ಬಾಸ್ ಸೀಸನ್ ಎಂಟರಲ್ಲಿ ಈ ಬಾರಿ ಮಂಜು ಪಾವಗಡ ಅವ ರು ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಮಂಜು ಪಾವಗಡ ಅವರು ಮೊದಲ ಬಾರಿಗೆ ಮಜಾ ಟಾಕೀಸ್ ಖ್ಯಾತಿಯನ್ನು ಪಡೆದುಕೊಂಡರು. ಇದಕ್ಕೂ ಮೊದಲು ಮಂಜು ಅವರ ಜೆಪಿ. ನಗರದ ಪೆಟ್ರೋಲ್ ಬಂ ಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ಮಜಾಭಾರತ ವೇದಿಕೆಯಲ್ಲಿ ಅವಕಾಶ ಸಿಗುತ್ತದೆ. ಈ ಒಂದು ಅವಕಾಶವನ್ನು ಸದು ಪಯೋಗ ಪಡಿಸಿಕೊಂಡು ತನ್ನಲ್ಲಿರುವ ಕಲೆಯನ್ನು ಉಪಯೋಗಿಸಿ ಕೊಂಡು ಎಲ್ಲಾ ಜನರನ್ನು ಮನರಂಜಿಸುತ್ತಾರೆ. ಈ ಮಜಾಭಾರತ ಕಾರ್ಯಕ್ರಮದಿಂದ ಕರ್ನಾಟಕದ ಜನತೆಗೆ ಮತ್ತಷ್ಟು ಹತ್ತಿರವಾಗುತ್ತಾರೆ. ತದನಂತರ ಅವರಿಗೆ ಬಿಗ್ ಬಾಸ್ ವೇದಿಕೆಯಿಂದ ಸ್ಪರ್ಧಿಯಾಗಿ ಸ್ಪರ್ಧಿ
ಸುವಂತೆ ಕರೆ ಬರುತ್ತದೆ. ಈ ಒಂದು ಅವಕಾಶ ಮಂಜು ಅವರ ಬದು ಕಿನಲ್ಲಿ ಸುವರ್ಣಾವಕಾಶ ಅಂತನೇ ಹೇಳಬಹುದು. ಅದಕ್ಕೆ ತಕ್ಕಂ ತೆ ಮಂಜು ಅವರು ವೇದಿಕೆಗೆ ಬರುವುದಕ್ಕೆ ಒಪ್ಪಿಕೊಂಡು ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ. ಮೊದಲನೇ ಇನ್ನಿಂಗ್ಸ್ ನಲ್ಲಿ ಮಂಜು ಅವರು ದಿವ್ಯ ಸುರೇಶ್ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಎರಡನೇ ಇನ್ನಿಂಗ್ಸ್ ನಲ್ಲಿ ಮಂಜು ಅವ ರು ಆಟದ ಕಡೆ ಹೆಚ್ಚಾಗಿ ಗಮನವನ್ನು ನೀಡಿ ಕೆಲಸಗಳನ್ನು ಅಚ್ಚುಕ ಟ್ಟಾಗಿ ಮಾಡುತ್ತಾರೆ. ಹಾ ಗೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿ ದ್ದ ಕಾರಣ ಅವರಿಗೆ ಪ್ರತಿವಾರವೂ ಕೂಡ ಅತಿ ಹೆಚ್ಚು ವೊಟ್ ಬೀಳು ತ್ತದೆ. ಅವರು ಅಂದುಕೊಂಡ ರೀತಿಯಲ್ಲಿ ಈ ಬಾರಿಯ ಬಿಗ್ ಬಾಸ್
ವಿನ್ನರ್ ಕೂಡ ಆಗುತ್ತಾರೆ. ಆದರೆ ಬಿಗ್ ಬಾಸ್ ವಿನ್ನರ್ ಗೆ ಕೊಡುವ 53 ಲಕ್ಷ ರೂಪಾಯಿಗಳು ಮಂಜುಗೆ ಪೂರ್ಣಯಾಗಿ ಸಿಕ್ಕಿಲ್ಲ. ಮಂಜು ಪಾವಗಡ ರವರಿಗೆ ಬಹುಮಾನದ 53 ಲಕ್ಷ ರೂಪಾಯಿಯಲ್ಲಿ 34% ಟ್ಯಾಕ್ಸ್ ಹಣ ಕಳೆದು 34 ಲಕ್ಷದ 92 ಸಾವಿರ ರೂಪಾಯಿ ಮಾತ್ರ ದೊರಕಿದೆ. ಇದರ ಜೊತೆಗೆ ಬಿಗ್ ಬಾಸ್ ಮನೆಯಲ್ಲಿ 17 ವಾರಕ್ಕೆ ಸಂಭಾವನೆಯಾಗಿ 5 ಲಕ್ಷದ 10 ಸಾವಿರ ರೂಪಾಯಿ ದೊರಕಿದೆ. ಒಟ್ಟಾರೆಯಾಗಿ 40 ಲಕ್ಷ ರೂಪಾಯಿ ಬಹುಮಾನಗಳನ್ನು ಸಂಭಾವನೆ ಯಾಗಿ ಪಡೆದುಕೊಂಡಿದ್ದಾರೆ…