ಗೌರಿ ಹಬ್ಬ ತುಂಬಾ ವಿಶೇಷ ಎಂದು ಹೇಳಬಹುದು ಈ ಹಬ್ಬದಲ್ಲಿ ಪ್ರಧಾನ ಕಳಶದ ಬಗ್ಗೆ ನೋಡುವುದಾದರೆ ಒಂದು ಟೇಬಲ್ ಸಿದ್ಧತೆ ಮಾಡಿಕೊಂಡು ಅದರ ಮೇಲೆ ಒಂದು ಬೆಳ್ಳಿತಟ್ಟೆಯನ್ನು ಇಟ್ಟು ಅದರ ಮೇಲೆ ಒಂದು ಬಟ್ಟೆಯನ್ನು ಅರಿಶಿಣ ಮಾಡಿ ಹಾಕಿ ಅದರಲ್ಲಿ ಮೂರು ತರಹದ ಗೌರಿಯನ್ನು ಇರಿಸಬೇಕು ಒಂದು ಮಣ್ಣಿನ ಗೌರಿ, ಎರಡನೆ ಯದು ಹರಿಶಿಣದ ಗೌರಿ, ಮೂರನೆಯದು ಬೆಳ್ಳಿ ಗೌರಿ ಇಡಬೇಕು. ಹಾಗೆಯೇ ಗೌರಿ ಹಬ್ಬಕೆ ಯಮುನಾ ಕಳಶವನ್ನು ಸಹಾ ಇಡಬೇಕಾ ಗುತ್ತದೆ. ವರಮಹಾಲಕ್ಷ್ಮಿ ಆಚರಣೆ, ಗೌರಿ ಪೂಜೆ, ಫಲ ಗೌರಿ ವೃತ ಆಗಿರಬಹುದು ಇಂಥವೆಲ್ಲ ಮೊದಲನೇ ಪೂಜೆ ಗಣಪತಿಗೆ ನಂತರ ಯಮುನಾ ಕಳಶಕ್ಕೆ ನಂತರ ಪ್ರಧಾನ ಕಳಶ ಪೂಜೆ ಮಾಡಬೇಕಾಗು ತ್ತದೆ.

ಮೂರು ತರಹದ ಗೌರಿ ಇಡುವಂತಹ ತಟ್ಟೆಯಲ್ಲಿ ಚವಾಕು ಸಹ ಇಡ ಬೇಕು ಇದು ಗ್ರಂತಿಕೆ ಅಂಗಡಿಯಲ್ಲಿ ಸಿಗುತ್ತದೆ. ಹಾಗೆಯೇ ಚಿಕ್ಕ ಗಣಪತಿ ಸಹ ಇಡಬೇಕು. ಗೌರಿ ಹಬ್ಬಕ್ಕೆ ಗೆಜ್ಜೆ ವಸ್ತ್ರವನ್ನು 16 ಇಡಿ ಉದ್ದ ಹಾಗೂ 16 ಎಳೆ ಇರಬೇಕು. ಹಾಗೆಯೆ ಕೈ ದಾರ 16 ಹಿಡಿ, 16 ಎಳೆ ಹಾಗು 16 ಗಂಟುಹಾಕಿ ದಾರವನ್ನು ಸಿದ್ಧಪಡಿಸಿಕೊಳ್ಳಬೇಕು. ನಂತರ ನೈವೇದ್ಯಕ್ಕೆ ಬೇಳೆ ಒಬ್ಬಟ್ಟು ಹಾಗೆ ಚಿತ್ರಣವನ್ನು ರೆಡಿ ಮಾಡಿ ಕೊಳ್ಳಿ, ಪಂಚ ಫಲಕ್ಕೆ ಎರಡು ವೀಳ್ಯದೆಲೆ ಒಂದು ಅಡಿಕೆ, ಒಂದು ಕಾಯಿನ್ ಐದು ತರಹದ ಹಣ್ಣು ಪ್ರತಿಯೊಂದು ಹಣ್ಣು ಎರಡೆರಡು ಇರಬೇಕು ಬಾಳೆಹಣ್ಣು ಒಂದು ಚಿಪ್ಪು ಹಾಗೆ ತೆಂಗಿನಕಾಯಿ ಮಾತ್ರ ಒಂದು ಇರಬೇಕು. ಪೂಜಾ ತಟ್ಟೆ, ಬಾಗಿನ ಹಾಗೆ ವಿಸರ್ಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *