ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಲ್ಲಾ ಹಬ್ಬಗಳಿಗೂ ತನ್ನದೇ ಆದಂ ತಹ ಒಂದು ಮಹತ್ವವನ್ನು ಹೊಂದಿವೆ. ಹಾಗೆ ಎಲ್ಲಾ ಹಬ್ಬ ಗಳಿಗೂ ಒಂದು ಹಿನ್ನೆಲೆಯೇ ಸಹ ಇದೆ ಇರುತ್ತದೆ. ನಾವು ಆಚರಿಸುವಂತಹ ಹಬ್ಬದಗಳಲ್ಲಿ ಮುಖ್ಯವಾದ ವಿಶೇಷವಾದ ಹಬ್ಬ ಎಂದರೆ ಗೌರಿ-ಗಣೇಶ ಹಬ್ಬ. ಗೌರಿ-ಗಣೇಶ ಹಬ್ಬವನ್ನು ಎಲ್ಲೆಡೆ ತುಂಬಾ ಸಂಭ್ರಮ ಸಂತೋ ಷದಿಂದ ಆಚರಿಸುತ್ತಿದ್ದರು ಹೌದು ಆದರೆ ಕಳೆದ ವರ್ಷದಿಂದಲೂ ಕೊರೋನಾದ ಕಾರಣದಿಂದಾಗಿ ಎಲ್ಲಾ ಕಡೆಯೂ ತುಂಬಾ ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ ಹಾಗೆಯೇ ನಾವು ಹೊರಗಿನಿಂದ ತಂದಂತಹ ಕೆಮಿಕಲ್ ಯುಕ್ತ ಗೌರಿ ಗಣೇಶ ವನ್ನು ಬಳಸುವುದರಿಂದ ನಮ್ಮ ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ನಾವು ಪರಿಸರಸ್ನೇ ಹಿಯಾಗಿ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಗೌರಿ ಗಣೇಶವನ್ನು ತಯಾರು ಮಾಡಿಕೊಂಡು ಗೌರಿ-ಗಣೇಶ ಹಬ್ಬವನ್ನು ಆಚರಿಸಬೇಕು.

ನಮ್ಮ ಮನೆಯಲ್ಲೆ ಸಿಗುವಂತಹ ಅರಿಶಿನಪುಡಿ ಪುಡಿಯಿಂದ ಗೌರಿಯ ನ್ನು ತಯಾರು ಮಾಡಿಕೊಳ್ಳಬಹುದು ಹೇಗೆ ಎಂದರೆ ಇದಕ್ಕೆ ಬೇಕಾಗಿರು ವಂತಹ ಸಾಮಗ್ರಿಗಳು ಅರಿಶಿನ ಪುಡಿ, ಅರಿಶಿಣ ಪುಡಿ ಎಷ್ಟು ತೆಗೆದು ಕೊಂಡು ಅದರಲ್ಲಿ ಅರ್ಧ ಪ್ರಮಾಣದಷ್ಟು ಮೈದಾ, 1 ಟೇಬಲ್ ಸ್ಪೂನ್ ಸಕ್ಕರೆ ಪುಡಿ 1, ಟೇಬಲ್ ಸ್ಪೂನ್ ನಿಂಬೆ ರಸ ಇದಿಷ್ಟನ್ನು ಹಾಕಿ ಸೊಲ್ಪ ಸೊಲ್ಪ ನೀರು ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಹೀಗೆ ನಾವು ಅರಿಶಿಣದ ಪುಡಿ ಯಿಂದ ಗೌರಿ ಗಣೇಶ ವನ್ನು ಮಾಡಿದರೆ ನಾವೇ ಮಾಡಿದಂಹ ಸಂತೋಷ ಇರುತ್ತದೆ ಹಾಗೆಯೇ ಹಬ್ಬವನ್ನು ಆಚರಿಸುವ ಖುಷಿ ಸಹ ಇರುತ್ತದೆ. ಹಾಗಾದರೆ ಈ ಒಂದು ಗೌರಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದು ಕೊಳ್ಳಬೇಕಾದರೆ ಈ ಮೇಲಿನ ವೀಡಿಯೋ ತಪ್ಪದೇ ನೋಡಿ.

By admin

Leave a Reply

Your email address will not be published. Required fields are marked *