ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಪುತ್ರ ಜೂನಿ ಯರ್ ಚಿರು ಅವರಿಗೆ ಹೆಸರಿಡಲಾಗಿದೆ. ಜೂನಿಯರ್ ಚಿರು ನಾಮ ಕರಣ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ತಮ್ಮ ಮಗನಿಗೆ ‘ರಾಯನ್ ರಾಜ್ ಸರ್ಜಾ’ ಅಂತ ಮೇಘನಾ ರಾಜ್ ಹೆಸರಿಟ್ಟಿದ್ದಾರೆ. ಸೆಪ್ಟೆಂಬರ್ 3 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಟಿ ಮೇಘನಾ ರಾಜ್ ಪುತ್ರನ ನಾಮಕರಣ ಸಮಾರಂಭ ನಡೆಯಿತು. ನಾಮ ಕರಣ ಸಮಾರಂಭಕ್ಕೆ ಇಡೀ ಸುಂದರ್ ರಾಜ್ ಕುಟುಂಬ ಹಾಗೂ ಸರ್ಜಾ ಕುಟುಂಬ ಪಾಲ್ಗೊಂಡಿತ್ತು. ವಿಡಿಯೋ ಮೂಲಕ ತಮ್ಮ ಪುತ್ರನ ನಾಮಧೇಯ ‘ರಾಯನ್ ರಾಜ್ ಸರ್ಜಾ’ ಎಂದು ಮೇಘನಾ ರಾಜ್ ರಿವೀಲ್ ಮಾಡಿದರು.

ಅಂದಹಾಗೆ ಸಂಸ್ಕೃತದಲ್ಲಿ ರಾಯನ್ ಎಂದರೆ ಯುವರಾಜ ಎಂದರ್ಥ. ಕುಟುಂಬದವರು ಕ್ರಿಶ್ಚಿಯನ್ ಸಂಪ್ರದಾಯದಂತೆ ಮಗುವಿನ ನಾಮಕ ರಣವನ್ನು ನೆರವೇರಿಸಿತ್ತಿದ್ದ ಸಂದರ್ಭದಲ್ಲಿ ದೃವಸರ್ಜಾ ಅವರನ್ನು ತಬ್ಬಿ ಕೊಂಡು ಸುಂದರ್ ರಾಜ್ ಅವರು ಕಣ್ಣೀರಿಟ್ಟಿದ್ದಾರೆ ಕಾರಣ ಚಿರಂಜೀವಿ ಸರ್ಜಾ ರವರು ಇಲ್ಲದ ಕೊರತೆಯಲ್ಲಿ ಕಾಡುತ್ತಿತ್ತು ಆದ್ದರಿಂದ ತಮ್ಮ ಭಾವನೆಯನ್ನು ಕಣ್ಣೀರಿನ ಮೂಲಕ ಹೊರಹಾಕಿದ್ದಾರೆ. ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಹಗಲಿ ವರ್ಷಗಳಾದರೂ ಅವರ ನೆನಪು ಮಾತ್ರ ಯಾರಲ್ಲಿಯೂ ಸಹ ಅಳಿಸಿಲ್ಲ ಅವರು ಮರೆಯಲಾಗದ ಮಾಣಿಕ್ಯ ಎಂದೇ ಹೇಳಬಹುದು. ಈಗ ಚಿರಂಜೀವಿ ಸರ್ಜಾ ಅವರು ತಮ್ಮ ಮಗನ ರೂಪದಲ್ಲಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ ಎಲ್ಲರು ಈಗ ಜೂನಿಯರ್ ಚಿರು ಅವರಲ್ಲಿ ತಮ್ಮ ಖುಷಿಯನ್ನು ಹುಡುಕುತ್ತಾ ಇದ್ದಾರೆ.

By admin

Leave a Reply

Your email address will not be published. Required fields are marked *