ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗು ಜ್ಯೂನಿಯರ್ ಚಿರು ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೊಟೇಲ್‌ನಲ್ಲಿ ನಾಮಕ ರಣ ಮಾಡಿದ್ದಾರೆ. ಬೆಳಗ್ಗೆಯಿಂದ ಆರಂಭವಾಗಿರುವ ಪೂಜೆಯಲ್ಲಿ ಚಿರಂಜೀವಿ ಸರ್ಜಾ ಪೋಷಕರೂ ಭಾಗಿಯಾಗಿದ್ದಾರೆ. ಮೊಮ್ಮಗನನ್ನು ಮಡಿಲಿನಲ್ಲಿ ಕೂರಿಸಿಕೊಂಡು ಪೂಜೆ ಮಾಡಿದ್ದಾರೆ ಚಿರಂಜೀವಿ ಪೋಷ ಕರು. ರಾಯನ್ ರಾಜ್ ಎಂದು ನಾಮಕರಣ ಮಾಡಿದ್ದಾರೆ ಕುಟುಂಬ ಸ್ಥರು, ಸಂಸ್ಕೃತದಲ್ಲಿ ರಾಯನ್ ರಾಜ್ ಎಂದರೆ ಯುವರಾಜ ಅಂತ ಅರ್ಥ. ನಾಮಕರಣ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ, ಪ್ರೇರಣಾ, ಸೂರಜ್, ತೇಜ್ ರಾಜ್ ಸೇರಿ ಕುಟುಂಬಸ್ಥರು ನಾಮಕರಣದಲ್ಲಿ ಭಾಗಿಯಾಗಿದ್ದರು. ಜ್ಯೂನಿಯರ್ ಹುಟ್ಟುವ ಮುನ್ನವೇ ಧ್ರುವ ಸರ್ಜಾ ಬೆಳ್ಳಿ ತೊಟ್ಟಿಲು ಗಿಫ್ಟ್‌ ನೀಡಿದ್ದರು. ಇಂದು ನಾಮಕರಣದಲ್ಲಿ ಆ ಬೆಳ್ಳಿ ತೊಟ್ಟಿಲಿಗೆ ಹೂವಿನ ಅಲಂಕಾರ ಮಾಡಿ ಬಳಸಿದ್ದಾರೆ.

10 ತಿಂಗಳ ಬಳಿಕ ಪುತ್ರನಿಗೆ ನಾಮಕರಣ ಮಾಡುತ್ತಿರುವ ಮೇಘನಾ ರಾಜ್ ಹೋಟೆಲ್ ಎಂಟ್ರೆನ್ಸ್‌ನಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘ ನಾ ರಾಜ್ ಅವರ ಲಿಟಲ್ ಪ್ರಿನ್ಸ್  ನಾಮಕರಣಕ್ಕೆ ಸ್ವಾಗತ ಎಂದು ಬೋರ್ಡ್ ಹಾಕಿದ್ದಾರೆ. ಇಡೀ ಹೋಟೆಲ್‌ನ ಬಲೂನ್‌ಗಳಿಂದ ಅಲಂ ಕಾರ ಮಾಡಲಾಗಿದೆ. ಚರ್ಚಿನಲ್ಲಿ ನಾಮಕರಣ ಕಾರ್ಯಕ್ರಮವನ್ನು ನೆರ ವೇರಿಸುವಂತ ಸಂದರ್ಭದಲ್ಲಿ ಜೂನಿಯರ್ ಚಿರು ರಾಯನ್ ರಾಜ್ ಸರ್ಜಾ ಅವರು ಕ್ಯಾಮರಾಗೆ ಕ್ಯೂಟಾಗಿದೆ ಪೋಸ್ ಕೊಟ್ಟಿದ್ದಾ ರೆ. ತಮ್ಮ ತಂದೆಯ ರೂಪವನ್ನು ಹೋಲುವಂತಹ ಮಗು ಭವಿಷ್ಯದಲ್ಲಿ ತಮ್ಮ ತಂದೆಯಂತೆಯೇ ಒಳ್ಳೆಯ ಗುಣಗಳನ್ನು ಹೊಂದಿ ಉತ್ತಮ ಪ್ರಜೆ ಯಾಗಿ ಬೇಕು ಎಂದು ಮೇಘನಾ ರಾಜ್ ಅರವರು ಆಸೆ ಪಡುತ್ತಿದ್ದಾ ರೆ. ಮಗುವಿನ ಕ್ಯೂಟ್ ಆದ ವೀಡಿಯೋ ನೋಡಲು ತಪ್ಪದೇ ಈ ಮೇಲಿನ ವೀಡಿಯೋ ನೋಡಿ.

By admin

Leave a Reply

Your email address will not be published. Required fields are marked *