ಮೇಷ ರಾಶಿ : ಇಂದು ನೀವು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತೀರಿ.ಇದರಿಂದಾಗಿ ಸಂಪೂರ್ಣ ಪ್ರಯೋಜನವನ್ನು ಪಡೆಯಲಿದ್ದೀರಿ.ಇಂದು ನೀವು ವ್ಯಾಪಾರ ಮಾಡುವವರಾಗಿದ್ದರೆ ಹಳೆಯ ವ್ಯವಹಾರದ ಸಂಪರ್ಕದಿಂದ ದೊಡ್ಡ ಮೊತ್ತದ ಲಾಭ ಪಡೆಯಲಿದ್ದೀರಿ‌.ಉದ್ಯೋಗದಲ್ಲಿ ಉತ್ತಮ ಪ್ರಶಂಸೆ ಸಿಗಲಿದೆ.ಹಣಕಾಸಿನ ಸ್ಥಿತಿ ಉತ್ತಮ ಆರೋಗ್ಯದ ಕಡೆ ಗಮನ ನೀಡಲೆಬೇಕು.ಶುಭ ಸಂಖ್ಯೆ : 7

ವೃಷಭ ರಾಶಿ : ಇಂದು ನೀವು ಕೈ ಹಾಕಿದ ಕಾರ್ಯದಲ್ಲಿ ಯಶಸ್ಸು,ಸಹೋದರಿಯಿಂದ ಧನ ಸಹಾಯ. ಮದುವೆ ವಿಷಯವಾಗಿ ಸುಧಾರಣೆ ಆಗಲಿದೆ ಇದರಿಂದ ಮಾನಸಿಕವಾಗಿ ಹೆಚ್ಚು ಧೈರ್ಯ ಹೊಂದಲಿದ್ದೀರಿ.ಕೊಟ್ಟ ಹಣ ಹಿಂತಿರುಗಿ ಹೋಗದೆ ಬೇಸರವಾಗಬಹುದು.ಕಛೇರಿ ಕೆಲಸಗಳು ವಿಳಂಬ. ಹಳೆ ಸ್ನೇಹಿತರೊಂದಿಗೆ ದ್ವೇಷ ಬೇಡ.ಹಣಕಾಸು ಗೊಂದಲ ಹಾಗೂ ಆರೋಗ್ಯ ಉತ್ತಮ‌.ಶುಭ ಸಂಖ್ಯೆ 4.

ಮಿಥುನ ರಾಶಿ : ಈ ದಿನ ಸುಖಕರವಾಗಲಿದೆ.ಪ್ರೀತಿಯಲ್ಲಿ ಇದ್ದ ಸಮಸ್ಯೆಗಳು ದೂರವಾಗಿ ಮನೊಲ್ಲಾಸ.ಮಾನಸಿಕ ಚಿಂತನೆಗಳು ದೂರವಾಗಲಿದೆ.ತಂದೆಯಿಂದ ತೆಗಳಿಕೆ ಹಾಗೂ ಉದ್ಯೋಗದಲ್ಲಿ ಕಿರಿಕಿರಿ ಇದ್ದು ಗಣೇಶನ ಧ್ಯಾನ ಮಾಡಿದರೆ ಶುಭ.ಮನೆ ಕಟ್ಟುವ ವಿಷಯಕ್ಕೆ ಇದ್ದ ಸಂಪೂರ್ಣ ಗೊಂದಲಗಳು ಇತ್ಯರ್ಥಗೊಳ್ಳಲಿದೆ.ಆರ್ಥಿಕ ವಿಚಾರದಲ್ಲಿ ಗೆಲುವು. ಹಳೆ ಆರೋಗ್ಯದ ವಿಷಯ ನೆನಪಿನಲ್ಲಿರಲಿ.ಶುಭ ಸಂಖ್ಯೆ 9.

ಕಟಕ ರಾಶಿ : ಈ ದಿನದ ಗುರುವಾರ ನಿಮ್ಮ ರಾಶಿಗೆ ಅದೃಷ್ಟ ನೀಡಲಿದೆ.ಇಂದು ನೀವು ಹೇಳಿದ್ದೆ ಮಾತು ಮಾಡಿದ್ದೆ ಕೆಲಸ‌.ಇಡಿ ದಿನ ನವೊಲ್ಲಾಸ ಮಾತಿಗೆ ಗೌರವ ಉತ್ತಮ ಆಹಾರ ಸೇವಿಸಲಿದ್ದೀರಿ.ಮನೆಯಲ್ಲಿ ಜಗಳಗಳು ಬಂದಾಗ ತಾಳ್ಮೆ ವಹಿಸಿದರೆ ಎಲ್ಲವೂ ಶುಭ.ಹಣಕಾಸು ಊಡಿಕೆ ಮಾಡುವ ಮುನ್ನ ಎಚ್ಚರ.ಆರೋಗ್ಯ ಸ್ಥಿರ.ಶುಭ ಸಂಖ್ಯೆ 5.

ಸಿಂಹ ರಾಶಿ : ಇಂದಿನಿಂದ ಮೂರು ದಿನಗಳ ಕಾಲ ಏನೋ ಒಂದು ರೀತಿಯ ಯೋಚನೆ ನಿಮ್ಮ ಆರೋಗ್ಯ ಕೆಡಿಸಲಿದೆ.ಹೇಳಿಕೆ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳದೆ.ತಾಳ್ಮೆಯಿಂದ ಇದ್ದರೆ ಕಾರ್ಯ ಜಯ.ಅಪನಂಬಿಕೆ ಬೇಡ.ನಿಮ್ಮನ್ನು ನಂಬಿ ಜೀವನ ಮಾಡಿ.ಹಳೆ ಪ್ರೇಯಸಿ ಇಂದ ತೊಂದರೆ ಆಗಬಹುದು ಎಚ್ಚರ.ಶುಭ ಸಂಖ್ಯೆ 2.

ಕನ್ಯಾ ರಾಶಿ : ಅದೃಷ್ಟ ಎನ್ನುವುದು ಬೆನ್ನ ಹಿಂದೆಯೇ ಬಂದಂತಿದೆ.ಮಾಡುವ ಉದ್ಯೋಗದಲ್ಲಿ ಬಡ್ತಿ‌.ಆಕಸ್ಮಿಕ ಧನಲಾಭದಿಂದ ಸಂತಸಗೊಳ್ಳಲಿದ್ದೀರಿ‌.ಮಾತನಾಡುವ ಮುನ್ನ ಮಾತಿನ ಮೇಲೆ ನಿಗಾ ಇದ್ದರೆ ಉತ್ತಮ.ಚೂಪಾದ ವಸ್ತುಗಳಿಂದ ದೂರವಿರಿ.ಅದ್ಬುತ ಲಾಭಗಳನ್ನು ಇಂದು ನೀವು ಪಡೆಯಲಿದ್ದೀರಿ.ತಾಯಿಯಿಂದ ಶುಭ ಸುದ್ದಿ‌.ಶುಭ ಸಂಖ್ಯೆ 8.

ತುಲಾ ರಾಶಿ : ಮನೆಯಿಂದ ಹೊರ ಹೋಗುವಾಗ ವಸ್ತುಗಳ ಮೇಲೆ ನಿಗಾವಹಿಸಿ.ವಸ್ತು ಕಳೆದುಕೊಳ್ಳುವ ಸಾಧ್ಯತೆ ಇದೆ.ಅಪಾರ ಧನಲಾಭದಿಂದ ಕಾರ್ಯದಲ್ಲಿ ಉಮ್ಮಸ್ಸು.ಇಂದು ನಾಳೆ ಎಂದು ಯೋಚಿಸದೆ.ಎಲ್ಲಾ ಕೆಲಸ ಮಾಡಿ ಮುಗಿಸಿ. ಉತ್ತರ ದಿಕ್ಕಿಗೆ ಇಂದು ಪ್ರಯಾಣ ಮಾಡಿದರೆ ಶುಭ.ನಿಮ್ಮ ಶುಭ ಸಂಖ್ಯೆ 1.

ವೃಶ್ಚಿಕ ರಾಶಿ : ಆಹಾರದ ಕಡೆ ಗಮನ ನೀಡದಿದ್ದರೆ ಆರೋಗ್ಯ ಹಾಗೂ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು.ಕೆಟ್ಟ ಕನಸುಗಳಿಂದ ಬೇಸತ್ತಿದ್ದರೆ ಆಂಜನೇಯನ ಧ್ಯಾನ ಮಾಡಿ.ರಾಜಕೀಯ ರಂಗದಲ್ಲಿ ಏರುಪೇರು. ಸಣ್ಣ ಕೆಲಸಗಾರರಿಗೆ ಇಂದು ಹಣಕಾಸಿನ ಮುಗ್ಗಟ್ಟು ಸುಧಾರಣೆ.ಮನೆಗೆ ಪೀಠೋಪಕರಣಗಳ ಖರೀದಿ ಮಾಡಲಿದ್ದೀರಿ.ಶುಭ ಸಂಖ್ಯೆ 6.

ಧನಸ್ಸು ರಾಶಿ : ಕಾರ್ಯದಲ್ಲಿ ಯಶಸ್ಸು ಸಿಕ್ಕಾಗ ಸಹಾಯ ಪಡೆದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿ.ಮಿತ್ರರು ಶತ್ರುವಾಗುವ ದಿನ.ಅಪಾರ ಧನಸಂಪತ್ತಿನ ಅಹಂಕಾರ ಬೇಡ.ಶಾಶ್ವತವಿಲ್ಲದ ವ್ಯಕ್ತಿಗಳ ಕಡೆ ಗಮನ ಬೇಡ.ತಂದೆ ನುಡಿದಂತೆ ನಡೆಯಿರಿ.ಇಂದು ಹಣಕಾಸನ್ನು ಯಾರಿಗಾದರು ಕೊಡುವ ಮುನ್ನ ಎಚ್ಚರ.ಶುಭ ಸಂಖ್ಯೆ 5.

ಮಕರ ರಾಶಿ : ಇಂದು ನೀವು ಮಾಡುವ ಕೆಲಸದಿಂದಲೇ ಮುಂದಿನ ಜೀವನ ನಿರ್ಧಾರವಾಗಲಿದೆ.ನಿಮ್ಮ ಕೋಪ ನಿಯಂತ್ರಣ ಇದ್ದರೆ ಸುತ್ತಮುತ್ತಲಿನವರಿಗೂ ಒಳ್ಳೆಯದು.ವಾಹನ ಖರೀದಿ ಹಾಗೂ ಮನೆಯಲ್ಲಿ ಕುಟುಂಬ ಸೌಖ್ಯ.ಕಣ್ಣಿನ ಸಮಸ್ಯೆಗಳು ದೂರವಾಗಲಿದೆ‌.ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.ಶುಭ ಸಂಖ್ಯೆ 6.

ಕುಂಭ ರಾಶಿ : ಸ್ವಂತ ಕುಟುಂಬದಿಂದಲೇ ಬೇಸರ,ಮನಸ್ತಾಪ ನೋಡಿ ಸಾಕಾಗಿದ್ದೀರಿ‌.ಮನಸ್ಸನ್ನು ಪ್ರಶಾಂತ ಚಿತ್ತದಿಂದ ಇರಲು ಬಿಟ್ಟು.ಆಧ್ಯಾತ್ಮದ ಕಡೆ ಗಮನ ನೀಡಿ.ಇಂದು ಹೊಸ ವಸ್ತ್ರ ಹಾಗೂ ಹಣಕಾಸು ವಿಚಾರದಲ್ಲಿ ಹೆಚ್ಚು ಓಡಾಟ ನಡೆಸಲಿದ್ದೀರಿ‌.ಚಟಗಳಿಗೆ ದಾಸರಾಗದೆ ಆರೋಗ್ಯ ಗಮನ ನೀಡಿ.ಪ್ರೀತಿಯಲ್ಲಿ ಜಯ.ಶುಭ ಸಂಖ್ಯೆ 3.

ಮೀನ ರಾಶಿ : ಸ್ನೇಹಿತರು ನಿಮಗೆ ಮಾಡುವ ಸಹಾಯ ಇಂದು ಅಪಾರವಾದದ್ದು.ಹಳೆ ಸ್ನೇಹಿತರ ಭೇಟಿ.ಸಂಬಂಧಿಸಿದಕರಿಂದ ಧನ ಸಹಾಯ.ನಿಮ್ಮನ್ನು ಮಾತನಾಡಿಸಲು ಬರುವವರ ಜೊತೆ ಸಭ್ಯದಿಂದ ವರ್ತಿಸಿ.ಹಳೆ ಕೋರ್ಟ ಕೇಸ್ ಗಳು ಇಂದು ಇತ್ಯರ್ಥವಾಗಿ ಸುಖಾಂತ್ಯ.ಮನೆಯಲ್ಲಿ ಇರುವ ಗೃಹಿಣಿಯರು ಕೋಪ ನಿಯಂತ್ರಣ ಮಾಡಬೇಕು.ಶುಭ ಸಂಖ್ಯೆ 1.

By admin

Leave a Reply

Your email address will not be published. Required fields are marked *