ನಸುಕಿನ ಜಾವ 5 ಗಂಟೆಗೆ ಎದ್ದೇಳುವುದರಿಂದ ದೇಹಕ್ಕಾಗುವ ಚಮತ್ಕಾರಗಳು ಏನು ಗೊತ್ತಾ ? - Karnataka's Best News Portal

ನಸುಕಿನ ಜಾವ 5 ಗಂಟೆಗೆ ಎದ್ದೇಳುವುದರಿಂದ ದೇಹಕ್ಕಾಗುವ ಚಮತ್ಕಾರಗಳು ಏನು ಗೊತ್ತಾ ?

ಮುಂಜಾನೆ 5 ಗಂಟೆಗೆ ಏಳುವುದರಿಂದ ಏನೆಲ್ಲಾ ಪ್ರಯೋಜನಗಳು ಆರೋಗ್ಯಕ್ಕೆ ಲಭಿಸುತ್ತದೆ ಗೊತ್ತ…ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ವಿಚಾರ ಏನೆಂದರೆ ಬೆಳಗ್ಗೆ 5:00 ಗಂಟೆ ನಸುಕಿನ ಜಾವ ಮುಂಜಾನೆ ಬೇಗ ಹೇಳುವುದರಿಂದ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ ಅಂತ ನಮ್ಮ ಹಿಂದಿನ ಕಾಲದ ಪೂರ್ವಜರು ಹಿರಿಯರು ಕೂಡ ಇದನ್ನೇ ಪಾಲಿಸಿಕೊಂಡು ಬಂದಿದ್ದರು. ಈ ವಿಚಾರವನ್ನು ಯಾರ ಬಳಿ ಬೇಕಾದರೂ ಕೇಳಬಹುದು ನೀವು ಯಾವುದಾದರೂ ಡಯಟ್ ಗಳನ್ನು ಕೇಳಬಹುದು ಅಥವಾ ಯೋಗ ಪಟುಗಳನ್ನು ಕೇಳಬಹುದು ಅಥವಾ ಜಿಮ್ ಗಳನ್ನು ಕೇಳಬಹುದು ಅಥವಾ ಆಯುರ್ವೇದವರನ್ನು ಕೇಳಬಹುದು ಎಲ್ಲರೂ ಕೂಡ ಹೇಳುವಂತಹ ಒಂದೇ ಒಂದು ಸಲಹೆಯೆಂದರೆ 5:00 ಗಂಟೆಗೆ ತಮ್ಮ ದಿನಚರಿಯನ್ನು ಪ್ರಾರಂಭ ಮಾಡಬೇಕು ಅಂತ. ಈಚಿನ ದಿನಗಳಲ್ಲಿ ವೈದ್ಯರು ಕೂಡ ಇದನ್ನೇ ನಿಮಗೆ ಸಲಹೆಯನ್ನಾಗಿ ನೀಡುತ್ತಾರೆ ಹಾಗಾದರೆ ನಾವು ಮುಂಜಾನೆ ಬೇಗ ಏಳುವುದು ಸರಿಯಾ ಅಥವಾ ತಪ್ಪಾ. ಈ ರೀತಿ ನಾವು ಬೇಗ ಏಳುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮವಾದ ಲಕ್ಷಣಗಳು ದೊರೆಯುತ್ತದೆ ಅಥವಾ ಇದರಿಂದ ಏನಾದರೂ ದುಷ್ಪರಿಣಾಮಗಳು ಉಂಟಾಗಬಹುದೆ. ಈ ರೀತಿ ನಾನಾ ರೀತಿಯಾದಂತಹ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಮೂಡಬಹುದು.

ನಿಮ್ಮ ಎಲ್ಲಾ ಯೋಚನೆಗಳಿಗೂ ಇಂದು ನಾವು ಸಂಕ್ಷಿಪ್ತವಾದ ಉತ್ತರವನ್ನು ನೀಡುತ್ತೇವೆ. ಈ ಒಂದು ವಿಚಾರವನ್ನು ನಾವು ಆದಷ್ಟು ಆಯುರ್ವೇದದ ಶಾಸ್ತ್ರದಲ್ಲಿ ಇರುವಂತೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತೇವೆ. ಸಾಮಾನ್ಯವಾಗಿ ಆಯುರ್ವೇದದಲ್ಲಿ ಮುಂಜಾನೆ ಬೇಗನೆ ಏಳುವುದರಿಂದ ನಮಗೆ ಫ್ರೆಶ್ ಆಗಿ ಇರುವಂತಹ ಗಾಳಿ ದೊರೆಯುತ್ತದೆ ಅಷ್ಟೇ ಅಲ್ಲದೆ ನಮ್ಮ ಮನಸ್ಸು ತುಂಬಾನೇ ಪ್ರಶಾಂತವಾಗಿ ಇರುತ್ತದೆ ನಮ್ಮ ಮೈಂಡ್ ತುಂಬಾ ಫ್ರೆಶ್ ಆಗಿರುತ್ತದೆ ಎಂಬುದನ್ನು ನಾವು ಕೇಳಿರಬಹುದು. ಅಷ್ಟೇ ಅಲ್ಲದೆ ಮುಂಜಾನೆ ಎದ್ದು ನಾವು ದೀರ್ಘ ವಾದಂತಹ ವಾಕ್ ಮಾಡುವುದರಿಂದ ಅಥವಾ ವ್ಯಾಯಾಮ ಮಾಡುವುದರಿಂದ ನಮ್ಮ ದೇಹಕ್ಕೆ ಉಪಯುಕ್ತಕಾರಿ ಯಾಗಿರುತ್ತದೆ. ಅಷ್ಟೇ ಅಲ್ಲದೆ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂಬುವುದನ್ನು ಆಯುರ್ವೇದ ವೈದ್ಯರು ತಿಳಿಸುತ್ತಾರೆ…

See also  ಈ ಯೋಗವನ್ನು ಮಾಡಿದರೆ ಮಂಡಿ ನೋವು ಚಮತ್ಕಾರದಂತೆ ಮಾಯವಾಗುತ್ತೆ.ಇಷ್ಟು ಸುಲಭಾನ ಮಂಡಿ ನೋವು ಹೋಗಿಸೋದು ಅಂತೀರಾ‌.



crossorigin="anonymous">