99 ರಷ್ಟು ಜನರಿಗೆ ಧರ್ಮಸ್ಥಳದ ಗರ್ಭಗುಡಿಯಲ್ಲಿ ಇರುವ ಈ ರಹಸ್ಯಗಳು ಗೊತ್ತೇ ಇಲ್ಲ…ಧರ್ಮ ನೆಲೆಸಿರುವ ಸ್ಥಳವನ್ನು ಧರ್ಮಸ್ಥಳ ಎಂದು ಕರೆಯುತ್ತಾರೆ ಇಲ್ಲಿ ಸಾಕ್ಷಾತ್ ಪರಶಿವನೇ ನೆಲೆಸಿದ್ದಾನೆ ಎಂದು ಭಕ್ತರು ಹೇಳುತ್ತಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಶಿವಭಕ್ತರು ಭೇಟಿ ನೀಡುವಂತಹ ಒಂದು ಪುಣ್ಯಕ್ಷೇತ್ರ ಅಂದರೆ ಅದನ್ನು ಧರ್ಮಸ್ಥಳ ಅಂತನೇ ಹೇಳಬಹುದು. ಶಿವನನ್ನು ಆರಾಧಿಸುವ ಈ ಸ್ಥಳದಲ್ಲಿ ಪರಶಿವನೆ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನವನ್ನು ಪಡೆದರೆ ಜೀವನದಲ್ಲಿ ಧನಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ. ಅಲ್ಲದೆ ಮುಂದಿನ ಜನ್ಮದಲ್ಲಿ ಸಕಾರಾತ್ಮಕ ಯೋಚನೆಗಳೇ ನಮ್ಮಲ್ಲಿ ಮೂಡುತ್ತದೆ ಎಂಬ ಪ್ರತೀತಿಯೂ ಕೂಡ ಇದೆ. ಧರ್ಮಸ್ಥಳ ಎಂದರೆ ಶಿವನನ್ನು ಧಾರ್ಮಿಕವಾಗಿ ಪೂಜೆ ಮಾಡುವಂತಹ ಸ್ಥಳ ಇದಾಗಿದೆ ಅಷ್ಟೇ ಅಲ್ಲದೆ ಇಲ್ಲಿ ಬಂದು ಪೂಜೆ ಮಾಡಿಸಿದಂತಹ ಸರ್ವರ ಕಷ್ಟಗಳು ಕೂಡ ಪರಿಹಾರವಾಗುತ್ತದೆ.

ಕನಾಟಕದಲ್ಲಿ ಇರುವಂತಹ ಅತ್ಯಂತ ಪ್ರಾಚೀನ ದೇವಸ್ಥಾನದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನ ಯಾವ ಕೂಡ ಒಂದು. ಪ್ರಾರಂಭದಲ್ಲಿ ಇದನ್ನು ಜೈನ ಭಂಟರು ಪ್ರಾರಂಭಿಸಿದರು ತದನಂತರ ಇದನ್ನು ಹೆಗ್ಗಡೆ ಮನೆತನದವರು ನಡೆಸಿಕೊಂಡು ಬರುತ್ತಿದ್ದಾರೆ. ವೈಷ್ಣವ ಪೂಜಾರಿಗಳು ಇಲ್ಲಿ ಶಿವನನ್ನು ಪೂಜಿಸುವುದರಿಂದ ಇದು ಶಿವನ ಅಚ್ಚುಮೆಚ್ಚಿನ ಸ್ಥಳ ಎಂಬುದು ಭಕ್ತರ ನಂಬಿಕೆಯಾಗಿದೆ. ಧರ್ಮಸ್ಥಳ ಪುಣ್ಯಕ್ಷೇತ್ರವನ್ನು 800 ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ತುಂಬಾ ಜನ ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ ಅಲ್ಲಿನ ಗರ್ಭಗುಡಿಗೂ ಕೂಡ ಭೇಟಿ ನೀಡುತ್ತಾರೆ ಆದರೆ ಇದರ ಹಿಂದಿನ ನಿಗೂಢದ ವಿಚಾರಗಳು ಎಷ್ಟೋ ಜನರಿಗೆ ಗೊತ್ತಿಲ್ಲ. ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಪ್ರಮುಖ ಸ್ಥಳವಾಗಿದೆ.

By admin

Leave a Reply

Your email address will not be published. Required fields are marked *