ಕೇವಲ ಹತ್ತು ರೂಪಾಯಿ ಸಾಕು ಹೊಸ ರೆಸಿಪಿ ಮಾಡಲು…

ಒಂದು ಬಾಣಲೆಗೆ ಎರಡು ಕಪ್ ನಷ್ಟು ತುಪ್ಪವನ್ನು ಹಾಕಿ ಇದನ್ನು ಬಿಸಿಯಾಗಲು ಬಿಡಬೇಕು ತದನಂತರ ಎರಡು ಪ್ಯಾಕ್ ಪಾರ್ಲೆ-ಜಿ ಬಿಸ್ಕೆಟ್ ಅನ್ನು ಹಾಕಿ ಚೆನ್ನಾಗಿ ಡೀಪ್ ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ಸ್ವಲ್ಪ ಆರಲು ಬಿಡಬೇಕು ಈಗ ಒಂದು ಮಿಕ್ಸಿ ಜಾರಿಗೆ ಬಿಸ್ಕೆಟ್ ಅನ್ನು ಹಾಕಿ ನುಣ್ಣಗೆ ಪೇಸ್ಟ್ ಮಾದರಿಯಲ್ಲಿ ಇದನ್ನು ರುಬ್ಬಿಕೊಳ್ಳಬೇಕು. ಮತ್ತೊಂದು ಕಡೆ ಒಂದು ಬಟ್ಟಲಿಗೆ ಕಾಲು ಕಪ್ ನಷ್ಟು ಹಾಲಿನ ಪುಡಿ ಹಾಗೂ ಕಾಲು ಕಪ್ ಹಾಲನ್ನು ಹಾಕಿ ಇವೆರಡನ್ನು ಮಿಕ್ಸ್ ಮಾಡಿಕೊಳ್ಳಬೇಕು. ಈಗ ಗ್ಯಾಸ್ ಮೇಲೆ ಒಂದು ಪ್ಯಾನ್ ಅನ್ನು ಇಟ್ಟು ಅದಕ್ಕೆ ಒಂದು ಚಿಕ್ಕ ಗ್ಲಾಸ್ ನೀರನ್ನು ಹಾಕಿ ನಂತರ ಅದಕ್ಕೆ ಸಕ್ಕರೆ ಹಾಕಿ ಸಕ್ಕರೆ ಒಂದು ಎಳೆಪಾಕ ಬರುವ ತನಕ ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು.

ತದನಂತರ ಹಾಲಿನ ಪೌಡರ್ ಮತ್ತು ಹಾಲಿನಿಂದ ಮಾಡಿದಂತಹ ಮಿಶ್ರಣವನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಇದಕ್ಕೆ ಎರಡು ತೊಟ್ಟು ಸ್ಟ್ರಾಬೆರಿ ಎಸೆನ್ಶಿಯಲ್ ಹಾಕಬೇಕು ಹಾಲಿನ ಪೌಡರ್ ಸ್ವಲ್ಪ ಗಟ್ಟಿ ಹದಕ್ಕೆ ಬಂದ ನಂತರ ನಾವು ತಯಾರಿಸಿಕೊಂಡಿರುವಂತಹ ಬಿಸ್ಕೇಟ್ ಪೇಸ್ಟ್ ಅನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಇವೆಲ್ಲವೂ ಕೂಡ ಗಟ್ಟಿಯಾದ ನಂತರ ಗ್ಯಾಸ್ ಅನ್ನು ಆಫ್ ಮಾಡಿ ಒಂದು ತಟ್ಟೆಗೆ ಈ ಒಂದು ಮಿಶ್ರಣವನ್ನು ಹಾಕಿಕೊಂಡು ಸ್ಕ್ವಾಯರ್ ಆಕೃತಿಗೆ ಇದನ್ನು ತಟ್ಟಿಕೊಳ್ಳಬೇಕು ನಂತರ ಇದರ ಮೇಲೆ ಸ್ವಲ್ಪ ಬಾದಾಮಿಯನ್ನು ಚಿಕ್ಕದಾಗಿ ಕಟ್ ಮಾಡಿ ಹಾಕಬೇಕು. ತದನಂತರ ಇದನ್ನು ಚಿಕ್ಕ ಚಿಕ್ಕ ಪೀಸ್ ಗಳನ್ನು ಹಾಕಿ ಕಟ್ ಮಾಡಿ ಸೇವಿಸಬಹುದು.

By admin

Leave a Reply

Your email address will not be published. Required fields are marked *