ರೇಷ್ಮೆ ಹುಳುಗಳನ್ನು ಬಾದಿಸುವಂತಹ ಊಜಿ ನೊಣಗಳಿಂದ ರೇಷ್ಮೆಯ ಹುಳುಗಳ ಸಂರಕ್ಷಣಾ ವಿಧಾನ…..

ರೇಷ್ಮೆ ಹುಳುಗಳನ್ನು ಬಾದಿಸುವಂತಹ ಹಲವಾರು ಕೀಟಗಳಲ್ಲಿ ಪ್ರಮುಖವಾಗಿ ಊಜಿ ನೊಣ ಕೂಡ ಒಂದು. ಇದರ ಬಗೆಗಿನ ಒಂದಷ್ಟು ಸಂಕ್ಷಿಪ್ತ ವಿವರಣೆ ಇಲ್ಲಿದೆ ಒಂದು ಹೆಣ್ಣು ಊಜಿ ನೊಣ ಸುಮಾರು 300 ರಿಂದ ನಾಲ್ಕು 400 ಮೊಟ್ಟೆಗಳನ್ನು ಇಡುತ್ತದೆ. ಅಲ್ಲದೆ ಇದು 4 ನೇ ಮತ್ತು 5 ನೇ ಅಂತ ದಲ್ಲಿ ಇರುವಂತಹ ರೇಷ್ಮೆ ಹುಳುಗಳನ್ನು ಆಯ್ಕೆಮಾಡಿಕೊಂಡು ಒಂದು ರೇಷ್ಮೆ ಹುಳುವಿನ ಮೇಲೆ 1 ರಿಂದ 2 ಮೊಟ್ಟೆಗಳನ್ನು ಇಟ್ಟು ತನ್ನ ಜೀವಿತಾವಧಿಯನ್ನು ಪ್ರಾರಂಭಿಸುತ್ತದೆ. ಊಜಿ ನೊಣಗಳ ಮೊಟ್ಟೆಗಳು ಹೊಡೆದು ಮರೆಯಾಗಿ ನಂತರ ರೇಷ್ಮೆಹುಳುಗಳ ದೇಹವನ್ನು ಸೇರಿಕೊಂಡು ರೇಷ್ಮೆಹುಳುಗಳ ಅಂಗಾಂಗಳಾದ ಕೊಬ್ಬಿನ ಅಂಶ, ಪ್ರೊಟೀನ್ ಅಂಶ, ರೇಷ್ಮೆ ಗ್ರಂತಿಗಳು ಎಲ್ಲವನ್ನೂ ಕೊರೆದು ತಿನ್ನಲು ಪ್ರಾರಂಭಿಸುತ್ತದೆ ಇದರಿಂದ ರೇಷ್ಮೆ ಹುಳುಗಳ ಬೆಳವಣಿಗೆ ಕುಂಠಿತವಾಗಿ ಅದರ ಬೆಳವಣಿಗೆ ಮತ್ತು ಗಾತ್ರ ಕಡಿಮೆಯಾಗುತ್ತ ಬರುತ್ತದೆ. ಪ್ರಾರಂಭಿಕ ಹಂತದ ರೇಷ್ಮೆಹುಳುಗಳ ಮೇಲೆ ದಾಳಿ ಮಾಡಿದರೆ ಅಂತಹ ರೇಷ್ಮೆ ಹುಳುಗಳು ಸತ್ತು ಹೋಗುತ್ತದೆ.

ಊಜಿ ನೊಣಗಳಿಂದ ತುತ್ತಾಗಿರುವಂತಹ ರೇಷ್ಮೆ ಹುಳುಗಳಿಂದ ಕಟ್ಟಲ್ಪಟ್ಟ ರೇಷ್ಮೆಗೂಡು ಅಷ್ಟೊಂದು ಯೋಗ್ಯವಲ್ಲ. ಈ ಊಜಿ ನೊಣಗಳಿಂದ ರಕ್ಷಣೆ ಪಡೆಯಲು ಪ್ರವೇಶ ನಿರ್ಬಂಧಿಸಲು ಸಾಕಾಣಿಕೆಯ ಸ್ಥಳಗಳಲ್ಲಿ ನೈಲಾನ್ ಪರದೆಯನ್ನು ಕಟ್ಟಬೇಕಾಗುತ್ತದೆ. ರೇಷ್ಮೆಹುಳುಗಳನ್ನು ಕಟಾವು ಮಾಡಿದ ಬಳಿಕ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಗೋಣಿ ಚೀಲ ಬಳಸಬಾರದು ಬದಲಿಗೆ ಪ್ಲಾಸ್ಟಿಕ್ ಬಳಸುವುದು ಸೂಕ್ತ. ಹಾಗೆಯೇ ಮೂರು ಮತ್ತು ನಾಲ್ಕನೇ ಹಂತದ ಸಂದರ್ಭದಲ್ಲಿ ನೂರು ರೇಷ್ಮೆ ಹುಳುಗಳ ಸಾಗಾಣಿಕೆಯ ವೇಳೆ 10 ರಿಂದ 12 ಮಾತ್ರೆಗಳನ್ನು ನೀರಿಗೆ ಬೆರೆಸಿ ಕಿಟಕಿ ಮತ್ತು ಬಾಗಿಲುಗಳ ಬಳಿ ಇಡುವುದರಿಂದ ಊಜಿ ನೊಣಗಳ ಹಾವಳಿ ತಡೆಗಟ್ಟಲು ಸಹಾಯ ಮಾಡುತ್ತದೆ.

By admin

Leave a Reply

Your email address will not be published. Required fields are marked *