4 ಡಿಸೆಂಬರ್ 2021 ಸೂರ್ಯಗ್ರಹಣ ಈ 4 ರಾಶಿಯವರು ತುಂಬಾನೇ ಜಾಗೃತರಾಗಿರಿ…

ತುಂಬಾ ಜನರು 4ನೇ ತಾರೀಕು ಡಿಸೆಂಬರ್ 2021 ನೇ ಇಸ್ವಿಯಲ್ಲಿ ಕೊನೆಯ ಸೂರ್ಯ ಗ್ರಹಣ ಇದೆ ಅಂತ ಹೇಳುತ್ತಿದ್ದಾರೆ. ತುಂಬಾ ಜನರು ಈ ಗ್ರಹಣದಿಂದ ತೊಂದರೆ ಉಂಟಾಗಬಹುದು ಎಂದು ಎದುರಿತ್ತಿದ್ದಾರೆ ಇನ್ನು ಕೆಲವರು ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಅಸಲಿಗೆ ಈ ಒಂದು ಸೂರ್ಯಗ್ರಹಣದ ಬಗ್ಗೆ ಇರುವಂತಹ ವಿಚಾರವಾದರೂ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಈ ಒಂದು ಸೂರ್ಯಗ್ರಹಣ ಇರುವಂತಹ ದಿನದಲ್ಲಿ ಅಮಾವಾಸ್ಯೆ ಬಂದಿರುವುದು ವಿಶೇಷ ಅಂತಾನೆ ಹೇಳಬಹುದು. ಇನ್ನೂ ಸೂರ್ಯ ಗ್ರಹಣ ಯಾವ ರಾಶಿಯ ಮೇಲೆ ಪ್ರಾಭಾವ ಬೀರಲಿದೆ ಎನ್ನುವುದನ್ನು ನೋಡುವುದಕ್ಕಿಂತ ಮುಂಚೆ ಸೂರ್ಯಗ್ರಹಣದ ಬಗ್ಗೆ ಜನರು ಹೊಂದಿರುವಂತಹ ವಿಚಾರವನ್ನು ತಿಳಿಸುತ್ತೇವೆ. ಕೆಲವರಿಗೆ ಸೂರ್ಯಗ್ರಹಣ ಚಂದ್ರಗ್ರಹಣ ರಾಶಿಗಳು ಮತ್ತು ಭವಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ.

ಸೂರ್ಯನಿಗೆ ಅಡ್ಡವಾಗಿ ರಾಹು-ಕೇತು ಬರುತ್ತದೆ ಇದರಿಂದ ಯಾವುದೇ ರೀತಿಯಾದಂತಹ ಪರಿಣಾಮಗಳು ನಮ್ಮ ಜೀವನದ ಮೇಲೆ ಆಗುವುದಿಲ್ಲ ಅಂತ ಹೇಳುತ್ತಾರೆ. ಆದರೆ ಅಸಲಿಗೆ ಎಲ್ಲದರಲ್ಲೂ ಕೂಡ ಒಂದಲ್ಲ ಒಂದು ಕಾರಣ ಇದೆ ಇರುತ್ತದೆ. ಮತ್ಯ್ಸ ಗ್ರಂಥದ ಪುರಾಣದ ಪ್ರಕಾರ ಸಮುದ್ರ ಮಂಥನ ಮಾಡಿದಾಗ ಅದರಿಂದ ವಿಶೇಷವಾದಂತಹ ವಸ್ತುಗಳು ಆಚೆ ಬರುವುದನ್ನು ನಾವು ಕೇಳಿದ್ದೇವೆ. ಈ ಒಂದು ಸಮಯದಲ್ಲಿ ರಾಹು ಮತ್ತು ಕೇತು ಈ ಎರಡಕ್ಕೂ ಕೂಡ ದೇವತೆಗಳಿಗೆ ನೀಡುವಂತಹ ಸ್ಥಾನವನ್ನು ನೀಡಬೇಕು ಎಂಬ ಬಯಕೆ ಬರುತ್ತದೆ. ಇನ್ನು ಸಮುದ್ರ ಮಂಥನ ಮಾಡುವಾಗ ಅದರಿಂದ ಬಂದಂತಹ ಅಮೃತವನ್ನು ಸ್ವರಭಾನು ಎಂಬ ರಾಕ್ಷಸರು ಸೇವಿಸುತ್ತಾರೆ. ಇದನ್ನು ನೋಡಿದಂತಹ ಮಹಾವಿಷ್ಣು ಕೋಪಗೊಂಡು ತನ್ನ ಚಕ್ರದಿಂದ ಸ್ವರಭಾನುವಿನ ಶಿರಸ್ಸು ಛೇದನ ಮಾಡುತ್ತಾರೆ ಇದರಿಂದ ರಾಹು ಮತ್ತು ಕೇತು ಎಂಬುದು ಸೃಷ್ಟಿಯಾಗುತ್ತದೆ.

By admin

Leave a Reply

Your email address will not be published. Required fields are marked *