ನಟ ಶಂಕರ್ ನಾಗ್ ಸಮಾಧಿ ಇಲ್ವ ? ಇದ್ರೆ ಎಲ್ಲಿದೆ…ಶಂಕರ್ ನಾಗ್ ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಕೂಡ ರೋಮಾಂಚನವಾಗುತ್ತದೆ ಈ ಒಂದು ಹೆಸರಿನಲ್ಲಿ ಅಂತಹದೊಂದು ಶಕ್ತಿ ಇದೆ. ಆ ಕಾಲದಲ್ಲಿ ಶಂಕರ್ ನಾಗ್ ಅವರ ಯೋಚನೆಯ ಪರಿ ಅಂತಹದ್ದು ಇದೇ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಕೂಡ ಒಂದು ಹತಾಶವಾದ ಸಂದರ್ಭ ಬರುತ್ತದೆ. ಶಂಕರ್ ನಾಗ್ ಎಂಬ ಒಬ್ಬ ಅದ್ಭುತವಾದಂತಹ ವ್ಯಕ್ತಿ ಈಗ ಇದ್ದಿದ್ದರೆ ಅದೆಂತಹಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿದ್ದವೋ, ಅದೆಂತಹ ಸಿನಿಮಾಗಳು ಬರುತ್ತಿದ್ದವು ಅಂತ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸರ್ಕಾರಕ್ಕೆ ಆಗಲೇ ಸಾಕಷ್ಟು ಸಲಹೆಗಳನ್ನು ಕೊಟ್ಟಿದ್ದರು ಅಷ್ಟೇ ಅಲ್ಲದೆ ಈಗ ನಾವೇನು ನೋಡುತ್ತಿದ್ದೇವೆ ಮೆಟ್ರೋ.

ಆ ಕನಸನ್ನು ಶಂಕರನಾಗ್ ಅವರು ಆಗಲೇ ಕಂಡಿದ್ದರು ಅಷ್ಟೇ ಅಲ್ಲದೆ ನಂದಿ ಹಿಲ್ಸ್ ಗೆ ರೋಫ್ ಹಾಕಬೇಕು ಅದರ ಮೂಲಕ ಕೇಬಲ್ ಚಾರ್ಜ್ ಪರಿಚಯಿಸಬೇಕು ಎಂಬ ಆಸೆಯನ್ನು ಹೊಂದಿದ್ದರು. ಆಗಲೇ ಸರ್ಕಾರಕ್ಕೆ ಈ ವಿಚಾರಗಳ ಬಗ್ಗೆ ವರದಿಯನ್ನು ಕೂಡ ಕೊಟ್ಟಿದ್ದರು ಅಂಡರ್ ವಾಟರ್ ಶೂಟಿಂಗ್ ಹೀಗೆ ನಾನಾ ರೀತಿಯಾದಂತಹ ವಿಶಿಷ್ಟವಾದ ಕೌಶಲ್ಯವನ್ನು ಶಂಕರ್ ನಾಗ್ ಅವರು ಹೊಂದಿದ್ದರು. ಇದೇ ರೀತಿ ಸಿನಿಮಾರಂಗ ಮತ್ತು ಸಾರ್ವಜನಿಕ ಕ್ಷೇತ್ರದಲ್ಲೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಂತಹ ವ್ಯಕ್ತಿ. ದಕ್ಷಿಣ ಭಾರತದವರೆಗೆ ಶಂಕರ್ ನಾಗ್ ಯಾರು ಎಂದರೆ ತುಂಬಾ ಚೆನ್ನಾಗಿ ಗೊತ್ತಾಗುತ್ತದೆ. ಆದರೆ ಉತ್ತರ ಭಾರತದವರಿಗೆ ಶಂಕರ್ ನಾಗ್ ಅಂದರೆ ಅಷ್ಟಾಗಿ ಗೊತ್ತಾಗುವುದಿಲ್ಲ ಆದರೆ ಮಾಲ್ಗುಡಿ ಡೇಸ್ ಗೊತ್ತಾ ಅಂತ ಕೇಳಿದರೆ ಸಾಕು ಎಲ್ಲರೂ ಗೊತ್ತು ಅಂತ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಇವರು ಆ ಕಾಲದಲ್ಲಿ ಈ ಸಿನಿಮಾದ ಮೂಲಕ ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದರು.

By admin

Leave a Reply

Your email address will not be published. Required fields are marked *