ಕನ್ನಡ ನೆಲ ಜಲ ವಿಚಾರದಲ್ಲಿ ಯಾವ ಪಾರ್ಟಿ ಅಂತ ನೋಡಬಾರದು ಎಲ್ಲರೂ ಒಗ್ಗಟ್ಟಾಗಿರಬೇಕು…ಕಳೆದ ನಾಲ್ಕೈದು ದಿನಗಳಿಂದಲೂ ರಾಜ್ಯದಲ್ಲಿ ಭಾರಿ ಅನಾಹುತ ನಡೆಯುತ್ತಿದೆ ಅಂತಾನೆ ಹೇಳಬಹುದು ಬೆಳಗಾವಿಯಲ್ಲಿ ನಮ್ಮ ರಾಜ್ಯದ ಬಾವುಟವನ್ನು ಶಿವಸೇನೆ ಮುಖ್ಯಸ್ಥರು ಸುಟ್ಟಿರುವಂತಹ ವಿಚಾರ ಇದೀಗ ತುಂಬಾನೇ ಚರ್ಚೆಯಲ್ಲಿದೆ. ನಮ್ಮ ರಾಜ್ಯದಲ್ಲಿ ಇರುವಂತಹ ನಮ್ಮ ಜನರೇ ಈ ರೀತಿಯಾದಂತಹ ಕೃತ್ಯವನ್ನು ಎಸಗಿರುವುದು ನಿಜಕ್ಕೂ ಕೂಡ ವಿಪರ್ಯಾಸ ಅಂತನೇ ಹೇಳಬಹುದು. ಈ ವಿಚಾರವಾಗಿ ಇದೀಗ ನಮ್ಮ ಕನ್ನಡಪರ ಹೋರಾಟಗಾರರು ಹಾಗೂ ನಮ್ಮ ನಟ-ನಟಿಯರು ಹಾಗೂ ನಮ್ಮ ರಾಜ್ಯದ ಸರ್ಕಾರ ಎಲ್ಲರೂ ಕೂಡ ಒಂದು ವಿಚಾರವಾಗಿ ಹೋರಾಟ ನಡೆಸಬೇಕಾಗಿದೆ. ಅಷ್ಟೇ ಅಲ್ಲದೆ ನಮ್ಮ ರಾಜ್ಯದಲ್ಲಿದ್ದು ನಮ್ಮ ರಾಜ್ಯದ ನೀರನ್ನು ಕುಡಿದು ನಮಗೆ ಈ ರೀತಿ ದ್ರೋಹವನ್ನು ಎಸಗಿರುವುದು ನಿಜಕ್ಕೂ ಕೂಡ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾನೆ ಹೇಳಬಹುದು. ಹಾಗಾಗಿ ಇಂತಹ ವ್ಯಕ್ತಿಗಳು ನಮ್ಮ ರಾಜ್ಯದಲ್ಲಿ ಇರುವುದಕ್ಕೆ ಯೋಗ್ಯವಲ್ಲ ಇಂತಹ ಜನರಿಗೆ ತಕ್ಕ ಶಿಕ್ಷೆಯಾಗಬೇಕು.

ಅಷ್ಟೇ ಅಲ್ಲದೆ ಈ ರೀತಿ ಕೃತ್ಯವನ್ನು ಮಾಡಿರುವಂತಹ ಜನರನ್ನು ನಮ್ಮ ರಾಜ್ಯದಿಂದ ಗಡಿಪಾರು ಮಾಡಬೇಕು ಏಕೆಂದರೆ ಇವರಿಗೆ ನಮ್ಮ ರಾಜ್ಯದಲ್ಲಿ ವಾಸಿಸುವಂತಹ ಯಾವುದೇ ರೀತಿಯಾದಂತಹ ಯೋಗ್ಯತೆ ಇರುವುದಿಲ್ಲ. ಇನ್ನೂ ವಿಚಾರಕ್ಕೆ ಬರುವುದಾದರೆ ನಮ್ಮ ನಾಡು, ನುಡಿ, ಜಲ, ರಾಜ್ಯ ರಕ್ಷಣೆ ಎಂಬ ವಿಚಾರಕ್ಕೆ ಬರುವುದಾದರೆ ನಮ್ಮ ರಾಜಕೀಯ ಪಕ್ಷದವರು ಎಲ್ಲರೂ ಒಟ್ಟಾಗಿ ನಿಲ್ಲಬೇಕು. ಯಾವುದೇ ರೀತಿಯಾದಂತಹ ರಾಜಕೀಯವನ್ನು ಇಲ್ಲಿ ಮಾಡಬಾರದು ಎಲ್ಲಾ ಪಕ್ಷದವರು ಒಟ್ಟಾಗಿ ಸೇರಿ ಈ ರೀತಿಯಾದಂತಹ ಕೃತಿಯನ್ನು ಮಾಡಿರುವಂತಹ ಜನರಿಗೆ ಸರಿಯಾದ ಪಾಠವನ್ನು ಕಲಿಸಬೇಕು. ಇಲ್ಲದಿದ್ದರೆ ನಮ್ಮ ರಾಜ್ಯಕ್ಕೆ ನಾವೇ ಅವಮಾನ ಮಾಡಿದಂತೆ ಆಗುತ್ತದೆ ಎಂದು ಸಿದ್ದರಾಮಯ್ಯ ಅವರು ಪಾರ್ಲಿಮೆಂಟ್ ನಲ್ಲಿ ಮಾತನಾಡಿದರು.

By admin

Leave a Reply

Your email address will not be published. Required fields are marked *