ಮೋಷನ್ ಪ್ರಾಬ್ಲಮ್ ನಿಮ್ಮ ಜೀವ ಹಿಂಡುವ ತೊಂದರೆ ಇದು, ನಿಮಗೆ ಈ ರೀತಿ ಮಲಬದ್ಧತೆ ಸಮಸ್ಯೆ ಬರಲು ಕಾರಣವೇನು ಮತ್ತು ಇದಕ್ಕೆ ಪರಿಹಾರ…ಇತ್ತೀಚಿನ ದಿನದಲ್ಲಿ ಎಲ್ಲರೂ ಕೂಡ ಮಲಬದ್ಧತೆ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ ಇದು ಹೇಳಿದಷ್ಟು ಸುಲಭವಾದಂತಹ ಸಮಸ್ಯೆ ಅಲ್ಲ ಇದನ್ನು ಅನುಭವಿಸುವವರಿಗೆ ಮಾತ್ರ ಅದರ ಕಷ್ಟ ಮತ್ತು ನೋವು ಏನು ಎಂಬುದು ಗೊತ್ತಾಗುತ್ತದೆ. ಹಾಗಾಗಿ ಇಂದು ಈ ಮಲಬದ್ಧತೆ ಸಮಸ್ಯೆಗೆ ಕಾರಣ ಏನು ಮತ್ತು ಪರಿಹಾರ ಏನು ಎಂಬುದನ್ನು ತಿಳಿದುಕೊಳ್ಳೋಣ. ನೀವು ನಿಮ್ಮ ದೇಹಸ್ಥಿತಿಯ ಬಗ್ಗೆ ಕೆಲವೊಮ್ಮೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಸಣ್ಣಕರುಳು ಸುಮಾರು ಆರು ಮೀಟರುಗಳಷ್ಟು ಉದ್ದ ಇರುತ್ತದೆ. ಈ ಒಂದು ಸಣ್ಣ ಕರುಳು ಯಾವಾಗಲೂ ಕೂಡ ನೀರಿನ ಅಂಶದಿಂದ ಕೂಡಿರುತ್ತದೆ. ನಿಮ್ಮ ದೇಹದ ದೊಡ್ಡಕರಳು ಯಾವಾಗಲೂ ನಿಮ್ಮ ಹೊಟ್ಟೆಯ ಕೆಳ ಭಾಗದ ಬಲಭಾಗದಿಂದ ಪ್ರಾರಂಭವಾಗುತ್ತದೆ.

ಸಾಮಾನ್ಯವಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಏನು ಕೂಡ ಸೇವನೆ ಮಾಡುವುದಿಲ್ಲ ಇದರಿಂದಲೂ ಕೂಡ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಸಾಧ್ಯವಾದರೆ ಬೆಳಗ್ಗೆ ಎದ್ದ ಕೂಡಲೇ ಸ್ವಲ್ಪ ಬಿಸಿ ನೀರು ಅಥವಾ ಕಾಫಿ, ಹಾಲು ಯಾವುದಾದರೂ ಒಂದನ್ನು ಸೇವನೆ ಮಾಡಿ. ಈ ರೀತಿ ಸೇವನೆ ಮಾಡುವುದರಿಂದ ನಿಮ್ಮ ಮಲಬದ್ಧತೆ ಪ್ರಾಬ್ಲಮ್ ನಿವಾರಣೆಯಾಗುತ್ತದೆ ಇದನ್ನು ಒಂದು ನೀವು ಉದಾಹರಣೆ ಮೂಲಕ ನೋಡಬಹುದು. ಹೌದು ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ ಏಕೆಂದರೆ ಅವರು ಬೆಳಿಗ್ಗೆ ಎದ್ದ ಕೂಡಲೇ ತಾಯಿಯ ಎದೆಹಾಲನ್ನು ಕುಡಿಯುತ್ತಾರೆ. ಈ ರೀತಿ ಕುಡಿಯುವುದರಿಂದ ಹಾಲು ಕುಡಿದ ತಕ್ಷಣ ಅವರ ಕರುಳಿನಲ್ಲಿರುವ ಮೋಷಮ್ ಹೊರ ಬರುವುದಕ್ಕೆ ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ

By admin

Leave a Reply

Your email address will not be published. Required fields are marked *