ನಟ ಉಪೇಂದ್ರ ಅವರನ್ನು ನಿರ್ದೇಶನದಿಂದ 10 ವರ್ಷ ಬ್ಯಾನ್ ಮಾಡಲಾಗಿತ್ತು ಈ ರೋಚಕ ಮಾಹಿತಿಯನ್ನು ನೋಡಿ…ಕನ್ನಡ ಇಂಡಸ್ಟ್ರಿಯ ನಿಜವಾದ ಕನಸುಗಾರ ಅಂದರೆ ಅದನ್ನು ಉಪೇಂದ್ರ ಅವರು ಅಂತನೇ ಹೇಳಬಹುದು ಏಕೆಂದರೆ ಇವರು ಕಂಡಂತಹ ಕನಸನ್ನು ಸ್ಕ್ರೀನ್ ಮೇಲೆ ಅದೇ ರೀತಿಯಾಗಿ ಮೂಡಿಸುವ ಮುಖಾಂತರ ನನಸು ಮಾಡಿಕೊಂಡ ವ್ಯಕ್ತಿ. ಬ್ಯಾಗ್ರೌಂಡ್ ಇದ್ದಂತಹ ವ್ಯಕ್ತಿಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುವುದು ದೊಡ್ಡ ಮಾತೇನಲ್ಲ. ಆದರೆ ಯಾವುದೇ ರೀತಿಯಾದಂತಹ ಬ್ಯಾಗ್ರೌಂಡ್ ಇಲ್ಲದೆ ಚಲನ ಚಿತ್ರದ ಹಿನ್ನೆಲೆಯಿಲ್ಲದೆ ಸ್ವಂತ ಪರಿಶ್ರಮದಿಂದ ಸಿನಿಮಾ ರಂಗದಲ್ಲಿ ಹೆಸರು ಮಾಡಬೇಕು ಅಂದರೆ ತುಂಬಾನೇ ಕಷ್ಟ ಅನುಭವಿಸಬೇಕು. ಏಕೆಂದರೆ ನಟ ಉಪೇಂದ್ರ ಅವರು ಬಹಳ ಬಡತನದಿಂದ ಬೆಳೆದಂತಹ ವ್ಯಕ್ತಿ. ಯಾವುದೇ ರೀತಿಯಾದಂತಹ ಹಿನ್ನೆಲೆಯಿಲ್ಲದೆ ತುಂಬಾ ಕಷ್ಟಪಟ್ಟು ಶ್ರಮ ಜೀವನ ವಹಿಸಿ ಬೆಳೆದಂತಹ ವ್ಯಕ್ತಿ. ಇನ್ನೂ ವಿಚಾರಕ್ಕೆ ಬರುವುದಾದರೆ ನಟ ಉಪೇಂದ್ರ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಹತ್ತು ವರ್ಷ ಬ್ಯಾನ್ ಮಾಡಲಾಗಿತ್ತು ಎಂಬ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿತ್ತು.

ನಟ ಉಪೇಂದ್ರ ಅವರನ್ನು ಹಂತ ಹಂತವಾಗಿ ತುಳಿಯುವಂತಹ ಪ್ರಯತ್ನ ಚಿತ್ರರಂಗದಲ್ಲಿ ಇತ್ತು ವಿಶೇಷವೇನೆಂದರೆ ಉಪೇಂದ್ರ ಅವರನ್ನು ತುಳಿಯುವುದಕ್ಕೆ ಒಬ್ಬ ಮಾಜಿ ಸಿಎಂ ಅವರೇ ಖುದ್ದಾಗಿ ಉಪೇಂದ್ರ ಅವರ ಜೀವನದಲ್ಲಿ ಇದ್ದರು ಎಂಬುದು ತುಂಬಾನೇ ವಿಶೇಷ ಅಂತನೇ ಹೇಳಬಹುದು. ಇದರಿಂದ ತಿಳಿಯುತ್ತದೆ ನಟ ಉಪೇಂದ್ರ ಅವರು ಆ ಕಾಲದಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದರೂ ಅಂತ. ನಟ ಉಪೇಂದ್ರ ಅವರು ಕುಂದಾಪುರದವರು ಆಗಿದ್ದರೂ ಕೂಡ ಮೂಲತಃ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಬೆಳೆದಂತಹ ವ್ಯಕ್ತಿ ಅಲ್ಲಿಯೇ ತಮ್ಮ ಜೀವನವನ್ನು ಕಳೆದರು ಅಂತ ಹೇಳಿದರೂ ಕೂಡ ತಪ್ಪಾಗಲಾರದು.

By admin

Leave a Reply

Your email address will not be published. Required fields are marked *