ಅಂದು ಅಪ್ಪು ಹೇಳಿದ ಮಾತು ಇಂದು ನಿಜ ಅನಿಸುತ್ತಿದೆ…ಅಪ್ಪು ಅಮರ ಅವರು ನಮ್ಮನ್ನು ಅಗಲಿ ಎರಡು ತಿಂಗಳುಗಳ ಕಾಲ ಆಗಿದ್ದರೂ ಕೂಡ ಅವರು ಹೇಳಿರುವಂತಹ ಮಾತು ಇಂದಿಗೂ ಕೂಡ ನಿಜವಾಗುತ್ತಿದೆ ಅಂತ ಹೇಳಿದರೆ ತಪ್ಪಾಗಲಾರದು. ಕಳೆದ ಎರಡು ವರ್ಷಗಳಿಂದ ನಾವೆಲ್ಲರೂ ಕೂಡ ಕೊರೋನಾ ಎಂಬ ರೋಗದಿಂದ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದೇವೆ. ಅವೆಲ್ಲವೂ ಮುಗಿಯಿತು ಅನ್ನುವಷ್ಟರ ಒಳಗೆ ಇದೀಗ ಮೂರನೇ ಅಲೆ ಪ್ರಾರಂಭವಾಗಿದೆ ಈ 3 ನೇ ಅಲೆಯನ್ನು ಯಾವ ರೀತಿಯ ನಿಭಾಯಿಸಬೇಕು ಎಂಬುದನ್ನು ಅಪ್ಪು ಅವರು ಅವತ್ತು ಹೇಳಿದ ಮಾತುಗಳನ್ನು ಕೇಳಿದರೆ ನಿಜಕ್ಕೂ ಸತ್ಯ ಅನಿಸುತ್ತದೆ. ಅಷ್ಟೇ ಅಲ್ಲದೆ ಈ ವ್ಯಕ್ತಿ ಇಂದು ಇಲ್ಲ ಎಂಬುದನ್ನು ನೆನಪಿಸಿಕೊಂಡರೇ ತುಂಬಾನೇ ದುಃಖವಾಗುತ್ತದೆ. ಆದರೂ ಕೂಡ ಅಪ್ಪು ಅವರು ಹೇಳಿದಂತಹ ಮಾತುಗಳನ್ನು ನಾವು ಚಾಚುತಪ್ಪದೇ ಪಾಲನೆ ಮಾಡಿದರೆ ಈ ಒಂದು ಕೋರೋನಾದ ವಿರುದ್ಧ ನಾವು ಹೋರಾಡಬಹುದಾಗಿದೆ.

ಕಳೆದ ವರ್ಷ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ಅವರ ಸಮಾಧಿಯ ಬಳಿಗೆ ಬಂದ ಅಪ್ಪು ಅವರು ಪೂಜೆಯನ್ನು ಸಲ್ಲಿಸಿದರು ಇದೇ ವೇಳೆಗೆ ಮಾಧ್ಯಮ ಮಿತ್ರರು ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಈ ಸಮಯದಲ್ಲಿ ಅವರು ಕೊರೋನಾದ ಬಗ್ಗೆ ಕೆಲವೊಂದಿಷ್ಟು ಜಾಗೃತಿ ಮಾಹಿತಿಯನ್ನು ಹೇಳಿದರು ಅದೇನೆಂದರೆ. ನಾವು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಇತ್ತೀಚಿನ ದಿನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ಇದ್ದರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಷ್ಟೇ ಅಲ್ಲದೆ ಸ್ಯಾನಿಟೈಸರ್ ಉಪಯೋಗಿಸಬೇಕು. ನಾವು ನಮ್ಮ ಜೀವದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು ಹಾಗಾಗಿ ಯಾವುದೇ ರೀತಿಯಾದಂತಹ ಲಕ್ಷಣ ಕಂಡುಬಂದರೂ ಕೂಡ ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಅಷ್ಟೇ ಅಲ್ಲದೆ ಮನೆಯಲ್ಲಿಯೇ ಕೆಲವೊಂದಷ್ಟು ವೈದ್ಯಕೀಯ ಟೆಸ್ಟ್ ಗಳನ್ನು ಮಾಡಿಕೊಳ್ಳುವುದು ಉತ್ತಮ ಎಂಬ ಸಲಹೆಯನ್ನೂ ನೀಡಿದರು.

By admin

Leave a Reply

Your email address will not be published. Required fields are marked *