RTO ಅಧಿಕಾರಿ ಆಗುವುದು ಹೇಗೆ ? RTO ಅಂದರೇನು ವಿಧ್ಯಾರ್ಹತೆ ಪರೀಕ್ಷೆ ವಿಧಾನ - Karnataka's Best News Portal

RTO ಅಧಿಕಾರಿ ಆಗುವುದು ಹೇಗೆ ? RTO ಅಂದರೇನು ವಿಧ್ಯಾರ್ಹತೆ ಪರೀಕ್ಷೆ ವಿಧಾನ

RTO ಅಧಿಕಾರಿ ಆಗುವುದು ಹೇಗೆ, ಈ ಒಂದು ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಏನೆಲ್ಲಾ ಅರ್ಹತೆಯನ್ನು ಹೊಂದಿರಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ.ಮೊದಲನೇದಾಗಿ ನೀವು ಆರ್.ಟಿ.ಓ ಅಧಿಕಾರಿ ಆಗಬೇಕು ಅಂದರೆ ಆರ್.ಟಿ.ಓ ಬಗ್ಗೆ ಸಂಪೂರ್ಣವಾದ ವಿವರಣೆಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಆರ್.ಟಿ.ಓ ಅಂದರೆ ರಿಜೀನಲ್ ಟ್ರಾನ್ಸ್ಪೋರ್ಟ್ ಆಫೀಸರ್ ಎಂಬ ಅರ್ಥವನ್ನು ಇದು ಸೂಚಿಸುತ್ತದೆ. ಕನ್ನಡದಲ್ಲಿ ಹೇಳುವುದಾದರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂಬ ಅರ್ಥವನ್ನು ಸೂಚಿಸುತ್ತದೆ. ಇನ್ನೂ ಆರ್.ಟಿ.ಓ ಕೆಲಸ ನಿಮಗೆ ಕರ್ನಾಟಕ ಲೋಕಾಸೇವಾ ಯೋಗದಿಂದ ನಿಮಗೆ ಈ ಒಂದು ಕೆಲಸಕ್ಕೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ಇನ್ನೂ ಈ ಒಂದು ಆರ್.ಟಿ.ಓ ಆಫೀಸ್ ನಲ್ಲಿ ಅಧಿಕಾರಿಗಳ ಮುಖ್ಯ ಕೆಲಸ ಏನಾಗಿರುತ್ತದೆ ಅಂದರೆ. ವಾಹನಗಳ ರಿಜಿಸ್ಟ್ರೇಷನ್ ಮಾಡುವುದು ಹಾಗೂ ವಾಹನಗಳಿಗೆ ಲೈಸೆನ್ಸನ್ನು ನೀಡುವುದು ಹಾಗೂ ಇನ್ಸೂರೆನ್ಸ್ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನೋಡುವುದು. ವಾಹನಗಳಿಂದ ಪಲ್ಯೂಷನ್ ಆಗುತ್ತದೆಯೋ ಇಲ್ಲವೋ ಎಂಬುದನ್ನು ಟೆಸ್ಟ್ ಮಾಡುವುದು.

ನಾವು ಮೇಲೆ ತಿಳಿಸಿರುವಂತಹ ನಾಲ್ಕು ವಿಧಾನವನ್ನು ಆರ್.ಟಿ.ಓ ಅಧಿಕಾರಿಗಳು ಮಾಡಬೇಕಾಗುತ್ತದೆ. ಇನ್ನೂ ನೀವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರ ಏನೆಂದರೆ ನೀವು ಆರ್.ಟಿ.ಓ ಹುದ್ದೆಗೆ ನೇರವಾಗಿ ಅರ್ಜಿಯನ್ನು ಸಲ್ಲಿಸಲು ಆಗುವುದಿಲ್ಲ. ಈ ಒಂದು ಆರ್ ಟಿ ಓ ಅಧಿಕಾರವನ್ನು ಅಥವಾ ಹುದ್ದೆಯನ್ನು ನೀವು ಪಡೆಯಬೇಕಾದರೆ ಮೊದಲು ಅಸಿಸ್ಟೆಂಟ್ ರೀಜಿನಲ್ ಟ್ರಾನ್ಸ್ಪೋರ್ಟ್ ಆಫೀಸರ್ ಹುದ್ದೆಯನ್ನು ಪಡೆದುಕೊಳ್ಳ ಬೇಕಾಗಿರುತ್ತದೆ. ಈ ಒಂದು ಹುದ್ದೆಯಿಂದ ಪ್ರಮೋಷನ್ ಪಡೆದುಕೊಂಡ ನಂತರ ನಿಮಗೆ ಆರ್.ಟಿ.ಓ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಗುತ್ತದೆ. ಇನ್ನೂ ಆರ್.ಟಿ.ಓ ಹುದ್ದೆಯಲ್ಲಿ ಮೂರು ಬಗೆಯ ಹುದ್ದೆಗಳನ್ನು ನೀವು ನೋಡಬೇಕಾಗುತ್ತದೆ ಒಂದು ಗುಮಾಸ್ತ ಹುದ್ದೆ ಇನ್ನೊಂದು ಅಸಿಸ್ಟೆಂಟ್ ಇಂಜಿನಿಯರಿಂಗ್ ಹುದ್ದೆ ಮತ್ತೊಂದು ನ್ಯಾಯಾಂಗ ಸೇವೆ ಹುದ್ದೆ.

See also  ಮಾರ್ಚ್ 31 ರ ಒಳಗೆ ಪ್ರತಿಯೊಬ್ಬರೂ ಮತ್ತೆ ಈ ದಾಖಲೆ ಸಲ್ಲಿಸಬೇಕು.. ಇಲ್ಲ ಅಂದರೆ 2000 ಹಣ ಬರೋದಿಲ್ಲ..

WhatsApp Group Join Now
Telegram Group Join Now
[irp]


crossorigin="anonymous">