ಲಾಕ್ ಡೌನ್ ಆಗುತ್ತದೆ ಅಂತ ಭಯಪಡಬೇಡಿ…
ಕಳೆದ ಎರಡು ವರ್ಷಗಳಿಂದಲೂ ಕೂಡ ಜಗತ್ತಿನಾದ್ಯಂತ ಎಲ್ಲಾ ದೇಶಗಳು ಕೂಡ ಕೋರೋನಾ ಎಂಬ ರೋಗದಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಇನ್ನೇನು ಸಂಕಷ್ಟಗಳೆಲ್ಲ ಮುಗಿಯಿತು ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಅಂತ ಅಂದು ಕೊಂಡಿದ್ದಂತಹ ಸಾರ್ವಜನಿಕರಿಗೆ ಇದೀಗ ಮತ್ತೆ ಬರಸಿಡಿಲು ಬಡಿದಂತಾಗಿದೆ. ಹೌದು ಸದ್ದಿಲ್ಲದೆ ಇದ್ದ ಕೊರೋನಾ ಇದೀಗ ತನ್ನ ತಾಂಡವವನ್ನು ಮತ್ತೆ ಪ್ರಾರಂಭ ಮಾಡಿದೆ ಅಂತಾನೆ ಹೇಳಬಹುದು. ಕಳೆದ ಎರಡು ವರ್ಷಗಳಿಂದ ಕೇವಲ ಕೊರೋನ ಎಂಬ ಹೆಸರನ್ನು ಮಾತ್ರ ಹೇಳುತ್ತಿದ್ದೆವು ಆದರೆ ಇದೀಗ ಕೊರೋನಾದ ಹಲವಾರು ರೂಪಾಂತರ ತಳಿಗಳು ಬಂದಿದೆ ಎಂಬ ಮಾಹಿತಿಗಳು ಈಗಾಗಲೇ ದೊರೆತಿದೆ. ಅಷ್ಟೇ ಅಲ್ಲದೆ ಒಮಿಕ್ರೋನ್ ಎಂಬ ವೈರಸ್ ಕೂಡ ಇದೀಗ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಎರಡು ಡೋಸ್ ಲಸಿಕೆ ಪಡೆದಿದ್ದರೂ ಕೂಡ ಕೋರೋನಾ ಬರುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.

ಇವೆಲ್ಲವನ್ನು ನೋಡಿದಂತಹ ಜನ ಮತ್ತೆ ಭಯ ಭೀತರಾಗುತ್ತಾರೆ ಏಕೆಂದರೆ ಮತ್ತೊಮ್ಮೆ ಕಳೆದ ವರ್ಷದಂತೆ ಲಾಕ್ಡೌನ್ ಮಾಡಬಹುದು ಅಂತ. ಲಾಕ್ ಡೌನ್ ಮಾಡುವುದರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗುತ್ತದೆ ಎಂಬ ಕಾತುರ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಈಗಾಗಲೇ ಎಲ್ಲಾ ಕಡೆಯಲ್ಲೂ ಕೂಡ ವೀಕೆಂಡ್ ಕರ್ಫ್ಯೂ ಗಳನ್ನು ವಿಧಿಸಲಾಗಿದೆ. ಈ ಕರ್ಫ್ಯೂ ಗಳನ್ನು ರದ್ದುಗೊಳಿಸಿ ಪೂರ್ಣಪ್ರಮಾಣದ ಲಾಕ್ಡೌನ್ ಮಾಡಿದರೆ ನಮ್ಮ ಜೀವನದ ಸ್ಥಿತಿ ಹೇಗಿರಬಹುದು ಅಂತ ಮಧ್ಯಮವರ್ಗದ ಹಾಗೂ ಸಾಮಾನ್ಯ ವರ್ಗದ ಬಡವರ್ಗದ ಜನರು ತುಂಬಾನೇ ಯೋಚನೆ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಯಾವ ನಿರ್ಧಾರವನ್ನೂ ಕೈಗೊಳ್ಳುತ್ತಾರೆ ಎಂಬುದು ಈಗ ನಿಜಕ್ಕೂ ಕೂಡ ಒಂದು ಯಕ್ಷ ಪ್ರಶ್ನೆಯಾಗಿದೆ. ಈ ಎಲ್ಲಾ ಅನುಮಾನಗಳಿಗೂ ಹಾಗೂ ಗೊಂದಲಗಳಿಗೂ ಇದೀಗ ಸಚಿವರು ಉತ್ತರ ನೀಡುತ್ತಿದ್ದಾರೆ ಅದೇನೆಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ.

By admin

Leave a Reply

Your email address will not be published. Required fields are marked *