ನಿಮ್ಮ ಕಿವಿ ತೂತು ದೊಡ್ಡದು ಆಗಿದೆಯಾ ಕೇವಲ 1 ನಿಮಿಷದಲ್ಲಿ ಸಣ್ಣ ಮಾಡಬೇಕಾ, ಹಾಗಾದರೆ ಈ ಸರಳ ಉಪಾಯ ಮಾಡಿ.ಇತ್ತೀಚಿನ ದಿನದಲ್ಲಿ ಅತಿ ಭಾರವಾದ ಇಯರಿಂಗ್ಸ್ ಗಳು ಧರಿಸುವುದರಿಂದ ಅವುಗಳಿಂದ ನಮ್ಮ ಕಿವಿಯ ರಂಧ್ರ ದೊಡ್ಡದಾಗಿ ನಮ್ಮ ಕಿವಿ ಜೋತು ಬೀಳುವುದನ್ನು ನಾವು ನೋಡಬಹುದಾಗಿದೆ. ಈ ರೀತಿ ಆದಾಗ ನಾವು ಬೇರೆ ರೀತಿಯಾದಂತಹ ಕಿವಿಯೋಲೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಬೇರೆ ಆಭರಣ ಧರಿಸಿದರು ಕೂಡ ಅವುಗಳು ನೋಡುವುದಕ್ಕೆ ಚೆನ್ನಾಗಿ ಕಾಣುವುದಿಲ್ಲ. ಹಾಗಾಗಿ ಇಂತಹ ಸಮಸ್ಯೆಯನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ನಾವು ತಿಳಿಸುವಂತಹ ಈ ಸರಳ ವಿಧಾನವನ್ನು ಅನುಸರಿಸಿದರೆ ಕಿವಿಯ ರಂಧ್ರವನ್ನು ಚಿಕ್ಕದು ಮಾಡಿಕೊಳ್ಳಬಹುದು ಆಗಾದರೆ ಆ ವಿಧಾನ ಯಾವುದು ಅಂತ ನೋಡಿ ಈ ಒಂದು ವಿಧಾನವನ್ನು ಅನುಸರಿಸಲು ನಿಮಗೆ ಬೇಕಾಗಿರುವುದು ಕೇವಲ ಒಂದೇ ಒಂದು ಪದಾರ್ಥ ಅದು ಯಾವುದೆಂದರೆ ಬ್ಯಾಂಡೇಜ್.

ಹೌದು ಸಾಮಾನ್ಯವಾಗಿ ಚಿಕ್ಕ ಪುಟ್ಟ ಗಾಯಗಳು ಆದಾಗ ನಾವು ಬ್ಯಾಂಡೇಜ್ ಅನ್ನು ಉಪಯೋಗ ಮಾಡುತ್ತೇವೆ. ಇಂದು ಇಂತಹದೇ ಬ್ಯಾಂಡೇಜ್ ನಿಂದ ನೀವು ನಿಮ್ಮ ಕಿವಿಯ ರಂದ್ರವನ್ನು ಚಿಕ್ಕದು ಮಾಡಿಕೊಳ್ಳಬಹುದು ಅಂತ ನೋಡಿ. ಮೊದಲಿಗೆ ನಿಮ್ಮ ಕಿವಿಯ ಅಳತೆಗೆ ತಕ್ಕಂತೆ ಬ್ಯಾಂಡೇಜನ್ನು ಚಿಕ್ಕದಾಗಿ ಕತ್ತರಿಸಿ ಸಹಾಯದಿಂದ ಕತ್ತರಿಸಿಕೊಳ್ಳಬೇಕು. ನಂತರ ಬ್ಯಾಂಡೇಜ್ ಹಿಂದೆ ಇರುವಂತಹ ಪ್ಲಾಸ್ಟಿಕ್ ಅನ್ನು ತೆಗೆದು ನಿಮ್ಮ ಕಿವಿಯ ರಂದ್ರ ಇರುವಂತಹ ಜಾಗಕ್ಕೆ ಬ್ಯಾಂಡೇಜನ್ನು ಹಾಕಬೇಕು. ಈ ಒಂದು ಬ್ಯಾಂಡೇಜ್ ಮೇಲೆಯೇ ನೀವು ಯಾವುದಾದರೂ ಓಲೆಯನ್ನು ಧರಿಸಬಹುದಾಗಿದೆ. ಈ ರೀತಿ ಮಾಡುವುದರಿಂದ ಕಿವಿಯ ರಂದ್ರ ಚಿಕ್ಕದಾಗುತ್ತದೆ ಅಷ್ಟೇ ಅಲ್ಲದೆ ನೀವು ಯಾವುದೇ ರೀತಿಯಾದಂತಹ ಓಲೆಗಳನ್ನು ಧರಿಸಿದರೂ ಕೂಡ ಅವುಗಳು ಜೋತು ಬೀಳುವುದಿಲ್ಲ.

By admin

Leave a Reply

Your email address will not be published. Required fields are marked *