ಡ್ಯಾನ್ಸಿಂಗ್ ಚಾಂಪಿಯನ್ ಶೋಗೆ ಬಂದಂತಹ ಮೇಘನರಾಜ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ಹಬ್ಬ ಇಷ್ಟೊಂದಾ.?ಸರ್ಜಾ ಕುಟುಂಬದ ಸೊಸೆ ಹಾಗೂ ಸುಂದರರಾಜ್ ಮತ್ತು ಪ್ರಮೀಳಾ ಜೋಶಿ ಅವರ ಮುದ್ದಿನ ಮಗಳು ಮೇಘನಾ ರಾಜ್ ಇವರು ಕನ್ನಡ ಚಲನಚಿತ್ರರಂಗದ ಖ್ಯಾತನಟಿ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂನಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರು ಕಳೆದ ಕೆಲವು ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಆದರೆ ಇದೀಗ ಮನೆಯಿಂದ ಹೊರಬಂದು ಸಹಜ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇದೀಗ ಮೇಘನರಾಜ್ ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯೊಂದನ್ನು ನೀಡುತ್ತಿದ್ದಾರೆ. ಹೌದು ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಮೇಘನರಾಜ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಡ್ಯಾನ್ಸಿಂಗ್ ಚಾಂಪಿಯನ್ ಶೋಗೆ ಬಂದಿರುವಂತಹ ಮೇಘನರಾಜ್.

ಮೊದಲ ಬಾರಿಗೆ ಈ ರೀತಿಯ ಒಂದು ರಿಯಾಲಿಟಿ ಡ್ಯಾನ್ಸಿಂಗ್ ಶೋಗೆ ಜಡ್ಜ್ ಆಗಿ ಬಂದಿರುವುದು ನಿಜಕ್ಕೂ ಕೂಡ ತುಂಬಾನೇ ಸಂತೋಷವಾಗಿದೆ ಅಂತ ಹೇಳಿಕೊಂಡಿದ್ದಾರೆ. ಈ ಒಂದು ಡ್ಯಾನ್ಸಿಂಗ್ ಶೋ ನೆನ್ನೆಯಿಂದ ಪ್ರಾರಂಭವಾಗಿದೆ ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ಡ್ಯಾನ್ಸಿಂಗ್ ಶೋ ಎಂಬ ಹೆಸರಿಗೆ ಈ ಒಂದು ಕಾರ್ಯಕ್ರಮವು ಭಾಜಿನವಾಗಿದೆ. ಕಿರುತೆರೆಯಲ್ಲಿ ಖ್ಯಾತಿ ಪಡೆದಂತಹ ನಟಿಯರು ಈ ಒಂದು ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ನಟ-ನಟಿಯರಿಗೆ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅವರಿಗೆ ಇಂತಿಷ್ಟು ಸಂಭಾವನೆ ಅಂತ ನಿಗದಿಪಡಿಸಲಾಗಿರುತ್ತದೆ. ಅದೇ ರೀತಿ ನಟಿ ಮೇಘನಾ ರಾಜ್ ಅವರಿಗೆ ಒಂದು ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ನಿಗದಿ ಮಾಡಲಾಗಿದೆ.

By admin

Leave a Reply

Your email address will not be published. Required fields are marked *