ಯಾರಿಗೂ ತಿಳಿಯದ ಪುನೀತ್ ರಾಜಕುಮಾರ್ ಅವರ ಕಣ್ಣೀರಿನ ಜೀವನ ಕಥೆ.ಪುನೀತ್ ರಾಜಕುಮಾರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮನೋಜ್ಞ ನಟನೆಯಿಂದ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ವ್ಯಕ್ತಿ. ಆಗಿನಿಂದಲೂ ಕೂಡ ಸ್ಟಾರ್ ಪಟ್ಟ ಇದ್ದರೂ ಕೂಡ ಎಲ್ಲರ ಮನಸ್ಸಿನಲ್ಲಿಯೂ ಕೂಡ ಅಪ್ಪು ಎಂಬ ಹೆಸರಿನಲ್ಲಿಯೇ ಚಿರಪರಿಚಿತರಾಗಿ ಉಳಿದಂತಹ ವ್ಯಕ್ತಿ. ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ಅವರ ಮಗನಾಗಿ ಹುಟ್ಟಿದರೂ ಕೂಡ ಪುನೀತ್ ರಾಜಕುಮಾರ್ ಅವರು ಸ್ಟಾರ್ ನಟನಾಗಿ ಬೆಳೆಯುವುದಕ್ಕೆ ಹಲವಾರು ಪರಿಶ್ರಮವನ್ನು ಪಡಬೇಕಾಗುತ್ತದೆ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ತಿಳಿದುಕೊಳ್ಳುತ್ತಾರೆ ಅಣ್ಣಾವ್ರ ಮಗ ಎಂಬ ಕಾರಣಕ್ಕಾಗಿ ಅವರು ಸ್ಟಾರ್ ಗಿರಿಯನ್ನು ತುಂಬಾ ಸುಲಭವಾಗಿ ತಮ್ಮ ಮುಡಿಗೇರಿಸಿಕೊಂಡರು ಅಂತ. ಆದರೆ ನಿಜಕ್ಕೂ ಕೂಡ ಪುನೀತ್ ರಾಜಕುಮಾರ್

ಅವರು ಈ ಮಟ್ಟಕ್ಕೆ ಬೆಳೆದು ಬರುವುದಕ್ಕೆ ಅವರು ಏನೆಲ್ಲಾ ಕಷ್ಟವನ್ನು ಅನುಭವಿಸಿದ್ದಾರೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ.ಹಾಗಾಗಿ ಇಂದು ಈ ಲೇಖನದಲ್ಲಿ ಪುನೀತ್ ರಾಜಕುಮಾರ್ ಅವರು ತಮ್ಮ ಜೀವನದಲ್ಲಿ ಅನುಭವಿಸಿದಂತಹ ಸಾಕಷ್ಟು ನೋವು ಏಳು ಬೀಳುಗಳನ್ನು ಸಂಕ್ಷಿಪ್ತವಾಗಿ ಇಂದು ನಿಮಗೆ ತಿಳಿಸಲಿದ್ದೇವೆ. ಇನ್ನು ಅಪ್ಪು ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಸಾಕಷ್ಟು ವಿಚಾರಗಳಿವೆ ಅದೇನೆಂದರೆ ಮೊದಲನೇದಾಗಿ 1975 ಮಾರ್ಚ್ 17 ನೇ ತಾರೀಖಿನಂದು ಚೆನೈ ನಾ ಕಲ್ಯಾಣಿ ಆಸ್ಪತ್ರೆಯಲ್ಲಿ ಜನಿಸುತ್ತಾರೆ. ಪರ್ವತಮ್ಮ ಹಾಗೂ ವರ ನಟ ಡಾಕ್ಟರ್ ರಾಜಕುಮಾರ್ ಅವರ ಕಿರಿಯ ಮಗನಾಗಿ ಅಪ್ಪು ಅವರು ಜನಿಸುತ್ತಾರೆ. ಇನ್ನು ಎಲ್ಲರಿಗೂ ತಿಳಿದಿರುವಂತೆ ಅಪ್ಪು ಅವರ ಹಿರಿಯ ಸಹೋದರರು ಡಾಕ್ಟರ್ ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರು.

By admin

Leave a Reply

Your email address will not be published. Required fields are marked *