ನಂಜುನಗೂಡಿನ ನಂಜುಂಡೇಶ್ವರನ(ಶ್ರೀಕಂಠೇಶ್ವರ) ದರ್ಶನ ಪಡೆದ ಫಲ ಸಿಗಬೇಕು ಅಂದರೆ ಈ 1 ಕೆಲಸ ಮಾಡಲೆಬೇಕು,ಆಗ ಮಾತ್ರ ದರ್ಶನದ ಫಲ ಸಿಗೋದು.. » Karnataka's Best News Portal

ನಂಜುನಗೂಡಿನ ನಂಜುಂಡೇಶ್ವರನ(ಶ್ರೀಕಂಠೇಶ್ವರ) ದರ್ಶನ ಪಡೆದ ಫಲ ಸಿಗಬೇಕು ಅಂದರೆ ಈ 1 ಕೆಲಸ ಮಾಡಲೆಬೇಕು,ಆಗ ಮಾತ್ರ ದರ್ಶನದ ಫಲ ಸಿಗೋದು..

ನಂಜನಗೂಡಿನ ಯಾತ್ರಾರ್ಥಿಗಳಿಗೆ ಪೂರ್ಣ ಫಲವನ್ನು ಕಲ್ಪಿಸುವಂತಹ ಪುಣ್ಯಕ್ಷೇತ್ರ.ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ನಮ್ಮ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಂತಹ ಪುಣ್ಯಕ್ಷೇತ್ರವಾಗಿದೆ. ದಕ್ಷಿಣ ಕಾಶಿ ಅಂತಲೇ ಪ್ರಸಿದ್ಧವಾಗಿರುವಂತಹ ಶ್ರೀ ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಮೈಸೂರಿನಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿದೆ. ಕಪಿಲ ಮತ್ತು ಕೌಂಡಿಲ್ಯ ನದಿಗಳ ಸಂಗಮದ ಮಧ್ಯ ಭಾಗದಲ್ಲಿ ಇರುವಂತಹ ನಂಜನಗೂಡಿನಲ್ಲಿ ಹಾಲಾಹಲವನ್ನು ಕುಡಿದಂತಹ ಶ್ರೀ ನಂಜುಂಡೇಶ್ವರ ನೆಲೆಗೊಂಡ ಸ್ಥಳ ಇದಾಗಿದೆ. ಹಾಲಾಹಲವನ್ನು ಕುಡಿದಂತಹ ಶ್ರೀ ನಂಜುಂಡೇಶ್ವರ ನೆಲೆಸಿರುವ ಈ ಪುಣ್ಯ ಕ್ಷೇತ್ರಕ್ಕೆ ತುಂಬಾನೇ ಹೆಸರು ಇದೆ. ಕಪಿಲಾ ನದಿಯಲ್ಲಿ ಸ್ನಾನಮಾಡಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ಅಥವಾ ಶ್ರೀಕಂಠೇಶ್ವರ ದೇವಾಲಯದ ದರ್ಶನವನ್ನು ಪಡೆಯಬೇಕು ಅಂತ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ಭಾರತದಾದ್ಯಂತ ಇರುವ ಭಕ್ತರು ಈ ಒಂದು ಪುಣ್ಯಕ್ಷೇತ್ರಕ್ಕೆ ಆಗಮಿಸುತ್ತಾರೆ.

ಸಾಕಷ್ಟು ಜನ ಭಕ್ತಾದಿಗಳು ಈ ಒಂದು ನಂಜನಗೂಡಿಗೆ ಬಂದು ಶ್ರೀ ನಂಜುಂಡೇಶ್ವರ ಸ್ವಾಮಿಯ ದರ್ಶನವನ್ನು ಮಾತ್ರ ಪಡೆದು ಹಿಂತಿರುಗುತ್ತಾರೆ. ನಂಜನಗೂಡಿಗೆ ಬಂದಂತಹ ಭಕ್ತಾದಿಗಳು ಕೇವಲ ಶ್ರೀ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಹಾಗೆ ಹಿಂತಿರುಗಿದರೆ ಈ ಒಂದು ಸ್ವಾಮಿಯ ಪೂರ್ಣ ಫಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಕೆಲವು ಭಕ್ತಾದಿಗಳಿಗೆ ಅಥವಾ ಯಾತ್ರಿಗಳಿಗೆ ಈ ಒಂದು ಮಾಹಿತಿಯ ಪೂರ್ಣವಾಗಿ ತಿಳಿದಿರುವುದಿಲ್ಲ. ಹಾಗಾದರೆ ನಂಜನಗೂಡಿನ ಯಾತ್ರೆಯು ಸಂಪೂರ್ಣವಾದ ಬೇಕು ಅಂದರೆ ನಾವು ಯಾವ ದೇವರ ದರ್ಶನವನ್ನು ಪಡೆಯಬೇಕು ಎಂಬುದನ್ನು ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸಲಿದ್ದೆವೆ. ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಮುಂದೆ ಕಪಿಲ ಮತ್ತು ಕೌಂಡಿಲ್ಯ ಎರಡು ನದಿಗಳು ಸಂಗಮವಾಗುತ್ತದೆ ಇದನ್ನು ಪರಶುರಾಮಕ್ಷೇತ್ರ ಎಂದು ಕರೆಯಲಾಗುತ್ತದೆ.

See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

WhatsApp Group Join Now
Telegram Group Join Now


crossorigin="anonymous">