ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿ ಬದುಕನ್ನು ಕಳೆದುಕೊಂಡ ಹೆಸರಾಂತ ನಟಿ ಆಕೆ ಈ ಪರಿಸ್ಥಿತಿಗೆ ಬರಲು ಕಾರಣವಾದರೂ ಯಾರು ?ಚಿತ್ರರಂಗ ಎನ್ನುವ ಈ ಬಣ್ಣದ ಪ್ರಪಂಚ ಕಾಣೋದೇ ಹೀಗೆ ಅದೇನೋ ಹೇಳುತ್ತಾರಲ್ಲ ಮೇಲೆಲ್ಲಾ ತಳುಕು ಒಳಗೆಲ್ಲಾ ಉಳುಕು ಅನ್ನುವ ಹಾಗೆ. ಈ ಬಣ್ಣದ ಬದುಕಿನ ಕರಾಳ ಇತಿಹಾಸವೇ ಹೀಗೆ, ಹೇಳೋಕೆ ಬಣ್ಣದ ಬದುಕು ಆದರೆ ಅಲ್ಲಿದ್ದವರಿಗೆ ಅಷ್ಟೇ ಗೊತ್ತಿರುತ್ತದೆ ಆ ಬಣ್ಣದ ಬದುಕಿನಲ್ಲಿ ಎಷ್ಟು ಹುಳುಕುಗಳು ಇರುತ್ತದೆ ಎಂದು. ಈ ಕಾರಣಕ್ಕಾಗಿಯೇ ಇದರ ಬಗ್ಗೆ ತಿಳಿದುಕೊಂಡ ನಂತರ ಅದೆಷ್ಟು ಜನ ನಮಗೆ ಈ ಬಣ್ಣದ ಬದುಕಿನ ಸಹವಾಸವೇ ಬೇಡ ಎಂದು ದೂರ ಹೋಗಿಬಿಡುತ್ತಾರೆ ಆದರೆ ಇನ್ನೊಂದಿಷ್ಟು ಜನ ಈ ಬಣ್ಣದ ಬದುಕಿನಲ್ಲಿ ಸಿಕ್ಕಿಹಾಕಿಕೊಂಡು ಅನುಭವಿಸಿದಂತಹ ಕಷ್ಟ ಅಷ್ಟಿಷ್ಟಲ್ಲ ಏಕೆಂದರೆ ತಿಳಿದೋ ತಿಳಿಯದೆಯೋ ಇಂಥ ಜಾಲಕ್ಕೆ ಸಿಲುಕಿ ಹಾಕಿಕೊಂಡು ತಮ್ಮ ಬದುಕನ್ನೇ ಅಂ’ತ್ಯ ಮಾಡಿಕೊಂಡ ಭಾರತ ಚಿತ್ರರಂಗದ ಖ್ಯಾತನಟಿ ನಟಿಯ ಬೇರಾರು ಅಲ್ಲ “ನಿಶಾ ನೂರ್”.

ನಿಶಾನೂರ್ ಒಂದು ಕಾಲದಲ್ಲಿ ಚಿತ್ರರಂಗವನ್ನೇ ಆಳಿದಂತಹ ನಟಿ ಆದರೆ ಕೊನೆಯಲ್ಲಿ ಬೀದಿಯಲ್ಲಿ ಭಿಕ್ಷೆ ಬೇಡುವಂತಹ ಸ್ಥಿತಿ ಎದುರಾಗಿತ್ತು. ಅಷ್ಟೇ ಅಲ್ಲ ಆಕೆಯನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು ಕೊನೆಯ ದಿನಗಳಲ್ಲಿ ಆಕೆಯ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಆದರೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಹ ದಿನಗಳನ್ನು ನೆನೆಯುವುದಾದರೆ ಈಕೆ ಹುಟ್ಟಿದ್ದು ತಮಿಳುನಾಡಿನಲ್ಲಿ ಬಾಲ್ಯದಿಂದಲೂ ಸಿನಿಮಾ ಎಂದರೆ ಅದೇನು ಹುಚ್ಚು. ನೋಡುವುದಕ್ಕೂ ಬಹಳ ಸುಂದರವಾಗಿದ್ದ ಕಾರಣದಿಂದಲೇ ಈಕೆಗೆ ಸಿನಿಮಾರಂಗದಿಂದ ಅವಕಾಶಗಳು ಬರಲು ಶುರುವಾಗುತ್ತದೆ. 1982ರ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ “ಮಂಗಳ ನಾಗನ್” ಎಂಬ ತಮಿಳು ಸಿನಿಮಾದ ಮೂಲಕ. ಆ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ ನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ ತಮಿಳು, ತೆಲುಗು, ಕನ್ನಡ, ಮಲಯಾಳಂ ಹೀಗೆ ಸೌತ್ ಇಂಡಿಯಾದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಈಕೆಯದ್ದು.

By admin

Leave a Reply

Your email address will not be published. Required fields are marked *