ಮನೆಯಲ್ಲಿಯೇ ಸುಲಭವಾಗಿ ಸೇಂದಿ ಮಾಡುವ ವಿಧಾನ.ಸಾಮಾನ್ಯವಾಗಿ ಈ ಸೇಂದಿ ಎಂಬುದು ಹಳ್ಳಿಗಳ ಪ್ರದೇಶದಲ್ಲಿ ಹೆಚ್ಚಾಗಿ ದೊರೆಯುತ್ತದೆ ಇದನ್ನು ಮಾಡ್ರನ್ ಹೆಸರಿನಿಂದ ಹೇಳಬೇಕು ಅಂದರೆ ನಾವು ಕೆಲವೊಮ್ಮೆ ಪಾರ್ಟಿಗಳಲ್ಲಿ ಡ್ರಿಂಕ್ಸ್ ಗಳನ್ನು ಉಪಯೋಗ ಮಾಡುತ್ತೇವೆ. ಅದೇ ರೀತಿ ಹಳ್ಳಿ ಪ್ರದೇಶದಲ್ಲಿ ಸೇಂದಿ ಉಪಯೋಗ ಮಾಡುತ್ತಾರೆ ಇದನ್ನು ಕುಡಿಯುವುದರಿಂದ ಕೆಲವೊಂದು ಆರೋಗ್ಯಕರ ಉಪಯೋಗಗಳು ಇದೆ. ಹಾಗಾಗಿ ಇಂದು ಮನೆಯಲ್ಲಿಯೇ ಸೇಂದಿಯನ್ನು ಹೇಗೆ ತಯಾರಿಸಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ. ಸಾಮಾನ್ಯವಾಗಿ ಸೇಂದಿಯನ್ನು ತಯಾರಿಸಲು ತೆಂಗಿನ ಮರ ಬೇಕಾಗುತ್ತದೆ. ತೆಂಗಿನ ಮರಕ್ಕೆ ಮಡಿಕೆಯನ್ನು ಕಟ್ಟಿ ಅದರ ಮುಖಾಂತರ ಸೇಂದಿಯನ್ನು ಪಡೆಯುತ್ತಾರೆ ಆದರೆ ನಾವು ತಿಳಿಸುವಂತಹ ವಿಧಾನ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾಗಿದೆ. ಇನ್ನು ಇದಕ್ಕೆ ಬೇಕಾಗುವ ಪದಾರ್ಥ ಏನು ಅಂದರೆ ಎರಡು ಎಳನೀರು ಹಾಗೂ ಎರಡು ತೆಂಗಿನಕಾಯಿ ಬೇಕಾಗುತ್ತದೆ.

ಮೊದಲಿಗೆ ಒಂದು ಅಗಲವಾಗಿರುವ ಅಂತಹ ಪಾತ್ರೆಗೆ ಎರಡು ಎಳನೀರನ್ನು ಒಡೆದು ಅದರ ಒಳಗೆ ಇರುವಂತಹ ನೀರನ್ನು ಹಾಕಬೇಕು ಇದನ್ನು ಒಂದು ಬಟ್ಟಲಿಗೆ ಶೋಧಿಸಿ ಕೊಂಡರೆ ಉತ್ತಮ ಏಕೆಂದರೆ ಯಾವುದೇ ರೀತಿಯಾದಂತಹ ಕಸ, ಕಲ್ಮಶಗಳು ಇದರಲ್ಲಿ ಇರಬಾರದು. ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಇದನ್ನು ಒಂದು ಗಾಜಿನ ಬಾಟಲಿ ಹಾಕಿ ಬಿರಡೆಯನ್ನು ಹಾಕಿ ಒಂದು ಬಟ್ಟೆಯನ್ನು ಸುತ್ತಿ ಇಡಬೇಕು 24 ಗಂಟೆಗಳ ಕಾಲ ಇದನ್ನು ಹಾಗೆಯೇ ಬಿಡಬೇಕು. ಮತ್ತೊಂದು ಕಡೆ ಒಂದು ಬಟ್ಟಲಿಗೆ ಎರಡು ತೆಂಗಿನ ಕಾಯಿಯನ್ನು ಒಡೆದು ಆ ನೀರನ್ನು ಕೂಡ ಶೇಕರಣೆ ಮಾಡಿಟ್ಟುಕೊಳ್ಳಬೇಕು ಅದಕ್ಕೆ ಮುಕ್ಕಾಲು ಟೇಬಲ್ ಸ್ಪೂನ್ ಸಕ್ಕರೆಯನ್ನು ಹಾಕಿ. ತದನಂತರ ಅದನ್ನು ಕೂಡ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ ಅಂದರೆ ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ ಒಂದು ಪ್ಲಾಸ್ಟಿಕ್ ಬಾಟಲ್ ಗೆ ಈ ಒಂದು ಮಿಶ್ರಣವನ್ನು ಹಾಕಿ ಅದನ್ನು ಕೂಡ 24 ಗಂಟೆಗಳ ಕಾಲ ಇಡಬೇಕು ಮರುದಿನ ಅದನ್ನು ತೆಗೆದು ನೋಡಿದರೆ ಸೇಂದಿ ಸಿದ್ದವಾಗುತ್ತದೆ.

By admin

Leave a Reply

Your email address will not be published. Required fields are marked *