40 ವರ್ಷ ದಾಟಿದರೂ ಮದುವೆಯಾಗದೆ ಹಾಗೇ ಉಳಿದಿರುವಂಥ ಕನ್ನಡ ನಟರು ಇವರೇ ನೋಡಿ…ಇಂದು ನಲವತ್ತು ವರ್ಷವಾದರೂ ಕೂಡ ಇನ್ನೂ ಮದುವೆಯಾಗದ ಒಬ್ಬರೇ ಬ್ಯಾಚುಲರ್ ಆಗಿರುವಂತಹ ನಟರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಎಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಮೊದಲನೇದಾಗಿ ನಟ ಆದಿತ್ಯ ಅವರು ಬೆಂಗಳೂರಿನವರು ಮೂಲತಃ ಬೆಂಗಳೂರಿನಲ್ಲಿ ಜನಿಸಿ ಸುಮಾರು 20ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದಾರೆ ಆದಿತ್ಯ ಅವರಿಗೆ ಈಗ 43 ವರ್ಷ ಆದರೂ ಕೂಡ ಮದುವೆಯಾಗದೆ ಸಿಂಗಲ್ ಆಗಿ ಉಳಿದಿದ್ದಾರೆ. ಎರಡನೇದಾಗಿ ಜಯರಾಮ್ ಕಾರ್ತಿಕ್ ಇವರು ಅಶ್ವಿನಿ ನಕ್ಷತ್ರ ಎಂಬ ಧಾರಾವಾಹಿಯಲ್ಲಿ ನಟನೆ ಮಾಡುವುದರ ಮೂಲಕ ತಮ್ಮ ಸಿನಿ ಜೀವನವನ್ನು ಆರಂಭ ಮಾಡುತ್ತಾರೆ. ಬಿಗ್ ಬಾಸ್ ಮತ್ತು ಕನ್ನಡ ಹಾಗೂ ಹಿಂದಿ ಚಲನಚಿತ್ರದಲ್ಲಿ ಸ್ಪೋರ್ಟಿಂಗ್ ರೋಲ್ ಆಕ್ಟರ್ ರಾಗಿ ಅಭಿನಯಿಸುತ್ತಾರೆ ಇದೀಗ ಇವರಿಗೆ 43 ವರ್ಷ ಆದರೂ ಕೂಡ ಮದುವೆಯಾಗದೆ ಒಂಟಿ ಜೀವನ ಸಾಗಿಸುತ್ತಿದ್ದಾರೆ.

ಮೂರನೆಯದಾಗಿ ನಟ ರಕ್ಷಿತ್ ಶೆಟ್ಟಿ ಇವರು ಸಿಂಪಲ್ ಸ್ಟಾರ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದಲ್ಲಿ ಸುಮಾರು ಹತ್ತಕ್ಕೂ ಅಧಿಕ ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕನಟನಾಗಿ, ನಿರ್ದೇಶಕರಾಗಿ, ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾನೆ 2017 ರಲ್ಲಿ ನ್ಯಾಷನಲ್ ಸ್ಟಾರ್ ರಶ್ಮಿಕಾ ಮದ್ದಣ್ಣ ಅವರ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ಕಾರಣಾಂತರಗಳಿಂದ ಅರ್ಧಕ್ಕೆ ನಿಂತುಹೋಗುತ್ತದೆ ಇದೀಗ ಇವರಿಗೆ 38 ವರ್ಷ ಆದರೂ ಕೂಡ ಇನ್ನೂ ಮದುವೆಯಾಗಿಲ್ಲ. ಇದಾಗಿ ಡಾಲಿ ಧನಂಜಯ್ ಇವರು ಡೈರೆಕ್ಟರ್ ಸ್ಪೆಷಲ್ ಎಂಬ ಸಿನಿಮಾದಲ್ಲಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು. ಹೀರೋ ಮತ್ತು ವಿಲನ್ ಎರಡು ಪಾತ್ರಗಳನ್ನು ಕೂಡ ಅಚ್ಚುಕಟ್ಟಾಗಿ ಮಾಡುತ್ತಾರೆ. 15 ಸಿನಿಮಾಗಳಲ್ಲಿ ಅಭಿನಯ ಮಾಡಿರುವಂತಹ ಧನಂಜಯ್ ಅವರಿಗೆ ಇದೀಗ 36 ವರ್ಷ ಆದರೂ ಕೂಡ ಇನ್ನೂ ಮದುವೆಯಾಗಿಲ್ಲ.

By admin

Leave a Reply

Your email address will not be published. Required fields are marked *