ಗರ್ಭಿಣಿ ಅಮೃತಾ ಪರಿಸ್ಥಿತಿ ಈಗ ಹೇಗಿದೆ ನೋಡಿ .ನನ್ನಮ್ಮ ಸೂಪರ್ ಸ್ಟಾರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಕಾರ್ಯಕ್ರಮವೊಂದರಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡ ಅಮೃತ ನಾಯ್ಡು ಅವರು ಕನ್ನಡದ ಖ್ಯಾತ ಹರಿಕಥೆ ನಾಯಕರು ಆಗಿರುವಂತಹ ಗುರುರಾಜುಲು ನಾಯ್ಡು ಅವರ ಮೊಮ್ಮಗಳು. ಅಮೃತ ಅವರು ಕೂಡ ಹರಿ ಕಥೆ ಹೇಳುವುದರಲ್ಲಿ ತುಂಬಾನೇ ಪ್ರಸಿದ್ಧಿಯಾಗಿದ್ದರು. ಆದರೆ ಇದೀಗ ಅಮೃತ ಅವರ ಜೀವನದಲ್ಲಿ ನಡೆಯಬಾರದ ಘಟನೆ ನಡೆದಿದೆ. ನಿನ್ನೆ ಸ್ಕೂಟಿ ಮತ್ತು ಟಿಪ್ಪರ್ ನಡುವೆ ನಡೆದಂತಹ ಆಕ್ಸಿಡೆಂಟ್ ನಲ್ಲಿ ಅಮೃತ ನಾಯ್ಡು ಅವರು ತಮ್ಮ ಮಗಳನ್ನು ಕಳೆದುಕೊಳ್ಳುತ್ತಾರೆ. ಇದಕ್ಕೂ ಮೊದಲು ಅವರ ಮೊದಲ ಮಗುವನ್ನು ಅನಾರೋಗ್ಯದ ಕಾರಣ ಕಳೆದುಕೊಂಡಿರುತ್ತಾರೆ. ಮೊದಲ ಮಗು ಅನಾರೋಗ್ಯದಿಂದ ಸಾವನಪ್ಪಿದ ಕಾರಣ ಅಮೃತ ಅವರು ತುಂಬಾನೇ ಜಿಗುಪ್ಸೆ ಒಳಗಾಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಸಮನ್ವಿ ಹುಟ್ಟಿದ ಮೇಲೆ ಅಮೃತ ಅವರು ಸಂತೋಷದಿಂದ ಜೀವನವನ್ನು ಸಾಗಿಸುತ್ತಾರೆ. ಮಗಳಿಗೋಸ್ಕರ ನನ್ನಮ್ಮ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮಕ್ಕೆ ಬಂದು ಅಲ್ಲಿ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಳ್ಳುತ್ತಾರೆ.

ಅಷ್ಟೇ ಅಲ್ಲದೆ ಆ ಒಂದು ಕಾರ್ಯಕ್ರಮದಲ್ಲಿ ನೀಡುವಂತಹ ಎಲ್ಲಾ ಟಾಸ್ಕ್ ಗಳನ್ನು ಕೂಡ ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ಕೂಡ ವಿನ್ನರ್ ರನ್ನರ್ ಹಾಗೂ ಎಲಿಮಿನೇಷನ್ ಎಂಬ ಮೂರು ವಿಭಾಗಗಳು ಇದ್ದೇ ಇರುತ್ತದೆ. ಆದ ಕಾರಣ ಅಮೃತ ಹಾಗೂ ಸಮನ್ವಿ ಈ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದರು. ಆದರೆ ಎಲಿಮಿನೆಟ್ ಆಗುವುದಕ್ಕಿಂತ ಮುಂಚೆ ಒಂದು ಖುಷಿ ವಿಚಾರವನ್ನು ವೇದಿಕೆಯ ಮೇಲೆ ಎಲ್ಲರ ಸಮ್ಮುಖದಲ್ಲಿ ಹೇಳಿಕೊಂಡಿದ್ದರು. ಅಮೃತ ಅವರು ನಾನು ಈಗ ಗರ್ಭಿಣಿಯಾಗಿದ್ದೇನೆ ಮತ್ತೊಂದು ಮಗುವಿಗೆ ಜನ್ಮ ನೀಡಲು ಸಿದ್ಧವಾಗಿದ್ದೆನೆ ಎಂಬ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು. ಆದರೆ ಇದೀಗ ಆಕ್ಸಿಡೆಂಟ್ ನಲ್ಲಿ ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ ಹೊಟ್ಟೆಯಲ್ಲಿ ಒಂದು ಜೀವ ಇರುವಾಗಲೇ ಇನ್ನೊಂದು ಮಗು ಕಳೆದುಕೊಂಡಿರುವುದು ನಿಜಕ್ಕೂ ದಾರುಣ ಅಂತಾನೇ ಹೇಳಬಹುದು.

By admin

Leave a Reply

Your email address will not be published. Required fields are marked *