ಅಕ್ಕಿಯಲ್ಲಿರುವ ಹುಳ ಓಡಿಸಲು ಈ ಸರಳ ಟಿಪ್ಸ್ ಪಾಲಿಸಿ..ಒಂದು ವರ್ಷವಾದರೂ ಅಕ್ಕಿಯಲ್ಲಿ ಹುಳ ಬರೊಲ್ಲ.. » Karnataka's Best News Portal

ಅಕ್ಕಿಯಲ್ಲಿರುವ ಹುಳ ಓಡಿಸಲು ಈ ಸರಳ ಟಿಪ್ಸ್ ಪಾಲಿಸಿ..ಒಂದು ವರ್ಷವಾದರೂ ಅಕ್ಕಿಯಲ್ಲಿ ಹುಳ ಬರೊಲ್ಲ..

ಅಕ್ಕಿಯಲ್ಲಿ ಹುಳು ಆಗಿದಿಯಾ ಈ ರೀತಿ ಮಾಡಿದರೆ ಎರಡು ವರ್ಷವಾದರೂ ಹುಳು ಬರುವುದಿಲ್ಲ…ಅಕ್ಕಿ ಇದನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯವೂ ಬಳಸುವಂತಹ ವಸ್ತು ಅಕ್ಕಿ ಇಲ್ಲದೇ ಇದ್ದರೆ ನಾವು ಯಾವುದೇ ಆಹಾರವನ್ನು ತಯಾರಿಸಲು ಸಾಧ್ಯವಿಲ್ಲ. ಹಾಗಾಗಿ ಅಕ್ಕಿ ನಮಗೆ ಅಗತ್ಯವಾಗಿ ಇರುವಂತಹ ವಸ್ತುವಾಗಿದೆ ಹಾಗಾಗಿ ಈ ಒಂದು ಅಕ್ಕಿ ನಾವು ಪ್ರತಿನಿತ್ಯವೂ ಕೂಡ ಬಳಕೆ ಮಾಡುತ್ತೇವೆ. ಆದರೆ ಅಕ್ಕಿಯಲ್ಲಿ ನಾವು ಹುಳು ಬರುವುದನ್ನು ನೋಡಬಹುದು. ಇಂದು ನಿಮಗೆ ಅಕ್ಕಿಯಲ್ಲಿ ಯಾವುದೇ ರೀತಿಯಾದಂತಹ ಹುಳುಗಳು ಸೇರ್ಪಡೆ ಆಗಬಾರದು ಅಂದರೆ ಯಾವ ರೀತಿಯಾದಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿಮಗೆ ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ. ಮೊದಲನೇದಾಗಿ ನೀವು ಅಕ್ಕಿಯನ್ನು ಸಂಗ್ರಹಿಸಲು ಯಾವುದಾದರೂ ಪ್ಲಾಸ್ಟಿಕ್ ಅಥವಾ ಸ್ಟೀಲ್ ಬಾಕ್ಸ್ ಅನ್ನು ಉಪಯೋಗ ಮಾಡುವುದು ಆದರೆ ಅದನ್ನು ಮೊದಲು ವರಿಸಿಕೊಳ್ಳಬೇಕು ಒಂದು ಚೂರು ಕೂಡ ನೀರಿನ ಅಂಶ ಇರಬಾರದು.

ಮೊದಲು ದೊಡ್ಡದಾಗಿರುವಂತಹ ಬಾಕ್ಸ್ ಕೆಳಗೆ ಸ್ವಲ್ಪ ಅಕ್ಕಿಯನ್ನು ಹಾಕಿ ತದನಂತರ ಅದರ ಮೇಲೆ ಕಹಿಬೇವಿನ ಸೊಪ್ಪನ್ನು ಸ್ವಲ್ಪ ಹರಡಬೇಕು ಹಸಿ‌‌ ಅಥವಾ ಒಣ ಇರುವಂತಹ ಕಹಿಬೇವಿನ ಸೊಪ್ಪನ್ನು ಉಪಯೋಗ ಮಾಡಿ. ನಂತರ ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಿ ತದನಂತರ ಮತ್ತೆ ಕಹಿಬೇವಿನ ಸೊಪ್ಪನ್ನು ಹಾಕಬೇಕು ಈ ರೀತಿ ನಾಲ್ಕರಿಂದ ಐದು ಬಾರಿ ಮಾಡಬೇಕು. ಕಹಿಬೇವಿನ ಸೊಪ್ಪನ್ನು ನಾವು ಉಪಯೋಗ ಮಾಡಿರುವುದರಿಂದ ಅಕ್ಕಿಯಲ್ಲಿ ಹುಳು ಉತ್ಪತ್ತಿಯಾಗದಂತೆ ಇದು ನೋಡಿಕೊಳ್ಳುತ್ತದೆ ಇದು ಒಂದು ವಿಧಾನ. ಮತ್ತೊಂದು ವಿಧಾನದಲ್ಲಿ ಹೇಳುವುದಾದರೆ ನೀವು ಕಹಿ ಬೇವಿನ ಸೊಪ್ಪಿನ ಜಾಗಕ್ಕೆ ಒಣ ಮೆಣಸಿನಕಾಯಿಯನ್ನು ಬೇಕಾದರೂ ಉಪಯೋಗ ಮಾಡಬಹುದು‌. ಈ ಒಂದು ಒಣಮೆಣಸಿನಕಾಯಿನಲ್ಲಿ ಘಾಟಿನ ಅಂಶ ಇರುವುದರಿಂದ ಹುಳುಗಳು ಬರದಂತೆ ಇದು ನೋಡಿಕೊಳ್ಳುತ್ತದೆ.

WhatsApp Group Join Now
Telegram Group Join Now


crossorigin="anonymous">