ಇದೇ ನೋಡಿ ಸರ್ಪಲೋಕದ ಅತೀ ದೊಡ್ಡ ರಹಸ್ಯ..ಅಂತ್ಯ ಸುಬ್ರಮಣ್ಯದ ಬಗ್ಗೆ ಕೆಳಿದ್ದೀರಾ..! » Karnataka's Best News Portal

ಇದೇ ನೋಡಿ ಸರ್ಪಲೋಕದ ಅತೀ ದೊಡ್ಡ ರಹಸ್ಯ..ಅಂತ್ಯ ಸುಬ್ರಮಣ್ಯದ ಬಗ್ಗೆ ಕೆಳಿದ್ದೀರಾ..!

ಅಂತ್ಯ ಸುಬ್ರಹ್ಮಣ್ಯ- ಸರ್ಪಗಳ ಅತಿ ದೊಡ್ಡ ರಹಸ್ಯ, ನಾಗಲಮಡಿಕೆ.ನಮಸ್ಕಾರ ಸ್ನೇಹಿತರೆ ನಮ್ಮ ಹಿರಿಯರು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯವನ್ನು ಆದಿಸುಬ್ರಹ್ಮಣ್ಯ ಎಂದು, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯವನ್ನು ಮಧ್ಯ ಸುಬ್ರಹ್ಮಣ್ಯ ಎಂದು, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿರುವ ನಾಗಲ ಮಡಿಕೆಗೆ ಅಂತ್ಯಸುಬ್ರಮಣ್ಯ ಎಂದು ಕರೆದಿದ್ದಾರೆ. ನಾಗಲಮಡಿಕೆ ದೇಗುಲಕ್ಕೆ ಸರ್ಪಸಂಸ್ಕಾರ ಆಶ್ಲೇಷಬಲಿ ನಾಗಪ್ರತಿಷ್ಠೆ ಹೋಮಹವನ ಇತ್ಯಾದಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ. ಕಿವಿಯಲ್ಲಿ ಕೀವು ಸೋರುವುದು, ಕಣ್ಣಿನ ಸಮಸ್ಯೆ, ಉಸಿರಾಟದ ಸಮಸ್ಯೆ, ವಿವಾಹ, ಸಂತಾನ, ಕೋರ್ಟು-ಕಚೇರಿ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಭಕ್ತರು ಈ ದೇವಸ್ಥಾನಕ್ಕೆ ಬರುವುದು ಹೋಗುವುದು ಸರ್ವೇ ಸಾಮಾನ್ಯ. ಉತ್ತರ ಪಿನಾಕಿನಿ ನದಿ ತಟದಲ್ಲಿರುವ ಈ ದೇಗುಲಕ್ಕೆ ಆಂಧ್ರಪ್ರದೇಶ ತಮಿಳುನಾಡು ಕೇರಳ ಇತರ ರಾಜ್ಯದ ಭಕ್ತಾದಿಗಳು ಇಲ್ಲಿ ಸೇರುತ್ತಾರೆ. ನಾಗದೋಷ ನಿವಾರಣೆಗೆ ಇಲ್ಲಿ ಬರುವುದೇ ಹೆಚ್ಚು ದೇಗುಲಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆಯೆಂದು ಹಿರಿಯರು ಹೇಳುತ್ತಾರೆ.

ಶತಮಾನಗಳ ಹಿಂದೆ ನೋಲಂಬ ಪಲ್ಲವ ಕಾಲದಲ್ಲಿ ನಾಗಲಮಡಿಕೆ ಪುಟ್ಟಗ್ರಾಮ ಆಗ್ರಹವಾಗಿತ್ತು ಅನ್ನಂಭಟ್ಟನೆಂಬ ಭಕ್ತ ಕುಕ್ಕೆಸುಬ್ರಹ್ಮಣ್ಯ ಸ್ವಾಮಿಯ ಅನುಯಾಯಿಯಾಗಿದ್ದರು.ಪ್ರತಿವರ್ಷ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ರಥೋತ್ಸವಕ್ಕೆ ಅನ್ನಂಭಟ್ಟರು ಅನ್ನನೀರು ಸೇವಿಸದೆ ಕಾಲ್ನಡಿಗೆಯಲ್ಲಿ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ವಯಸ್ಸು ಹೆಚ್ಚಿದಂತೆ ಅನ್ನಂಭಟ್ಟರ ಶಕ್ತಿ ಕುಂದಿತು ರಥೋತ್ಸವದ ವೇಳೆಗೆ ಅವರಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ ಅನ್ನಂಭಟ್ಟರು ರಥೋತ್ಸವಕ್ಕೆ ಬರುವುದಿಲ್ಲ ಎಂದು ನಿರ್ಧರಿಸಿ ಅಲ್ಲಿನ ಭಕ್ತರು ರಥವನ್ನು ಎಳೆಯಲು ಮುಂದಾದರು ಆದರೆ ರಥ ಒಂದು ಚೂರು ಕದಲಲಿಲ್ಲ ಸುಬ್ರಹ್ಮಣ್ಯಸ್ವಾಮಿ ಭಕ್ತನೋರ್ವರ ಮೈಮೇಲೆ ಆವಾಹನವಾಗಿ ನನ್ನ ಭಕ್ತನೋರ್ವರು ಬರುತ್ತಿದ್ದಾರೆ. ಆತನು ಬರುವವರೆಗೆ ಕಾಯಬೇಕು ಅವರಿಗೆ ವಯಸ್ಸಾದ ಕಾರಣ ನಾಗಲ ಮಡಿಕೆಯಲ್ಲಿಯೇ ಪೂಜೆ ನಡೆಸಿಕೊಂಡು ಹೋಗುಬೇಕೆಂದು ಸೂಚಿಸುತ್ತಾರೆ. ಆಮೇಲೆ ಭಟ್ಟರು ಬಂದು ಪೂಜೆ ಸಲ್ಲಿಸಿದ ನಂತರವೇ ಅಲ್ಲಿಂದ ಮುಂದುವರೆಯಿತು. ಜೊತೆಗೆ ಕುಕ್ಕೆದೇಗುಲದಲ್ಲಿ ಇದ್ದ ಪಂಚಲೋಹ ವಿಗ್ರಹವನ್ನು ಅನ್ನ ಬಟ್ಟರಿಗೆ ಕೊಡಲಾಗುತ್ತದೆ‌.

WhatsApp Group Join Now
Telegram Group Join Now


crossorigin="anonymous">