1940 ರಲ್ಲಿ ಶಬರಿಮಲೆ ಹೇಗಿತ್ತು ನೋಡಿ,ಅಯ್ಯಪ್ಪ ಸ್ವಾಮಿಯ ಮೂಲಸ್ಥಳದ ರೋಚಕ ಕಥೆ.. - Karnataka's Best News Portal

1940 ರಲ್ಲಿ ಶಬರಿಮಲೆ ಹೇಗಿತ್ತು ನೋಡಿ,ಅಯ್ಯಪ್ಪ ಸ್ವಾಮಿಯ ಮೂಲಸ್ಥಳದ ರೋಚಕ ಕಥೆ..

1940ರಲ್ಲಿ ಶಬರಿಮಲೆ ಹೇಗಿತ್ತು ಗೊತ್ತ.?ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರರಾಗಿರುವುದು ಶ್ರೀ ಅಯ್ಯಪ್ಪ ಸ್ವಾಮಿ. ಅಯ್ಯಪ್ಪ ಸ್ವಾಮಿಯ ಮೂಲ ಸ್ಥಳ ಕೇರಳದ ಶಬರಿಮಲೆ ವಿಶ್ವದ ಅತ್ಯಂತ ಹೆಚ್ಚು ಭಕ್ತಾಧಿಗಳು ಆಗುವಂತಹ ಪುಣ್ಯ ಕ್ಷೇತ್ರಗಳಲ್ಲಿ ಶಬರಿಮಲೆಯು ಕೂಡ ಒಂದು. ಆಂಧ್ರ ಪ್ರದೇಶದಲ್ಲಿ ಇರುವಂತಹ ತಿರುಪತಿಯನ್ನು ಬಿಟ್ಟರೆ ಎರಡನೆಯದಾಗಿ ಅತಿ ಹೆಚ್ಚು ಜನಸಂಖ್ಯೆ ಭೇಟಿ ಮಾಡುವಂತಹ ಎರಡನೇ ಧಾರ್ಮಿಕ ಕ್ಷೇತ್ರ ಅಂದರೆ ಅದು ಕೇರಳದಲ್ಲಿ ಇರುವಂತಹ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ. ಕಳೆದ ವರ್ಷ ನವೆಂಬರ್ ನಿಂದ ಈ ವರ್ಷದ ಜನವರಿ ವರೆಗೂ ಸುಮಾರು ಆರು ಕೋಟಿ ಜನರು ಶ್ರೀ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ ಎಂದು ತಿಳಿಸಲಾಗಿದೆ. ಇಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಕಲಿಯುಗದ ದೈವ ನೆಲೆನಿಂತಿದ್ದಾರೆ ದಕ್ಷಿಣ ಭಾರತದ ಪುಣ್ಯ

ಕ್ಷೇತ್ರಗಳಲ್ಲಿ ಒಂದಾಗಿರುವಂತಹ ಶ್ರೀ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇವಾಲಯವೂ ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿದೆ.ದಟ್ಟವಾದ ಗಳಿಂದ ಪೂಂಗವನಮ್ ಎಂಬ 18 ದಟ್ಟ ಪರ್ವತಗಳಿಂದ ಈ ಕ್ಷೇತ್ರವು ಪ್ರಸಿದ್ಧಿಯಾಗಿದೆ ಅಯ್ಯಪ್ಪ ಸ್ವಾಮಿಯ ವಿಗ್ರಹವು ಪರಶುರಾಮ ರಿಂದ ಸ್ಥಾಪಿತವಾಯಿತು ಎಂದು ಹೇಳಲಾಗುತ್ತದೆ. ಶ್ರೀ ಅಯ್ಯಪ್ಪ ಸ್ವಾಮಿಯ ಹರಿ ಮತ್ತು ಹರನಿಗೆ ಜನಿಸಿದರು ಎಂದು ಪುರಾಣಗಳಲ್ಲಿ ಉಲ್ಲೆಖವಿದೆ ಬಸ್ಮಾಸುರನನ್ನು ವಧಿಸಲು ವಿಷ್ಣುವು ಮೋಹಿನಿಯ ರೂಪದಲ್ಲಿ ಬಂದಾಗ ಈಶ್ವರನು ಮನ ಸೋಲುತ್ತಾನೆ ಅವರಿಬ್ಬರ ನಡುವೆ ಪ್ರೀತಿ ಉಂಟಾಗುತ್ತದೆ ಇವರಿಬ್ಬರ ಸಾಂಗತ್ಯದಿಂದ ಹುಟ್ಟಿದವನೇ ಅಯ್ಯಪ್ಪಸ್ವಾಮಿ. ಈ ಪುತ್ರನನ್ನು ಶಿವ ಮತ್ತು ವಿಷ್ಣು ಕಾಡಿನಲ್ಲಿ ಇಟ್ಟು ಪುತ್ರ ಸಂತಾನಕ್ಕಾಗಿ ಬೇಡುತ್ತಿದ್ದ ಪಂದಾಳದ ರಾಜ ಬೇಟೆಗೆಂದು ಕಾಡಿಗೆ ಬಂದಾಗ ಆ ಮಗು ಆತನ ಕೈಗೆ ಸಿಗುವಂತೆ ಹರಿಹರರು ಮಾಡುತ್ತಾರೆ.

See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..

WhatsApp Group Join Now
Telegram Group Join Now


crossorigin="anonymous">