ಇದ್ದಕ್ಕಿದ್ದ ಹಾಗೆ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಧನುಷ್ ವಿಚ್ಛೇದನ ನೀಡಲು ಕಾರಣ ಏನು ಗೊತ್ತಾ.?

ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯ ಅವರಿಗೆ ವಿಚ್ಛೇದನ ನೀಡುತ್ತಿದ್ದಾರೆ. ಈ ಒಂದು ಮಾಹಿತಿಯನ್ನು ಕೇಳಿದಂತಹ ಅಭಿಮಾನಿಗಳು ತುಂಬಾನೇ ಆತಂಕಕ್ಕೆ ಒಳಗಾಗಿದ್ದಾರೆ ಅಷ್ಟೇ ಅಲ್ಲದೆ ಈ ವಿಚಾರ ಕೇಳಿ ಇಡೀ ಚಿತ್ರರಂಗವೆ ಶಾಕ್ ಆಗಿದೆ. ಹೌದು ತಮಿಳಿನ ಖ್ಯಾತ ನಟ ಧನುಷ್ ಅವರು ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಇವರ ಜೊತೆ ಸುಮಾರು 18 ವರ್ಷಗಳ ಕಾಲ ಸಂಸಾರಿಕ ಜೀವನವನ್ನು ನಡೆಸಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಈಗ ಬೇರೆ ಆಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಅಂತನೇ ಹೇಳಬಹುದು. ಈ ಒಂದು ವಿಚಾರವನ್ನು ಧನುಷ್ ಅವರೇ ಸ್ವತಃ ಬಹಿರಂಗ ಪಡಿಸಿದ್ದಾರೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರ ಹೇಳಿಕೊಂಡಿದ್ದಾರೆ 2004ರಲ್ಲಿ ಮದುವೆಯಾದಂತಹ ಈ ಜೋಡಿ ತುಂಬಾನೇ ಅನ್ಯೋಯುತವಾಗಿ ಸಂಸಾರವನ್ನು ನಡೆಸುತ್ತಿದ್ದರು.

ಆದರೆ ಇವರ ಸಂಬಂಧದಲ್ಲಿ ಯಾವ ವಿಚಾರಕ್ಕಾಗಿ ಭಿನ್ನಾಭಿಪ್ರಾಯ ಬಂತು ಎಂಬ ಮಾಹಿತಿ ಯಾರಿಗೂ ಕೂಡ ತಿಳಿದಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಅವರು ಈ ರೀತಿ ತಮ್ಮ ಪತ್ನಿಗೆ ವಿಚ್ಛೇದನ ನೀಡುತ್ತಿದ್ದೇವೆ ಎಂದು ಮಾಡಿರುವಂತಹ ಟ್ವಿಟ್ ವಿಚಾರ ಸದ್ಯಕ್ಕೆ ಎಲ್ಲಾ ಮಾಧ್ಯಮದಲ್ಲಿಯೂ ಕೂಡ ತುಂಬಾನೇ ವೈರಲ್ ಆಗುತ್ತಿದೆ. ಆದರೆ ಇದರ ಬಗ್ಗೆ ರಜನಿಕಾಂತ್ ಆಗಲಿ ಅಥವಾ ಅವರ ಮಗಳು ಐಶ್ವರ್ಯ ಆಗಲಿ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡಿಲ್ಲ. ಧನುಷ್ ಅವರು ಚಿತ್ರರಂಗದಲ್ಲಿ ತುಂಬಾನೇ ಖ್ಯಾತಿ ಪಡೆದಂತಹ ವ್ಯಕ್ತಿ ಅವರ ಮಾವ ರಜನಿಕಾಂತ್ ಅವರು ಕೂಡ ಇಡೀ ದೇಶವೇ ತಿರುಗಿ ನೋಡುವಂತೆ ಅದ್ಭುತವಾಗಿ ನಟನೆ ಮಾಡಿದಂತಹ ವ್ಯಕ್ತಿ ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಅಭಿಮಾನಿಗಳನ್ನು ಹೊಂದಿರುವಂತಹ ಈ ವ್ಯಕ್ತಿಯ ಕುಟುಂಬದಲ್ಲಿ ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ಕೂಡ ಶೋಚನೀಯ ಅಂತನೇ ಹೇಳಬಹುದು.

By admin

Leave a Reply

Your email address will not be published. Required fields are marked *