ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ- ಹುಚ್ಚ ವೆಂಕಟ್ ಈ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಹಾಕ್ತಿರಾ. » Karnataka's Best News Portal

ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ- ಹುಚ್ಚ ವೆಂಕಟ್ ಈ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಹಾಕ್ತಿರಾ.

ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಈ ರೀತಿ ಹೇಳಿಕೆ ಹುಚ್ಚ ವೆಂಕಟ್ ಯಾಕೆ ಕೊಟ್ಟರು ಗೊತ್ತಾ ಈ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಹಾಕ್ತಿರಾ.ಹುಚ್ಚ ವೆಂಕಟ್ ಈ ವ್ಯಕ್ತಿಯನ್ನು ಕರ್ನಾಟಕದ ಜನತೆಯ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಅಂತ ಹೇಳಬಹುದು ಏಕೆಂದರೆ ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ವಿಚಾರಕ್ಕೆ ಇವರು ಸುದ್ದಿ ಆಗುತ್ತಿದ್ದರು. ಮೊದಲಿಗೆ ಸಿನಿಮಾರಂಗದಲ್ಲಿ ಗುರುತಿಸಿಕೊಂಡರೂ ತದನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಕೂಡ ಕಾಣಿಸಿಕೊಂಡರು. ಆದರೆ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯಲಿಲ್ಲ ಅಲ್ಲಿಂದ ಆಚೆ ಬರುತ್ತಾರೆ. ನಂತರ ಮಾನಸಿಕವಾಗಿ ಅಸ್ವಸ್ಥಗೊಂಡು ಕೆಲವು ದಿನಗಳು ಆಸ್ಪತ್ರೆಯಲ್ಲಿ ಕೂಡ ಇರುತ್ತಾರೆ‌. ತದನಂತರ ಅಲ್ಲಿಂದ ಆಚೆ ಬಂದು ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಹೀಗೆ ಬೇರೆ ಬೇರೆ ಪ್ರದೇಶಕ್ಕೆ ಹೋಗಿ ಅಲೆಯುತ್ತ ಇರುತ್ತಾರೆ. ಅವರ ಮನಸ್ಥಿತಿ ಸರಿಯಿಲ್ಲದ ಕಾರಣ ಹಾಗೂ ಕೆಲವು ಸಾರ್ವಜನಿಕರು ಅವರಿಗೆ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿದ್ದ ಕಾರಣ ಮಾನಸಿಕವಾಗಿ ತುಂಬಾನೇ ದುರ್ಬಲ ಗೊಂಡಿದ್ದರು. ಹುಚ್ಚ ವೆಂಕಟ್ ಅವರಿಗೆ ತಾಯಿ ಇಲ್ಲದ ಕಾರಣ ತಂದೆಯ ಒಬ್ಬರೇ ಇದ್ದರು ಅವರ ಆರೋಗ್ಯದ ಸ್ಥಿತಿಯೂ ಕೂಡ ಗಂಭೀರವಾಯಿತು ಕಳೆದ ಕೆಲವು ದಿನಗಳ ಹಿಂದಷ್ಟೇ ಅವರು ಕೂಡ ಇಹಲೋಕವನ್ನು ತ್ಯಜಿಸಿದರು.

ಈ ಒಂದು ಕಾರಣದಿಂದಾಗಿ ಹುಚ್ಚ ವೆಂಕಟ್ ಅವರು ಸಂಪೂರ್ಣ ಬದಲಾಗಿದ್ದಾರೆ ಈಗ ವೆಂಕಟ್ ಅವರು ತಮ್ಮ ಅಕ್ಕನ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಳೆಯ ದಿನಗಳನ್ನು ಸಂಪೂರ್ಣವಾಗಿ ಮರೆತು ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಒಳ್ಳೆಯ ರೀತಿಯಾದಂತಹ ಕಾರ್ಯಗಳನ್ನು ಮಾಡಬೇಕು ಅಂತ ಮಾದ್ಯಮದವರ ಜೊತೆಗೆ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ಇನ್ನು ಕೊನೆಯದಾಗಿ ಕಾಡುವ ಪ್ರಶ್ನೆ ಏನೆಂದರೆ ಹುಚ್ಚ ವೆಂಕಟ್ ಅವರು ಮದುವೆ ಆಗುವುದಿಲ್ಲ ಅಂತ. ಇದಕ್ಕೆ ನೇರವಾಗಿ ಸ್ಪಷ್ಟ ಉತ್ತರ ಕೊಟ್ಟಂತಹ ವೆಂಕಟ್ ಅವರು ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ‌. ಏಕೆಂದರೆ ನನ್ನನ್ನು ಅರ್ಥಮಾಡಿಕೊಳ್ಳುವವರು ಯಾರು ಇಲ್ಲ ಹಾಗಾಗಿ ನಾನು ಜೀವನಪೂರ್ತಿ ಒಂಟಿಯಾಗಿ ಇರುತ್ತೇನೆ ಅಂತ ಹೇಳಿದ್ದಾರೆ.

See also  ಜೈಲ್ ಅನುಭವ ಹೇಗಿತ್ತು ಎಂದು ವಿಡಿಯೋ ಪೋಸ್ಟ್ ಮಾಡಿದ ಸೋನು ಶ್ರೀನಿವಾಸ್ ಗೌಡ..23 ವರ್ಷಕ್ಕೆ ಚಿಕ್ಕ ವಯಸ್ಸಿಗೆ ನೋಡಬಾರದ ಕಷ್ಟ ನೋಡಿದೆ ಎಂದು ಭಾವುಕಳಾದ ಸೋನು..

WhatsApp Group Join Now
Telegram Group Join Now


crossorigin="anonymous">