1 ಚಮಚ ಇಟ್ಟಿಗೆ ಪುಡಿಯಿಂದ ಕಬ್ಬಿಣದ ಹಂಚು, ಕಾವಲಿ, ಬಾಣಲಿ,ಪಳಗಿಸುವ ವಿಧಾನ..!ನಮಸ್ತೆ ಸ್ನೇಹಿತರೆ, ಕಬ್ಬಿಣ ಅಂಚನ್ನು ಬಳಸುವುದು ಹೇಗೆ ಮತ್ತು ಅದನ್ನು ಪಳಗಿಸುವುದು ಹೇಗೆ ಮತ್ತು ಇವುಗಳನ್ನು ಇಟ್ಟಿಗೆಯಿಂದ ಪಳಗಿಸುವುದು ಹೇಗೆ ಎಂಬ ವಿಧಾನವನ್ನು ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಕೆಲವೊಬ್ಬರು ಈ ರೀತಿಯಾಗಿ ಹೊಸದಾಗಿ ತೆಗೆದುಕೊಂಡು ಕಬ್ಬಿಣದ ಅಂಚು ಅಥವಾ ಬಾಣಲಿ ಗಳನ್ನು ಹೇಗೆ ಶುಚಿ ಮಾಡುವುದು ಎಂದರೆ. ಮೊದಲನೆಯದಾಗಿ ಸ್ವಲ್ಪ ಇಟ್ಟಿಗೆ ಚೂರನ್ನು ತೆಗೆದುಕೊಳ್ಳಬೇಕು ನಂತರ ಅದನ್ನು ತುಕ್ಕು ಹಿಡಿದಿರುವ ಬಾಣಲಿ ಅಥವಾ ಕಾವಲಿ ಮೇಲೆ ಹಾಕಿ ಸ್ವಲ್ಪ ನೀರನ್ನು ಹಾಕಿ ಪಾತ್ರೆ ಉಜ್ಜುವ ಬ್ರಶ್ ಅನ್ನು ತೆಗೆದುಕೊಂಡು ಚೆನ್ನಾಗಿ ಉಜ್ಜಬೇಕು, ಹೀಗೆ ಮಾಡುವುದರಿಂದ ವಸ್ತುಗಳಲ್ಲಿ ಕಟ್ಟಿರುವಂತಹ ತುಕ್ಕು ಇಡಿದಿರುವುದು ಕಡಿಮೆಯಾಗುತ್ತದೆ.ಎರಡನೆಯದಾಗಿ, ಸ್ವಲ್ಪ ಹುಣಿಸೆಹಣ್ಣನ್ನು ನೆನಪಿಟ್ಟುಕೊಂಡು ಅದನ್ನು ಕಬ್ಬಿಣದ ಬಾಣಲಿ ಅಥವಾ ಕಬ್ಬಿಣದ ಕಾವಲಿಗೆ ಚೆನ್ನಾಗಿ ಉಜ್ಜಿ ಇದರಿಂದ ತುಕ್ಕು ಹಿಡಿದಿರುವುದು ಕಡಿಮೆಯಾಗುತ್ತದೆ. ಮೂರನೆಯದಾಗಿ ನೀವು ಪ್ರತಿನಿತ್ಯವೂ ಪಾತ್ರೆ ತೊಳೆಯುವ ಸಾಬೂನಿಂದ ಸ್ಟೀಲ್ ಬ್ರಾಶ್ ತೆಗೆದುಕೊಂಡು ಚೆನ್ನಾಗಿ ಉಜ್ಜಿ ತೊಳೆಯಿರಿ, ಕೇವಲ ಐದೇ ನಿಮಿಷದಲ್ಲಿ ನಿಮ್ಮ ಕಬ್ಬಿಣದ ಬಾಂಡಲಿ ಹೊಳೆಯಲು ಶುರುವಾಗುತ್ತದೆ.
ನಾಲ್ಕನೆಯದಾಗಿ ತೊಳೆದ ನಂತರ ಒಂದು ಕಾಟನ್ ಬಟ್ಟೆಯಿಂದ ಬಾಣಲಿಯನ್ನು ಸ್ವಲ್ಪ ತೇವಾಂಶ ಇರದ ಹಾಗೆ ವರೆಸಿ ಇಡುವುದರಿಂದ ಮತ್ತೆ ತುಕ್ಕುಗಟ್ಟುವುದು ಕಡಿಮೆಯಾಗುತ್ತದೆ.ಇದೇ ರೀತಿ ಯಾವುದೇ ಕಬ್ಬಿಣದ ವಸ್ತುಗಳು ನಿಮ್ಮ ಬಳಿ ಇದ್ದರೆ ಇಟ್ಟಿಗೆ ಪುಡಿ , ಹುಣಸೆಹಣ್ಣು ಹಾಗೂ ನೀವು ಪ್ರತಿನಿತ್ಯ ಬಳಸುವ ಸಾಬೂನಿನಿಂದ ಕಬ್ಬಿಣದ ದೋಸೆ ಕಾವಲಿ, ರೊಟ್ಟಿ ಕಲ್ಲು ಇನ್ನು ಮುಂತಾದ ಕಬ್ಬಿಣದ ವಸ್ತುಗಳನ್ನು ನಾವು ಪಳಪಳನೆ ಹೊಳೆಯುವ 5 ನಿಮಿಷದಲ್ಲಿ ಮಾಡಿಬಿಡಬಹುದು. ನಂತರ ದೋಸೆ ಕಾವಲಿ ಮತ್ತು ರೊಟ್ಟಿ ಕಾವಲಿಯ ಮೇಲೆ ಎಣ್ಣೆ ಹಾಕಿ ಅರ್ಧ ದಷ್ಟು ಈರುಳ್ಳಿಯನ್ನು ಅದಕ್ಕೆ ಉಜ್ಜಬೇಕು ನಂತರ ದೋಸೆ ಅಥವಾ ರೊಟ್ಟಿ ಮಾಡಿದರೆ ಬಹಳ ಚೆನ್ನಾಗಿ ಬರುತ್ತದೆ ಯಾವುದೇ ರೀತಿಯ ಅಂಟಿಕೊಳ್ಳುವುದು ದೋಸೆ ಅಥವಾ ರೊಟ್ಟಿ ಕಿತ್ತು ಹೋಗುವುದು ಹೀಗೆ ಆಗುವುದಿಲ್ಲ. ಕೆಲವರು ಹೇಳುತ್ತಾರೆ ಹೀಗೆ ಹೊಸದಾಗಿ ತೆಗೆದುಕೊಂಡು ದೋಸೆ ಕಲ್ಲು ಬಾಣಲಿ ಇವುಗಳನ್ನು ಸ್ವಲ್ಪ ದಿಸ ಹಾಗೆ ಬಿಡುವುದರಿಂದ ಸರಿ ಹೋಗುತ್ತದೆ ಎಂದು ಅದು ನಮ್ಮ ತಪ್ಪು ಕಲ್ಪನೆಯಾಗಿದೆ ನಾವು ಹೇಳಿದ ಹಾಗೆ ಮಾಡಿದರೆ ನಿಮ್ಮ ಕಬ್ಬಿಣದ ವಸ್ತುಗಳು ಹೊಳಪನ್ನು ಪಡೆಯುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದು.
ಮನೆಯಲ್ಲಿ ಕಬ್ಬಿಣದ ಅಂಚು ಇದ್ದರೆ ಅಥವಾ ಕಾವಲಿ ಇದ್ದರೆ ಅದನ್ನು ಈ ವಿಧಾನದಲ್ಲಿ ಪಳಗಿಸಿ..ಈ ವಿಡಿಯೋ ನೋಡಿ.

Cook
[irp]