ಗಂಡಸರಲ್ಲಿ ಎಷ್ಟು ವಿಧ ನಿಮ್ಮ ವಿಧ ಯಾವುದು ನೋಡಿ..ಆಲ್ಪಾ,ಬೀಟಾ,ಗಾಮ,ಒಮೆಗಾ » Karnataka's Best News Portal

ಗಂಡಸರಲ್ಲಿ ಎಷ್ಟು ವಿಧ ನಿಮ್ಮ ವಿಧ ಯಾವುದು ನೋಡಿ..ಆಲ್ಪಾ,ಬೀಟಾ,ಗಾಮ,ಒಮೆಗಾ

ಗಂಡಸರಲ್ಲಿ ಎಷ್ಟು ವಿಧ..! ಅವ್ಯಾವುವೂ ನಿಮಗೆ ಗೊತ್ತೇ..?ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬ ವ್ಯಕ್ತಿಯೂ ಅವರದೇ ಆದಂತಹ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅದೇ ರೀತಿ ಯಾರೊಬ್ಬರ ವ್ಯಕ್ತಿತ್ವ ಕೂಡ ಒಂದೇ ರೀತಿ ಇರುವುದಿಲ್ಲ, ಇನ್ನೂ ಚಿಕ್ಕ ವಯಸ್ಸಿನ ಮಕ್ಕಳ ವ್ಯಕ್ತಿತ್ವವನ್ನು ಗುರುತಿಸಲು ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಮಕ್ಕಳಿಗೆ ಸಮಾಜದ ಅರಿವು ಮತ್ತು ಪ್ರಜ್ಞೆ ಇರುವುದಿಲ್ಲ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ವ್ಯಕ್ತಿತ್ವ ಎಂಬುದು ಬರುತ್ತದೆ. ಒಂದು ವ್ಯಕ್ತಿತ್ವವನ್ನು ಇರುವ ಜಾಗ ಮತ್ತು ಅವನ ಸುತ್ತಲೂ ಇರುವ ಜನರ ನಡುವೆ ಅವನು ಹೇಗೆ ಬೆಳೆಯುತ್ತಾನೆ ಎಂಬುದರ ಮೇಲೆ ಅವನ ವ್ಯಕ್ತಿತ್ವ ಕಂಡುಬರುತ್ತದೆ. ನಮ್ಮ ಒಂದು ವ್ಯಕ್ತಿತ್ವದ ಮೇಲೆ ಸಮಾಜದಲ್ಲಿ ಬೆಲೆ ಮತ್ತು ಗೌರವ ಹೇಗೆ ಕೊಡಬೇಕು ಎಂಬುದು ನಿರ್ಧಾರವಾಗುತ್ತದೆ. ಈ ಒಂದು ಲೇಖನದಲ್ಲಿ ನಾವು ಗಂಡಸರ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳೋಣ.ಗಂಡಸರು ಮುಖ್ಯವಾಗಿ ಐದು ರೀತಿಯ ವ್ಯಕ್ತಿತ್ವವನ್ನು ಒಳಗೊಂಡಿರುತ್ತವೆ ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ, ಆಲ್ಫಾ ಮೇಲ್ಸ್ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ ಬಹಳ ಕಾನ್ಫಿಡೆನ್ಸ್ ಇರುವ ವ್ಯಕ್ತಿಯಾಗಿರುತ್ತಾರೆ. ಇವರು ಫಲಿತಾಂಶಗಳಿಗೆ ಸಂಬಂಧವಿಲ್ಲದೆ ಯಾವುದೇ ಪರಿಸ್ಥಿತಿಯನ್ನು ಸಹಾಯ ಮಾಡುವ ಧೈರ್ಯವನ್ನು ಹೊಂದಿರುತ್ತಾರೆ, ಅವರು ತುಂಬಾ ಬುದ್ಧಿವಂತರಾಗಿರುತ್ತಾರೆ

ಮತ್ತು ಜೀವನದಲ್ಲಿ ಸಾಧನೆ ಮಾಡಿದ ದೊಡ್ಡ ದೊಡ್ಡ ವ್ಯಕ್ತಿಗಳನ್ನು ಆಲ್ಫಾ ಮೇಲ್ಸ್ ಎನ್ನಬಹುದು. ಎರಡನೆಯದಾಗಿ ಬೀಟಾ ಮೇಲ್ಸ್ ಇವರು ಹೆಚ್ಚಾಗಿ ಸ್ನೇಹಿತರ ಜೊತೆ ಕಾಲಕಳೆಯುವ ರಾಗಿರುತ್ತಾರೆ ಮತ್ತು ಇವರಿಗೆ ಇವರ ಮೇಲೆ ಆತ್ಮವಿಶ್ವಾಸ ಕಡಿಮೆಯಾಗಿರುತ್ತದೆ. ಇವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಬೇರೆಯವರ ಮೇಲೆ ಅವಲಂಬಿತರಾಗಿರುತ್ತಾರೆ.ಮೂರನೆಯದಾಗಿ, ಒಮೆಗಾ ಮೇಲ್ಸ್ ಈ ವ್ಯಕ್ತಿಯು ಬಹಳ ನಿಯತ್ತಿನಿಂದ ಮತ್ತು ಪ್ರಾಮಾಣಿಕತೆಯಿಂದ ಎಲ್ಲಾ ಕೆಲಸಗಳನ್ನು ಯಾರ ಸಹಾಯವಿಲ್ಲದೆ ಮಾಡುತ್ತಾರೆ ಮತ್ತು ತಮ್ಮ ಸುತ್ತಮುತ್ತ ಇರುವ ಸ್ನೇಹಿತರನ್ನು ಖುಷಿಯಾಗಿ ಇಡಲು ಬಯಸುತ್ತಾರೆ. ನಾಲ್ಕನೆಯದಾಗಿ, ಗಾಮಾ ಮೇಲ್ಸ್ ಇವರು ಹೊಸ ಹೊಸ ಕೆಲಸಗಳನ್ನು ಕಲಿಯಲು ಆಸಕ್ತರಾಗಿರುತ್ತಾರೆ ಮತ್ತು ಹೆಚ್ಚಾಗಿ ಸ್ವತಂತ್ರವಾಗಿರಲು ಬಯಸುತ್ತಾರೆ. ಹಾಗೂ ಎಲ್ಲರೂ ಅವರನ್ನು ಗೌರವದಿಂದ ನೋಡಿ ನೋಡಬೇಕು ಎಂದುಕೊಳ್ಳುತ್ತಾರೆ. ಐದನೆಯದಾಗಿ ಸಿಗ್ಮಾ ಮೇಲ್ಸ್ ಇವರು ಸಮಾಜದಿಂದ ದೂರವಿದ್ದು ತಮ್ಮ ಜೀವನವನ್ನು ಸಾಗಿಸಲು ಇಷ್ಟಪಡುತ್ತಾರೆ ಮತ್ತು ಇವರು ಯಾರ ಮಾತನ್ನು ಕೇಳಲು ಇಷ್ಟಪಡುವುದಿಲ್ಲ ಇವರ ಮಾಡುವ ಕೆಲಸ ಎಲ್ಲಾ ಸರಿ ಎಂಬುದು ಇವರ ಭಾವನೆಯಾಗಿದೆ. ಹಾಗೂ ಇವರು ಸಹ ಬಹಳ ಬುದ್ಧಿವಂತರಾಗಿರುತ್ತಾರೆ ಇದರಿಂದ ತಮ್ಮನ್ನು ತಾವು ಹೊಸ ಹೊಸ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತಾರೆ ಎಂದು ಹೇಳಬಹುದು.

WhatsApp Group Join Now
Telegram Group Join Now


crossorigin="anonymous">