ಪುನೀತ್ ಬೆನ್ನಲ್ಲೆ ತಂದೆಯನ್ನೂ ಕಳೆದುಕೊಂಡ ಅಶ್ವಿನಿ ಪುನೀತ್,ಅಪ್ಪು ಕೊರಗಿನಲ್ಲಿ ಪ್ರಾಣಬಿಟ್ರು...? - Karnataka's Best News Portal

ಪುನೀತ್ ಬೆನ್ನಲ್ಲೇ ತಂದೆಯನ್ನು ಕಳೆದುಕೊಂಡ ಅಶ್ವಿನಿ ಪುನೀತ್ ರಾಜಕುಮಾರ್.ನಮಸ್ತೆ ಸ್ನೇಹಿತರೆ, ನಟ ಪುನೀತ್​ ರಾಜ್​ಕುಮಾರ್ ಅವರನ್ನು ಕಳೆದುಕೊಂಡ ನೋವು ಮಾಸುವ ಮುನ್ನವೇ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ​ಇಂದು ಅಶ್ವಿನಿ ಅವರ ತಂದೆ ರೇವನಾಥ್​ ನಿಧನರಾಗಿದ್ದಾರೆ. 78 ವರ್ಷದ ರೇವನಾಥ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ​ ಅಶ್ವಿನಿ ಪುನೀತ್​ ರಾಜ್​ಕುಮಾರ್ ತಂದೆ ರೇವನಾಥ್​ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆಯ ಮೂಲದವರಾಗಿದ್ದಾರೆ. ಇವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್​ ಆಗಿ ಕಾರ್ಯನಿರ್ವಹಿಸಿದ್ರು. ಚೆನ್ನಾಗಿಯೇ ಓಡಾಡಿಕೊಂಡಿದ್ದ ರೇವನಾಥ್​ ದಿಢೀರನೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದರಿಂದಾಗಿ, ಅಶ್ವಿನಿ ಪುನೀತ್​ ರಾಜ್​ ಕುಮಾರ್​ಗೆ ದೊಡ್ಡ ಆಘಾತ ಉಂಟುಮಾಡಿದೆ. ಭಾನುವಾರ ಬೆಳಗ್ಗೆ ವಾಕ್ ಮಾಡುವಾಗ ರೇವನಾಥ್​ ಕುಸಿದು ಬಿದ್ದಿದ್ದರು. ನಂತರ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ರೀತಿಯೇ ರೇವನಾಥ್ ಫ್ಯಾಮಿಲಿ ಕೂಡ ನೇತ್ರದಾನಕ್ಕೆ ಮುಂದಾಗಿದ್ದಾರೆ. ಅಳಿಯ ಪುನೀತ್​ ರಾಜ್​ಕುಮಾರ್​ ರೀತಿ ರೇವನಾಥ್​ ಕೂಡ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಸದಾ ಫಿಟ್​ ಆಗಿರುತ್ತಿದ್ದ ಪುನೀತ್​ ರಾಜ್​ಕುಮಾರ್​ ಅವರಿಗೆ ಹಾರ್ಟ್​ ಅಟ್ಯಾಕ್​ ಆಗಲಿದೆ ಎಂದು ಯಾರೂ ಊಹಿಸಿರಲಿಲ್ಲ.ಆದರೆ ವಿಧಿಯ ಕ್ರೂರತೆಗೆ ಅವರು ಇಹಲೋಕ ತ್ಯಜಿಸುವಂತಾಯಿತು. ಆ ಘಟನೆ ನಡೆದ ಬಳಿಕ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಸೇರಿದಂತೆ ಪುನೀತ್​ ಅವರ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆದಿತ್ತು.ಅದರಲ್ಲೂ ಪುನೀತ್​ ಪತ್ನಿ ಅಶ್ವಿನಿ ಅವರಿಗೆ ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಎಲ್ಲರೂ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಪರಭಾಷೆಯ ಅನೇಕ ಸ್ಟಾರ್​ ಕಲಾವಿದರು ಮತ್ತು ತಂತ್ರಜ್ಞರು ಪುನೀತ್​ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿಗೆ ಧೈರ್ಯ ತುಂಬುತ್ತಿದ್ದಾರೆ. ಇನ್ನೇನು ಅವರು ಸಹಜ ಸ್ಥಿತಿಗೆ ಮರಳಲಿದ್ದಾರೆ ಎನ್ನುವಾಗಲೇ ಅವರ ಕುಟುಂಬದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ತಂದೆಯ ನಿಧನದಿಂದ ಅಶ್ವಿನಿ ಅವರಿಗೆ ತೀವ್ರ ನೋವಾಗಿದೆ. ಅಶ್ವಿನಿ ಅವರು ಮತ್ತೊಮ್ಮೆ ಕಣ್ಣೀರಿನ ಮಡುವಿನಲ್ಲಿ ದುಃಖದಲ್ಲಿ ಮುಳುಗಿದ್ದಾರೆ. ಪುನೀತ್ ಅವರ ನಿಧನದ ಸಂದರ್ಭದಲ್ಲಿ ನನ್ನ ಮಗಳ ಜೀವನ ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೀಗಾಯಿತಲ್ಲ ಎಂದು ಚಿಂತೆಗೆ ಒಳಗಾಗಿದ್ದ ರಂತೆ ತನ್ನ ಮಗಳ ಬಾಳನ್ನು ಹಸನು ಮಾಡಬೇಕೆಂದು ಅನೇಕ ಪ್ರಯತ್ನಗಳನ್ನು ಮಾಡಿದ್ದರಂತೆ ತನ್ನ ಮಗಳಿಗೆ ಈಗ ಸಾಂತ್ವನ ನೀಡಲು ಅವರಿಲ್ಲ ಅಶ್ವಿನಿ ಅವರಿಗೆ ಆ ದೇವರು ಧೈರ್ಯವನ್ನು ನೀಡಲಿ ಎಂದು ಬೇಡಿಕೊಳ್ಳೋಣ.

By admin

Leave a Reply

Your email address will not be published. Required fields are marked *