ಒಂಭತ್ತು ವಾರಗಳ ಚಮತ್ಕಾರಿ ಶ್ರೀ ಸಾಯಿ ಬಾಬಾ ವ್ರತ,ಈ ಪೂಜೆ ಮಾಡಿದರೆ ನೀವು ಅಂದುಕೊಂಡ ಕೆಲಸ ಆಗುತ್ತೆ ಹಣಕಾಸು,ನಿರುದ್ಯೋಗ,ದಾಂಪತ್ಯ ಸಮಸ್ಯೆ ದೂರ - Karnataka's Best News Portal

ಒಂಭತ್ತು ವಾರಗಳ ಚಮತ್ಕಾರಿ ಶ್ರೀ ಸಾಯಿ ಬಾಬಾ ವ್ರತ,ಈ ಪೂಜೆ ಮಾಡಿದರೆ ನೀವು ಅಂದುಕೊಂಡ ಕೆಲಸ ಆಗುತ್ತೆ ಹಣಕಾಸು,ನಿರುದ್ಯೋಗ,ದಾಂಪತ್ಯ ಸಮಸ್ಯೆ ದೂರ

9 ವಾರಗಳ ಚಮತ್ಕಾರಿ ಸಾಯಿಬಾಬಾ ವ್ರತ.ನಮಸ್ತೆ ಸ್ನೇಹಿತರೆ, ಹೇಗೆ ಯಾವ ವಿಧಾನದಲ್ಲಿ ಸಾಯಿಬಾಬಾರ ವ್ರತ ಮಾಡಬೇಕು ಮತ್ತು ಹೇಗೆ ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗಬೇಕು ಎಂಬುದರ ಬಗ್ಗೆ ತಿಳಿಯೋಣ ಬನ್ನಿ. ಮನೆಯ ಒಂದು ಭಾಗದಲ್ಲಿ ಅಥವಾ ದೇವರ ಮನೆಯಲ್ಲಿ ಒಂದು ಮಣೆಯಿಟ್ಟು ಆ ಮನೆಯ ಮೇಲೆ ಬಾಬಾರ ವಿಗ್ರಹವನ್ನು ಇಟ್ಟು ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ಬಾಬಾ ವಿಗ್ರಹವನ್ನು ನೆಲದ ಮೇಲೆ ಇಡಬಾರದು. ಈ ಪೂಜೆಗೆ ಬೇಕಾಗಿರುವ ಸಾಮಗ್ರಿಗಳು ಏನೆಂದು ತಿಳಿಯೋಣ, ಹೂವು-ಹಣ್ಣು, ಕರ್ಪೂರ, ಕುಂಕುಮ,ಬಾಬಾ ಫೋಟೋ ಅಥವಾ ವಿಗ್ರಹ ಮತ್ತು ವಿಗ್ರಹ ಪೀಠ ಮತ್ತು ನೈವೇದ್ಯ.ಪ್ರತಿ ಗುರುವಾರ 9 ವಾರಗಳ ತನಕ ಸಾಯಿಬಾಬಾ ವ್ರತ ಮಾಡಬೇಕು.ಪ್ರತಿ ಗುರುವಾರ ಬೆಳಿಗ್ಗೆ 9ಗಂಟೆಗೆ ಪೂಜೆಯನ್ನು ಮುಗಿಸಿರಬೇಕು.ಬಾಬಾ ವಿಗ್ರಹವನ್ನು ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇಟ್ಟಿರಬೇಕು. ಯಾವ ಜಾಗದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ ಆ ಜಾಗವನ್ನು ಮೊದಲು ಸೂಚಿ ಗೊಳಿಸಿ, ರಂಗೋಲಿ ಇಟ್ಟು, ಅದರ ಮೇಲೆ ಪೀಠವನ್ನು ಇಟ್ಟು ಅದರ ಮೇಲೆ ಒಂದು ಬಿಳಿ ವಸ್ತ್ರವನ್ನು ಹಾಸಿ ಅದರ ಮೇಲೆ ಬಾಬಾ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು. ನಂತರ ಹೂವಿನ ಅಲಂಕಾರ ಮಾಡಿ ದೀಪಹಚ್ಚಿ ಪೂಜೆ ನೆರವೇರಿಸಬೇಕು. ನಂತರ 108 ಬಿಡಿ ಹೂಗಳನ್ನು ಒಂದು ತಟ್ಟೆಯಲ್ಲಿ ಇಟ್ಟುಕೊಂಡಿರಬೇಕು.

ಒಂಬತ್ತು ವಾರದ ಸಾಯಿಬಾಬಾ ವ್ರತ ಪುಸ್ತಕ ಎಂದು ನಿಮಗೆ ದೊರೆಯುತ್ತದೆ.ಪುಸ್ತಕವನ್ನು ತೆಗೆದುಕೊಂಡು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಬೇಕು, ಸಾಯಿಬಾಬಾ ಅವರ ಭಜನೆ ಹಾಡುಗಳು ಮತ್ತು ಪವಾಡಗಳ ಕತೆಗಳು ಇದೆ ಈ ಕಥೆಗಳನ್ನು ನೀವು ಓದಬೇಕು.ನಂತರ ಕೊನೆಯಲ್ಲಿ 108 ಅಷ್ಟೋತ್ತರಗಳನ್ನು ನೀವು ಒಂದೊಂದಾಗಿ ಹೇಳುತ್ತಾ ಪುಷ್ಪವನ್ನು ಬಾಬಾರಿಗೆ ಅರ್ಪಿಸಬೇಕು, ಪೂಜೆ ಮಾಡುವಾಗ ಒಂದು ಹೊತ್ತಿನ ಉಪವಾಸವಿದ್ದು ಪೂಜೆ ಮಾಡಬೇಕು. ನಂತರ ಒಂದು ದಿನ ಉಪವಾಸ ಬಿಡುವಾಗ ದೀಪಹಚ್ಚಿ ಕರ್ಪೂರ ಹಚ್ಚಿ ನೈವೇದ್ಯ ಅರ್ಪಿಸಿ ನಂತರ ಊಟ ಮಾಡಬೇಕು. ಹೀಗೆ ಒಂಬತ್ತು ಗುರುವಾರಗಳು ಮಾಡಬೇಕು ಕೊನೆಯ ವಾರದಂದು ನೀವು ಐದು ಜನರಿಗೆ ಊಟ ಹಾಕಿಸಬೇಕು ಅಥವಾ ದೇವಸ್ಥಾನಕ್ಕೆ ಹೋಗಿ 5 ಸಾಯಿಬಾಬಾ ರಥದ ಪುಸ್ತಕವನ್ನು ಪೂಜೆ ಮಾಡಿಸಿ ಐದು ಜನರಿಗೆ ನೀಡಬೇಕು ಇಲ್ಲಿಗೆ ನಿಮ್ಮ ಮುಗಿಯುತ್ತದೆ. ಹೀಗೆ ಮಾಡುವುದರಿಂದ ನೀವು ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ದೊರೆಯುತ್ತದೆ ನಿಮ್ಮ ಜೀವನದಲ್ಲಿ ಯಶಸ್ಸನ್ನು ನೀವು ಕಾಣಬಹುದಾಗಿದೆ.

See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

WhatsApp Group Join Now
Telegram Group Join Now
[irp]


crossorigin="anonymous">