ಬೆಳಗಿನ ಅವಸರದಲ್ಲಿ ಮನೆಯಲ್ಲಿ ಟೊಮೇಟೊ ಇಂದ ಈ ಮಜವಾದ ರೆಸಿಪಿ ಮಾಡಿನೋಡಿ. ನೀವು ಯಾವತ್ತೂ ತಿಂದಿರಲಿಲ್ಲ.ಒಂದೇ ರೀತಿಯಾದಂತಹ ತಿಂಡಿ ತಿಂದು ಬೇಜಾರಾಗಿದ್ದರೆ ಈ ಒಂದು ಹೊಸರುಚಿಯನ್ನು ಟ್ರೈ ಮಾಡಿ ನೋಡಿ ನಿಮಗೆ ತುಂಬಾ ಇಷ್ಟವಾಗುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಾಗಿರುವಂತಹದ್ದು ಟೊಮೇಟೊ 4 ಮೀಡಿಯಂ ಗಾತ್ರದ ಟೊಮೇಟೊ ತೆಗೆದುಕೊಂಡು ನಾಲ್ಕು ಕಡೆಯ ಅದನ್ನು ಚುಚ್ಚಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿಕೊಳ್ಳಿ ನಂತರ ಅದನ್ನು ಒಂದು ಪ್ಲೇಟ್ ಗೆ ತೆಗೆದುಯಿಟ್ಟು ತಣ್ಣಗಾಗಲು ಬಿಡಿ. ಮತ್ತೊಂದು ಬೌಲ್ ಗೆ ಅರ್ಧ ಕಪ್ ಚಿರೋಟಿ ರವೆ, ಕಾಲು ಕಪ್ ಅಕ್ಕಿ, ಕಾಲು ಕಪ್ ಕಡಲೆ ಹಿಟ್ಟನ್ನು ಹಾಕಿ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷಗಳ ಕಾಲ ಹಾಗೆ ಬಿಡಿ.ನಂತರ ಬೇಯಿಸಿ ಕೊಂಡಿರುವ ಟೊಮೆಟೊ ಸಿಪ್ಪೆಯನ್ನು ತೆಗೆದು ಕಟ್ ಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಅರ್ಧ ಇಂಚು ಶುಂಠಿ, ಒಂದು ಬೆಳ್ಳುಳ್ಳಿ, ನಾಲ್ಕು ಹಸಿರು ಮೆಣಸಿನಕಾಯಿ, 1 ಟೇಬಲ್ ಸ್ಪೂನ್ ಜೀರಿಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ
ನಂತರ ಇದನ್ನು ಮಿಕ್ಸ್ ಮಾಡಿ ಇರುವಂತಹ ಹಿಟ್ಟಿನಲ್ಲಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪಡ್ಡು ಮಾಡಲು ಹಿಟ್ಟು ರೆಡಿಯಾಗುತ್ತದೆ.ನಂತರ ಪಡ್ಡು ಕಲ್ಲನ್ನು ಒಲೆಯ ಮೇಲೆ ಇಡಿ. ಪಡ್ಡು ಕಲ್ಲಿಗೆ ಹಿಟ್ಟು ಹಾಕಿ ಇದರ ಮೇಲೆ ಸ್ವಲ್ಪ ಬಿಳಿ ಎಳ್ಳನ್ನು ಸೇರಿಸಿ ಎರಡು ಕಡೆ ಚೆನ್ನಾಗಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ ನಂತರ ಬೆಂದ ಮೇಲೆ ತೆಗೆಯಿರಿ. ಇದಕ್ಕೆ ಬೇಕಾಗಿರುವಂತಹ ಚಟ್ನಿ ಮಾಡಲು ಕಡಲೆ ಬೀಜ, ಹುರಿಗಡಲೆ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೆ ಹಣ್ಣು ಸೇರಿಸಿ ಗ್ರೈಂಡ್ ಮಾಡಿಕೊಳ್ಳಿ ನಂತರ ಈ ಚಟ್ನಿಗೆ ಒಗ್ಗರಣೆ ಮಾಡಲು ಒಂದು ಪ್ಯಾನ್ ಗೆ 2 ಟೇಬಲ್ ಸ್ಪೂನ್ ಎಣ್ಣೆ, 1 ಟೇಬಲ್ ಸ್ಪೂನ್ ಸಾಸಿವೆ, 1 ಟೇಬಲ್ ಸ್ಪೂನ್ ಕಡಲೆ ಬೇಳೆ, ಒಣಮೆಣಸಿನಕಾಯಿ, ಕರಿಬೇವು ಸೇರಿಸಿ ಒಗ್ಗರಣೆ ರೆಡಿಮಾಡಿಕೊಂಡು ಚಟ್ನಿಯಲ್ಲಿ ಮಿಕ್ಸ್ ಮಾಡಿ. ಈಗ ರುಚಿಯಾದ ಅಂತಹ ಪಡ್ಡು ಮತ್ತೆ ಚಟ್ನಿ ರೆಡಿಯಾಗುತ್ತದೆ.
ಮಜವಾದ ರೆಸಿಪಿ ಮುಂಚೆ ಯಾವತ್ತೂ ತಿಂದಿರೊಲ್ಲ.ಬೆಳಗಿನ ಅವಸರದಲ್ಲಿ ಟೊಮೊಟೊದಿಂದ ರೆಸಿಪಿ ಟ್ರೈ ಮಾಡಿ..ಬಹಳ ಚೆನ್ನಾಗಿರುತ್ತೆ..

Cook
[irp]