ಜಾಹೀರಾತಿನಲ್ಲಿಯೂ ಕೂಡ ನೀವು ಕಪ್ಪಗೆ ಇರುವಂತಹ ಹುಡುಗಿಯರನ್ನು ನೋಡುವುದಕ್ಕೆ ಸಾಧ್ಯವಿಲ್ಲ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಲಕ್ಷಣ ಎಂಬ ಧಾರಾವಾಹಿಯಲ್ಲಿ ಹೀರೋಯಿನ್ ಪಾತ್ರದಲ್ಲಿ ಕಾಣಿಸಿಕೊಂಡಿರುವಂತಹ ನಕ್ಷತ್ರ ಪಾತ್ರಧಾರಿಯ ನಟಿಯ ನಿಜವಾದ ಹೆಸರು ವಿಜಯಲಕ್ಷ್ಮಿ ಇವರು ಮೂಲತಃ ಕೋಲಾರ ಜಿಲ್ಲೆಗೆ ಸೇರಿದಂತಹ ಮಾಲೂರು ಗ್ರಾಮದವರು. ವಿಜಯಲಕ್ಷ್ಮಿ ಅವರು ಎಂಎಸ್ಸಿ ಇನ್ ಮ್ಯಾಥ್ಸ್ ನಲ್ಲಿ ಪದವಿಯನ್ನು ಪೂರೈಸಿದ್ದಾರೆ ಆದರೂ ಕೂಡ ಇವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಸತತ ಐದಾರು ವರ್ಷಗಳಿಂದಲೂ ಕೂಡ ಎಲ್ಲ ಧಾರಾವಾಹಿಗಳಿಗೆ ಹಾಗೂ ಆಡಿಷನ್ ಗಳನ್ನು ನೀಡುತ್ತಿದ್ದರು. ಇಲ್ಲಿಯವರೆಗೂ ಕೂಡ ಸುಮಾರು ಹತ್ತರಿಂದ ಹದಿಮೂರು ಆಡಿಶನ್ ಗಳನ್ನು ನೀಡಿದ್ದಾರೆ ಆದರೆ ವಿಜಯಲಕ್ಷ್ಮಿ ಅವರು ಯಾವ ಆಡಿಶನ್ ನಲ್ಲೂ ಕೂಡ ಸೆಲೆಕ್ಟ್ ಆಗಲಿಲ್ಲ ಇದಕ್ಕೆ ಮುಖ್ಯ ಕಾರಣ ಅವರ ಬಣ್ಣ.ಹೌದು ಸಾಮಾನ್ಯವಾಗಿ ಜಾಹೀರಾತು, ಕಿರುತೆರೆ ಅಥವಾ ಬೆಳ್ಳಿತೆರೆ ಇನ್ನು ಮುಂತಾದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕದರೂ ಕೂಡ ಸೌಂದರ್ಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಾರೆ.
ನಟಿಯನ್ನು ನೋಡಿದ ತಕ್ಷಣ ಎಲ್ಲರ ಗಮನ ಸೆಳೆಯುವಂತಹ ಅಂದವನ್ನು ಹೊಂದಿರಬೇಕು ಅಂತ ತುಂಬಾ ಜನ ನಿರೀಕ್ಷೆ ಮಾಡುತ್ತಾರೆ. ಆದರೆ ನಕ್ಷತ್ರ ಪಾತ್ರಧಾರಿಯ ವಿಜಯಲಕ್ಷ್ಮಿಯವರು ನೋಡುವುದಕ್ಕೆ ತುಂಬಾ ಕಪ್ಪಾಗಿದ್ದ ಕಾರಣ ಇವರನ್ನು ಯಾರು ಕೂಡ ಆಯ್ಕೆ ಮಾಡಿಕೊಳ್ಳುವುದಿಲ್ಲ. ಈ ಒಂದು ಕಾರಣಕ್ಕಾಗಿ ವಿಜಯಲಕ್ಷ್ಮಿ ಅವರು ಎಷ್ಟು ಬಾರಿ ಆಡಿಶನ್ ಕೊಟ್ಟರು ಕೂಡ ಎಲ್ಲದರಲ್ಲೂ ಕೂಡ ರಿಜೆಕ್ಟ್ ಆಗುತ್ತಿದ್ದರು. ಆದರೂ ಕೂಡ ವಿಜಯಲಕ್ಷ್ಮಿಯವರು ತಮ್ಮ ಛಲವನ್ನು ಬಿಡುವುದಿಲ್ಲ ಹೇಗಾದರೂ ಮಾಡಿ ನಾನು ನಟನೆ ಮಾಡಬೇಕು ಅಂತ ಸಿಕ್ಕಸಿಕ್ಕ ಆಡಿಶನ್ ಗಳಿಗೆ ಸ್ಪರ್ಧೆಯನ್ನು ನೀಡುತ್ತಿದ್ದರು.
ಅದೇ ವೇಳೆಯಲ್ಲಿ ಲಕ್ಷಣ ಸೀರಿಯಲ್ ಆಡಿಷನ್ ನೆಡೆಯುತ್ತಿರುತ್ತದೆ ಈ ಸಮಯದಲ್ಲಿ ವಿಜಯಲಕ್ಷ್ಮಿಯವರು ಈ ಒಂದು ಕಾರ್ಯಕ್ರಮದಲ್ಲಿ ಕೂಡ ಆಡಿಶನ್ ನೀಡುವುದಕ್ಕೆ ಭಾಗವಹಿಸುತ್ತಾರೆ. ಲಕ್ಷಣ ಸೀರಿಯಲ್ ನಲ್ಲಿ ವಿಜಯಲಕ್ಷ್ಮಿ ನಿಜಜೀವನದಲ್ಲಿ ಹೇಗಿದ್ದರೋ ಅದೇ ರೀತಿಯಾದಂತಹ ಹುಡುಗಿಯ ಪಾತ್ರವನ್ನು ಮಾಡಬೇಕಾದಂತಹ ಸನ್ನಿವೇಶ ಬರುತ್ತದೆ. ಹಾಗಾಗಿ ಈ ಧಾರಾವಾಹಿಯ ನಿರ್ಮಾಣ ಹಾಗೂ ನಟನ ಸ್ಥಾನದಲ್ಲಿ ಇದ್ದಂತಹ ಜಗನ್ ಅವರು ಲಕ್ಷಣ ಸೀರಿಯಲ್ ಗೆ ಈ ಹುಡುಗಿಯನ್ನು ಹೀರೋಯಿನ್ ಮಾಡಬೇಕು ಅಂತ ಅಂದುಕೊಳ್ಳುತ್ತಾರೆ. ವಿಜಯ ಲಕ್ಷ್ಮಿ ಅವರು ಚಾಲೆಂಜಿಂಗ್ ರೋಲ್ ನಲ್ಲಿ ನಟಿಸಬೇಕು ಎಂಬ ಆಸೆ ಹೊಂದಿರುತ್ತಾರೆ ಅದೇ ರೀತಿಯಾದಂತಹ ಪಾತ್ರ ಕೂಡ ಇವರಿಗೆ ದೊರೆಯುತ್ತದೆ.