ಬಿಪಿ ಸಮಸ್ಯೆ, ರಕ್ತದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ವಿಧಾನ.ಸಾಮಾನ್ಯವಾಗಿ ಇತ್ತೀಚಿನ ದಿನದಲ್ಲಿ ಚಿಕ್ಕ ಮಕ್ಕಳಲ್ಲಿಯೂ ಕೂಡ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಅಚ್ಚರಿ ಅಂತನೇ ಹೇಳಬಹುದು. ಮೊದಲ 50, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ರೀತಿ ರಕ್ತದೊತ್ತಡದ ಸಮಸ್ಯೆ ಕಾಣಿಸುತ್ತಿತ್ತು ಆದರೆ ಈಗ ಚಿಕ್ಕ ಮಕ್ಕಳಲ್ಲಿ ಇಂತಹ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ಎಂದರೆ ನಮ್ಮ ಜೀವನಶೈಲಿ ಅಂತ ಹೇಳಬಹುದು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದಿದ್ದರೆ ಅಥವಾ ಸರಿಯಾದ ಸಮಯಕ್ಕೆ ನಿದ್ರೆ ಮಾಡದೇ ಇದ್ದರೆ ಅಥವಾ ಅಧಿಕವಾಗಿ ಯೋಚನೆ ಮಾಡುವುದು ಅಥವಾ ಒತ್ತಡವನ್ನು ನೀಡುವಂತಹ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಇಂತಹ ಕಾರ್ಯಗಳನ್ನು ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಹಾಗಾಗಿ ಇಂದು ರಕ್ತದೊತ್ತಡವನ್ನು ಯಾವ ರೀತಿ ನಿವಾರಣೆ ಮಾಡಿಕೊಳ್ಳಬಹುದು ಯಾವ ಮನೆಮದ್ದನ್ನು ಸೇವಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.
ಮೇಲೆ ನಾವು ತಿಳಿಸಿದಂತಹ ಎಲ್ಲಾ ವಿಚಾರಗಳು ಕೂಡ ಬಿಪಿ ಅಥವಾ ರಕ್ತದ ಒತ್ತಡ ಬರುವುದಕ್ಕೆ ಕಾರಣ ಇನ್ನೂ ಇದರ ಲಕ್ಷಣಗಳನ್ನು ನೋಡುವುದಾದರೆ. ಯಾರಿಗೆ ರಕ್ತದೊತ್ತಡದ ಸಮಸ್ಯೆ ಇರುತ್ತದೆ ಅಂತವರಿಗೆ ತಲೆಸುತ್ತು ಬರುತ್ತದೆ, ಬಾಯಾರಿಕೆ ಆಗುವುದು, ಗಂಟಲು ಒಣಗುವುದು, ಸುಸ್ತಾಗುವುದು ಅಥವಾ ಸ್ವಲ್ಪ ದೂರ ನಡೆದರೂ ಕೂಡ ಆಯಾಸ ಆಗುವುದು. ಇಂತಹ ಲಕ್ಷಣಗಳು ಬಿಪಿ ಸಮಸ್ಯೆ ಇದ್ದವರಿಗೆ ಕಂಡುಬರುತ್ತದೆ ಒಂದು ಸಮಸ್ಯೆಯನ್ನು ನೀವು ನಿವಾರಣೆ ಬಿ.ಪಿ ಕಂಟ್ರೋಲ್ ಮಾಡಿಕೊಳ್ಳಬೇಕು ಅಂದರೆ 21ದಿನಗಳ ಕಾಲ ಹಸಿ ತರಕಾರಿಯನ್ನು ಅಥವಾ ಮೊಳಕೆ ಕಾಳುಗಳನ್ನು ಅಥವಾ ಹಣ್ಣುಗಳನ್ನು ಸೇವನೆ ಮಾಡಬೇಕು. ಒಂದು ವೇಳೆ ನಿಮಗೆ ಹಾಗೆ ಸೇವೆ ಮಾಡಲು ಸಾಧ್ಯವಾಗದಿದ್ದಲ್ಲಿ ಜ್ಯೂಸ್ ಮಾದರಿಯಲ್ಲಿ ಇದನ್ನು ಸೇವನೆ ಮಾಡಬಹುದು.
ಈ ರೀತಿ ಮಾಡುವುದರಿಂದ ದೇಹದಲ್ಲಿ ಇರುವಂತಹ ರಕ್ತದೊತ್ತಡವನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಮುಖ್ಯವಾಗಿ ನೀವು ಆಲೂಗಡ್ಡೆ ಮತ್ತು ಬದನೆಕಾಯಿ ಅನ್ನು ಯಾವುದೇ ಕಾರಣಕ್ಕೂ ಕೂಡ 21 ದಿನ ಬಳಕೆ ಮಾಡಬಾರದು. ಅಷ್ಟೇ ಅಲ್ಲದೆ ಬಾಳೆಹಣ್ಣು ಮತ್ತು ಸೀಬೆಹಣ್ಣು ಇವೆರಡು ಹಣ್ಣುಗಳನ್ನು ಹೊರತು ಪಡಿಸಿ ಬೇರೆ ಎಲ್ಲಾ ರೀತಿಯಾದಂತಹ ಹಣ್ಣುಗಳನ್ನು ಕೂಡ ಸೇವನೆ ಮಾಡಬಹುದು. ಈ ರೀತಿಯಾಂತಹ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗುತ್ತದೆ. ಆಗ ದೇಹದ ರಕ್ತದ ಒತ್ತಡವು ನಿಯಮಿತ ಪ್ರಮಾಣದಲ್ಲಿ ನಿಯಂತ್ರಣವಾಗುತ್ತದೆ ಈ ಒಂದು ಪ್ರತಿಫಲವನ್ನು ಕೇವಲ 21 ದಿನದಲ್ಲಿ ನೀವು ಪಡೆಯಬಹುದು.