ಕುರಿ ಕೋಳಿ ಈ ರೀತಿ ಸಾಕಾಣಿಕೆ ಮಾಡಿದರೆ ವರ್ಷಕ್ಕೆ 10 ರಿಂದ 15 ಲಕ್ಷ ರೂಪಾಯಿ ಲಾಭ ದೊರೆಯುವುದು ಖಚಿತ.ಸಾಮಾನ್ಯವಾಗಿ ನಾವು ಯಾವುದೇ ಕೆಲಸ ಮಾಡಬೇಕಾದರೂ ಕೂಡ ಅದಕ್ಕೆ ಗುರಿ ಮತ್ತು ಪರಿಶ್ರಮ ಎಂಬುವುದು ತುಂಬಾನೇ ಮುಖ್ಯ ಹೌದು ಕೆಲವರಿಗಂತೂ ಯಾವುದಾದರೂ ಒಂದು ಬಿಸಿನೆಸ್ ಪ್ರಾರಂಭ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಇದಕ್ಕೆ ಹೆಚ್ಚಿನ ಬಂಡವಾಳವನ್ನು ಹಾಕಬೇಕಾಗುತ್ತದೆ ಹಾಗೂ ಬಿಸಿನೆಸ್ ಮಾಡುವುದಕ್ಕೆ ಯಾವುದೇ ರೀತಿಯಾದಂತಹ ಅನುಭವ ಇರುವುದಿಲ್ಲ ಹಾಗೂ ನಮ್ಮ ಬೆನ್ನೆಲುಬಾಗಿ ಮಾರ್ಗದರ್ಶನ ತೋರಿಸುವವರು ಯಾರೂ ಇರುವುದಿಲ್ಲ ಎಂಬ ಕಾರಣಕ್ಕಾಗಿ ಬಿಸಿನೆಸ್ ಮಾಡಬೇಕು ಎಂಬ ಆಸೆ ಇದ್ದರೂ ಕೂಡ ಸಾಕಷ್ಟು ಯುವಕರು ಹಿಂದೇಟು ಹಾಕುತ್ತಾರೆ. ಆದರೆ ಇಂದು ನಾವು ತಿಳಿಸುವಂತಹ ಈ ಮಾಹಿತಿಯನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಪ್ರೋತ್ಸಾಹ ಎಂಬುದು ದೊರೆಯಬಹುದು ಅಷ್ಟೇ ಅಲ್ಲದೆ ನೀವು ಹೊಸ ಬಿಸಿನೆಸ್ ಪ್ರಾರಂಭಿಸಬಹುದು.
ಇಂದು ಹೇಳುತ್ತಿರುವಂತಹ ಬಿಜಿನೆಸ್ ತುಂಬಾನೇ ಸಿಂಪಲ್ ಅಷ್ಟೇ ಅಲ್ಲದೆ ಮಾರುಕಟ್ಟೆಯಲ್ಲಿ ಸದಾಕಾಲ ಬೇಡಿಕೆ ಇರುವಂತಹ ಬಿಸಿನೆಸ್ ಹೌದು ಅದೇನೆಂದರೆ ಕೋಳಿ ಮತ್ತು ಕುರಿ ಸಾಕಾಣಿಕೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಇಂದು ಕುರಿ ಮತ್ತು ಕೋಳಿ ಮಾಂಸವನ್ನು ಖರೀದಿ ಮಾಡುತ್ತಾರೆ. ಇದಕ್ಕೆ ಸದಾಕಾಲ ಬೇಡಿಕೆ ಇರುತ್ತದೆ ಅಷ್ಟೇ ಅಲ್ಲದೆ ಇದಕ್ಕೆ ಬೆಲೆಯೂ ಕೂಡ ಹೆಚ್ಚು ಹಾಗಾಗಿ ತುಂಬಾ ಸುಲಭವಾಗಿ ಯಾವ ರೀತಿಯಾಗಿ ನಾವು ಕೋಳಿ ಸಾಕಾಣಿಕೆ ಮಾಡಬಹುದು ಇದಕ್ಕೆ ಸಾಕಾಣಿಕೆ ಮಾಡಲು ಬಂಡವಾಳವನ್ನು ಎಷ್ಟು ಹೂಡಿಕೆ ಮಾಡಬೇಕು ಹಾಗೂ ಆಹಾರ ಪದ್ಧತಿಯನ್ನು ಯಾವ ರೀತಿ ನೀಡಬೇಕು ಎಲ್ಲಿ ಸೇಲ್ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ.
ನಾವು ತಿಳಿಸುತ್ತಿರುವಂತಹ ಈ ಮಹಿಳೆ ಮೊದಲು ಅಪಾರ್ಟ್ಮೆಂಟ್ ಒಂದರಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ ಒಂದು ದಿನ ಯೂಟ್ಯೂಬ್ ನಲ್ಲಿ ಪ್ರಸಾರವಾಗುವ ವಿಡಿಯೋವನ್ನು ನೋಡಿ ನಾನು ಕೂಡ ಇದೇ ರೀತಿಯ ಕೋಳಿ ಸಾಕಾಣಿಕೆ ಮಾಡಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಈ ವಿಡಿಯೋ ಅಪ್ ಲೋಡ್ ಮಾಡಿದ ವ್ಯಕ್ತಿಯನ್ನು ಭೇಟಿ ಮಾಡಿ ಅವರಿಂದ ಎಲ್ಲಾ ಬಗೆಯ ಟ್ರೈನಿಂಗ್ ಅನ್ನು ತೆಗೆದುಕೊಳ್ಳುತ್ತಾರೆ. ತದನಂತರ ತಮ್ಮ ಊರಿನಲ್ಲಿಯೇ ಚಿಕ್ಕದೊಂದು ಜಾಗದಲ್ಲಿ ಪ್ರಾರಂಭದಲ್ಲಿ ಕೇವಲ 100 ಕೋಳಿಗಳನ್ನು ಸಾಕಣೆ ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ. ಇದರಿಂದ ಇಂದು ಇವರು ವರ್ಷಕ್ಕೆ 10 ರಿಂದ 15 ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ ಅಂದರೆ ನೀವು ಖಂಡಿತ ನಂಬಲೇಬೇಕು ಅದು ಹೇಗೆ ಅಂತೀರಾ ಈ ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ.