ಗೊರವನಹಳ್ಳಿ ಮಹಾಲಕ್ಷ್ಮಿ ದೇವಿಯ ಪವಾಡ ಕಮಲಮ್ಮ ಎಂಬ ಅಜ್ಜಿಗು ಮಹಾಲಕ್ಷ್ಮಿದೇವಿಗೂ ಏನು ನಂಟು ಗೊತ್ತ.ಎಲ್ಲರಿಗೂ ಕೂಡ ಸಾಮಾನ್ಯವಾಗಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಬಗ್ಗೆ ಗೊತ್ತಿರುತ್ತದೆ ಆದರೆ ಈ ಗೊರವನಹಳ್ಳಿಯಲ್ಲಿ ಇರುವಂತಹ ಮಹಾಲಕ್ಷ್ಮಿದೇವಿ ಯಾವ ರೀತಿಯಾಗಿ ಉದ್ಭವ ಆದಳು ಹಾಗೂ ಅಲ್ಲಿ ಇರುವಂತಹ ಕಮಲಮ್ಮ ಎಂಬ ಅಜ್ಜಿಗೂ ಮಹಾಲಕ್ಷ್ಮಿದೇವಿಗೂ ಏನು ನಂಟು, ಕಮಲ ಎಂಬ ಅಜ್ಜಿಯನ್ನು ಯಾಕೆ ಪೂಜಿಸುತ್ತಾರೆ ಇವೆಲ್ಲದರ ಬಗ್ಗೆ ಸಾಕಷ್ಟು ಜನರಿಗೆ ಸಂಪೂರ್ಣವಾದ ಮಾಹಿತಿ ತಿಳಿದಿರುವುದಿಲ್ಲ. ಹಾಗಾಗಿ ಇಂದು ಗೊರವನಹಳ್ಳಿಯಲ್ಲಿ ಇರುವಂತಹ ಶ್ರೀ ಮಹಾಲಕ್ಷ್ಮಿ ದೇವಿಗೆ ಸಂಬಂಧಪಟ್ಟಂತಹ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತೇವೆ ನೋಡಿ. ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಅಂದ ತಕ್ಷಣ ನಮಗೆ ನೆನಪಾಗುವುದು ಕೊಲ್ಲಾಪುರ ಹೌದು ಮಹಾರಾಷ್ಟ್ರಕ್ಕೆ ಸೇರಿದಂತಹ ಕೊಲ್ಲಾಪುರದಲ್ಲಿ ಇರುವಂತಹ ಮಹಾಲಕ್ಷ್ಮಿ ದೇವಿಯ ತುಂಬಾನೇ ಪ್ರಸಿದ್ಧಿ ಪಡೆದಂತಹ ದೇವಾಲಯ.
ಆದರೆ ನಮ್ಮ ಕರ್ನಾಟಕದ ತುಮಕೂರಿನ ಕೊರಟಗೆರೆ ಸೇರಿದಂತಹ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ದೇವಿ ಕೂಡ ಅಷ್ಟೇ ಪ್ರಸಿದ್ಧಿಯನ್ನು ಪಡೆದಿದೆ. ಇನ್ನು ಈ ಗೊರವನಹಳ್ಳಿಯಲ್ಲಿ ಇರುವಂತಹ ಮಹಾಲಕ್ಷ್ಮಿದೇವಿ ಉದ್ಭವ ಆಗುವುದಕ್ಕೆ ಒಂದು ಇತಿಹಾಸವೇ ಇದೆ ಇತಿಹಾಸ ಏನು ಅಂತ ನೋಡುವುದಾದರೆ. ಗೊರವನಹಳ್ಳಿ ಮೈಸೂರು ರಾಜರ ಆಳ್ವಿಕೆಯಲ್ಲಿ ಅಂದರೆ 1750 ರ ವೇಳೆಯಲ್ಲಿ ಒಂದು ಸಣ್ಣ ಹಳ್ಳಿಯಾಗಿ ಮಾರ್ಪಾಡು ಹೊಂದಿದ್ದು ಈ ಹಳ್ಳಿಯಲ್ಲಿ ಕೇವಲ ಒಂದೇ ಒಂದು ಒಕ್ಕಲು ಇತ್ತು ಯದವ ಮನೆತನಕ್ಕೆ ಸೇರಿದಂತಹ ಏಳರಿಂದ ಎಂಟು ಕುಟುಂಬಗಳು ಈ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದರು. ಈ ಕುಟುಂಬದಲ್ಲಿ ಅಬ್ಬಯ್ಯ ಎಂಬ ಒಬ್ಬ ಯುವಕ ಇದ್ದ ಈತನಿಗೆ ಅಪ್ಪ ಇರಲಿಲ್ಲ.
ಅಮ್ಮನ ಜೊತೆ ಕೃಷಿಯಲ್ಲಿ ಪಾಲ್ಗೊಂಡಿದ್ದ ಅಷ್ಟೇ ಅಲ್ಲದೆ ಒಂದು ಹಸುವನ್ನು ಕೂಡ ಸಾಕಾಣಿಕೆ ಮಾಡಿ ಅದರಿಂದ ಹಾಲನ್ನು ಕರೆದುಕೊಂಡು ಜೀವನ ಸಾಗಿಸುತ್ತಿದ್ದ. ಒಂದು ದಿನ ಅಬ್ಬಯ್ಯ ಕೃಷಿಯನ್ನು ಮಾಡಿ ಹಸು ಸಾಕಾಣಿಕೆ ಮಾಡಿದ ನಂತರ ಕೆರೆಯಲ್ಲಿ ಕೈಕಾಲು ತೊಳೆಯುತ್ತಿದ್ದ. ಆ ಸಮಯದಲ್ಲಿ ಆತನಿಗೆ ಹೆಣ್ಣಿನ ಧ್ವನಿಯೊಂದು ಕೇಳಿಸುತ್ತದೆ ಆದರೆ ಅಬ್ಬಯ್ಯ ಇದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಬ್ರಮೆ ಇರಬೇಕು ಅಂತ ಸುಮ್ಮನಾಗುತ್ತಾನೆ. ಪ್ರತಿನಿತ್ಯವೂ ಕೂಡ ಅಬ್ಬಯನಿಗೆ ಕೆರೆಯ ಪಕ್ಕದಲ್ಲಿ ಇದೆ ರೀತಿಯಾದಂತಹ ಧ್ವನಿ ಕೇಳುತ್ತದೆ. ಆ ಹೆಣ್ಣಿನ ಧ್ವನಿಯಲ್ಲಿ ನಾನು ನಿನ್ನ ಮನೆಗೆ ಬರುತ್ತೇನೆ ಕರೆದುಕೊಂಡು ಹೋಗು ಅಂತ ಹೇಳುತ್ತದೆ ಮುಂದೇನಾಯಿತು ಅಂತ ತಿಳಿಯುವುದಕ್ಕೆ ಈ ವಿಡಿಯೋ ನೋಡಿ.