ಸ್ಯಾಂಡಲ್ವುಡ್ ಸ್ಟಾರ್ ನಟರು ತಮ್ಮ ಮಕ್ಕಳ ಜೊತೆ ನಟಿಸಿರುವ ಸಿನಿಮಾಗಳು ಇಲ್ಲಿವೆ ನೋಡಿ‌..

ಸ್ಯಾಂಡಲ್ ವುಡ್ ನಟರು ತಮ್ಮ ಯಾವ-ಯಾವ ಸಿನಿಮಾಗಳಲ್ಲಿ ತಮ್ಮ ಮಕ್ಕಳೊಂದಿಗೆ ನಟಿಸಿದ್ದಾರೆ ನೋಡಿ.ಸ್ಯಾಂಡಲ್ ವುಡ್‌ ಪ್ರೇಮ ಲೋಕದ ಸೃಷ್ಟಿ ಕರ್ತನಾದ ರವಿಚಂದ್ರನ್ ಅವರ ಎರಡನೇ ಪುತ್ರ ಆದಂತಹ ವಿಕ್ರಮ್ ರವಿಚಂದ್ರನ್ ರವರು “ಹಠವಾದಿ” ಎಂಬ ಸಿನಿಮಾದಲ್ಲಿ ರವಿಚಂದ್ರನ್ ಅವರ ಚಿಕ್ಕ ವಯಸ್ಸಿನ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಎರಡನೇ ಮಗಳು ಆದಂತಹ ನಿವೇದಿತಾ ಅವರು ಶಿವರಾಜ್ ಕುಮಾರ್ ಅವರ ಅಭಿನಯದ “ಅಂಡಮಾನ್ ಅಂಡಮಾನ್” ಎಂಬ ಸಿನಿಮಾದಲ್ಲಿ ಅವರ ಮಗಳಾಗಿ ತುಂಬಾ ಮುದ್ದಾಗಿ ಅಭಿನಯಿಸಿದ್ದಾರೆ. ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ವಿಜಯ್ ಅವರು ದುನಿಯಾ ವಿಜಯ್ ಅವರ ಅಭಿನಯದ “ಕುಸ್ತಿ” ಎಂಬ ಸಿನಿಮಾದಲ್ಲಿ ದುನಿಯಾ ವಿಜಯ್ ಅವರ ಚಿಕ್ಕ ವಯಸ್ಸಿನ ಪಾತ್ರವನ್ನು ನಿರ್ವಹಿಸಿದ್ದಾರೆ.ಆದರೆ ಕಾರಣಾಂತರಗಳಿಂದ ಇನ್ನೂ ಸಿನಿಮಾ ಅರ್ಧಕ್ಕೆ ನಿಂತು ಹೋಗಿದೆ ಎನ್ನುವುದು ದುನಿಯಾ ವಿಜಯ್ ಅವರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್

ಅವರ ಪುತ್ರನಾದ ವಿನೀಶ್ ದರ್ಶನ್ ತೂಗುದೀಪ್ ಅವರು ಅವರ ತಂದೆಯೊಂದಿಗೆ, ದರ್ಶನ್ ಅವರದೇ ಅಭಿನಯದ “ಐರಾವತ” ಎಂಬ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಅವರ ಅಭಿನಯದ ಇನ್ನೊಂದು ಸಿನಿಮವಾದಂತಹ “ಯಜಮಾನ” ಎಂಬ ಸಿನಿಮಾದಲ್ಲಿ ಕೂಡ ಒಂದು ಹಾಡಿನಲ್ಲಿ ದರ್ಶನ್ ಅವರೊಂದಿಗೆ ವಿನೀಶ್ ಅವರು ಹೆಜ್ಜೆ ಹಾಕಿದ್ದಾರೆ. ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ಉಪೇಂದ್ರರವರ ಮಗಳು ಐಶ್ವರ್ಯ ಉಪೇಂದ್ರರವರೂ ಕೂಡ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾರವರ ಅಭಿನಯದ “ದೇವಕಿ” ಎಂಬ ಸಿನಿಮಾದಲ್ಲಿ ಪ್ರಿಯಾಂಕ ರವರ ಮಗಳಾಗಿ ಅಭಿನಯಿಸಿದ್ದಾರೆ.

WhatsApp Group Join Now
Telegram Group Join Now

ಆ ಸಿನಿಮಾದ ನಟನೆಗಾಗಿ ಐಶ್ವರ್ಯ ಉಪೇಂದ್ರ ಅವರಿಗೆ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಅವಾರ್ಡ್ ಕೂಡ ಬಂದಿದೆ. ಇನ್ನೂ ಅನೇಕ ನಟ-ನಟಿಯರು ಅವರ ಮಕ್ಕಳೊಂದಿಗೆ ತಮ್ಮ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಪುನೀತ್ ರಾಜಕುಮಾರ್ ಅವರು ಭಾಗ್ಯವಂತರು ಎಂಬ ಸಿನಿಮಾದಲ್ಲಿ ಬಾಲ ನಟರಾಗಿ ಅಭಿನಯಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರು ರಾಯರ ಭಕ್ತರಾಗಿ ಅಭಿನಯಿಸಿದಂತಹ ಸನ್ನಿವೇಶವನ್ನು ನಾವು ನೋಡಬಹುದಾಗಿದೆ. ತದನಂತರ ಭಕ್ತ ಪ್ರಹಲ್ಲಾದ ಎಂಬ ಸಿನಿಮಾದಲ್ಲಿ ಪ್ರಧಾನ ಪಾತ್ರವನ್ನು ಕೂಡ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಇದಲ್ಲದೆ ಡಾಕ್ಟರ್ ರಾಜಕುಮಾರ್ ಅವರ ಜೊತೆಗೆ ಇನ್ನಷ್ಟು ಸಿನಿಮಾಗಳಲ್ಲಿ ಅಭಿನಯಿಸುವುದನ್ನು ನಾವು ನೋಡಬಹುದು.