ಹಳೆ ಕಾಲದ ನಾಣ್ಯಗಳು ನಿಮ್ಮ ಬಳಿ ಇದಿಯಾ ಹಾಗಾದರೆ ನೀವು ಇದನ್ನ ನೋಡಲೇಬೇಕು.ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ನೀವು ಸದಸ್ಯರಾಗಿರುವ ಆನ್ಲೈನ್ ಶಾಪಿಂಗ್ ಆ್ಯಪ್ ಗಳಲ್ಲಿ ಈ ಹಳೆಯ ನಾಣ್ಯಗಳನ್ನು ಕೊಳ್ಳುತ್ತೇವೆ ಎಂಬ ಆಫರ್ ಗಳು ಬಂದಿದೀಯಾ ಅಥವಾ ಅಂತಹ ನಾಣ್ಯಗಳನ್ನು ಮಾರಾಟ ಮಾಡುವಂತ ಜಾಹೀರಾತುಗಳು ಪದೆ ಪದೆ ಬರುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಇರಿ ಇದು ನಿಮ್ಮ ಅಮೂಲ್ಯವಾದ ಸಮಯವನ್ನು ಮತ್ತು ಹಣವನ್ನು ಹಾಳುಮಾಡುತ್ತದೆ. ಈ ಕುತಂತ್ರದ ಜಾಲತಾಣಕ್ಕೆ ಬಲಿಕೊಡಬೇಕಾಗುತ್ತದೆ. ಈ ಹಳೆಯ ನಾಣ್ಯಗಳ ಮಾರಾಟದ ಜಾಹಿರಾತು ಒಂದು ವ್ಯವಸ್ಥಿತ ದಂದೆ ಆಗಿ ಹೋಗಿದೆ. 2018ರಲ್ಲಿ ಮಲೇಶಿಯಾದ ರಾಯಲ್ ಪೋಲಿಸ್ ವಿಭಾಗ ಈ ಕಾಯಿನ್ ಕಲೆಕ್ಟರ್ ಸ್ಕ್ಯಾಮ್ ಬಗ್ಗೆ ಎಚ್ಚರದಿಂದ ಇರುವಂತೆ ರಾಷ್ಟ್ರೀಯ ಮಟ್ಟದ ಸುತ್ತೋಲೆಯನ್ನು ಹೊರಡಿಸಿದೆ. ಕಳೆದ ಎರಡು ಮುರು ವರ್ಷಗಳಲ್ಲಿ ಈ ದಂದೆಗೆ ಸಿಲುಕಿ ಸಾವಿರಾರು ಹಾಗೂ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡವರು ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.
ಇತ್ತೀಚೆಗೆ ನೀವು ಅಮೇಜಾನ್ ಫೇಸ್‌ಬುಕ್ ಇನ್ಸ್ಟಾಗ್ರಾಂ ಗಳಂತಹ ಜಾಲತಾಣಗಳಲ್ಲಿ ಈ ಕಾಯಿನ್ ಕಲೆಕ್ಟರ್ ಜಾಹೀರಾತುಗಳ ಪ್ರೋಮೊಗಳನ್ನು ಕಾಣಬಹುದು. ಚೆಂದದ ನುಣುಪಾದ ಕಾಯಿನ್ ಗಳನ್ನು ಪ್ಯಾಕ್‌ಮಾಡಿ ಇವು ನೂರಾರು ವರ್ಷದ ಹಳೆಯ ಕಾಲದ ನಾಣ್ಯಗಳು ಇವುಗಳ ಬೆಲೆ ಎಷ್ಟು ಎಂಬುದನ್ನು ತಿಳಿದವರಿಗೆ ಹಾಗೂ ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಇರುವವರಿಗೆ ಇದು ಅಷ್ಟೇನು ಪ್ರಧಾನವಾಗಿ ಇಲ್ಲ. ಆದರೆ ಈ ನಾಣ್ಯಗಳನ್ನು ಸಂಗ್ರಹಣೆ ಮಾಡುವ ಹೊಸಬರಿಗೆ ಈ ಜಾಹೀರಾತು ಕಣ್ಣುಕುಕ್ಕುತ್ತವೆ. ನಾಣ್ಯಗಳನ್ನು ಸಂಗ್ರಹಿಸುವ ತವಕದಲ್ಲಿ ಇರುತ್ತಾರೆ. ಇಂತಹವರು ಈ ನಾಣ್ಯಗಳು ಅಸಲಿನ ಇಲ್ಲವೆ ಎಂಬುದನ್ನು ನೋಡುವುದಿಲ್ಲ. ಇಂತಹವರನ್ನೆ ಈ ಕಾಯಿನ್ ಕಲೆಕ್ಟರ್ ದಂದೆ ಮೊದಲ ಹಂತದ ಟಾರ್ಗೆಟ್ ಆಗಿರುತ್ತಾರೆ.
ಈ ಕಾಯಿನ್ ಮಾರ್ಕೆಟಿಂಗ್ ದಂದೆ ತನ್ನ ಜಾಹಿರಾತಿಗಾಗಿ ಜಾಲತಾಣಗಳನ್ನು ಅತಿ ದೊಡ್ಡ ವೇದಿಕೆಯಾಗಿ ಮಾಡಿಕೊಂಡಿದೆ. ಇವರು ನಕಲಿ ಕಾಯಿನ್ ಗಳನ್ನು ಅತ್ಯಂತ ಚಾಕಚಕ್ಯತೆಯಿಂದ ಹಳೆ ಕಾಯಿನ್ ಗಳಾಗಿ ರೆಡಿ ಮಾಡಿ ಪ್ಯಾಕ್ ಮಾಡಿ ಅವುಗಳನ್ನು ಆಕರ್ಷಕವಾಗಿಸಿ ಮಾರ್ಕೆಟಿಂಗ್ ನಡೆಸುತ್ತವೆ. ಹೊಸಬರನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳಲು ಸೈಕಾಲಜಿಕಲಿ ತಮ್ಮ ಕುತಂತ್ರ ಬುದ್ದಿಯನ್ನು ಬಳಸಿ ಗ್ರಾಯಕರನ್ನು ಸೆಳೆಯುವ ವಿಧಗಳನ್ನು ಬಳಸುತ್ತಾರೆ. ಅದರಲ್ಲಿ ಮೊದಲನೆಯದು ಅವರ ಆಕರ್ಷಕ ಪ್ಯಾಕೇಜಿಂಗ್ ಕವರ್ ಮೂಲಕ. ಇದಕ್ಕಾಗಿ ಅವರು ಚಾರಿತ್ರ್ಯ ಕಾಲದ ಒಂದು ಮುಖ್ಯ ಕಾಲ ಘಟ್ಟವನ್ನು ಬಳಸಿಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ವೀಕ್ಷಿಸಿ.