ಕಳಶಕ್ಕೆ ಇಟ್ಟ ತೆಂಗಿನಕಾಯಿ ಸೀಳುಬಿಟ್ರೆ ಏನರ್ಥ? ಕೆಟ್ಟದ್ದ ಒಳ್ಳೆಯದಾ ಪರಿಹಾರ ಏನು..

ಕಳಸಕ್ಕೆ ಇಟ್ಟಿರುವ ತೆಂಗಿನಕಾಯಿ ಸೀಳು ಬಿಟ್ಟರೆ ಏನರ್ಥ.ನಮಸ್ತೆ ಸ್ನೇಹಿತರೆ, ಕಳಸ ಪ್ರತಿಷ್ಠಾಪನೆ ಎನ್ನುವುದು ದೈವ ಶಕ್ತಿಯನ್ನು ಆಹ್ವಾನಿಸಿ, ಪ್ರತಿಷ್ಠಾಪಿಸಿ, ಪೂಜೆ ಮಾಡುವುದಕ್ಕೆ ಕಳಸ ಪ್ರತಿಷ್ಠಾಪನೆ ಎನ್ನುವರು. ಕಳಸಕ್ಕೆ ಇಟ್ಟಿರುವ ತೆಂಗಿನಕಾಯಿ ಬಿಟ್ಟರೆ ಏನರ್ಥ? ಇದರಿಂದ ಏನಾದರೂ ಅನಾಹುತ ಉಂಟಾಗಬಹುದೇ? ಇದಕ್ಕೆ ಪರಿಹಾರವೇನು? ಈ ಎಲ್ಲಾ ಸಂದೇಹಗಳಿಗೆ ಪರಿಹಾರವನ್ನು ನಾವು ಇಂದು ತಿಳಿಯೋಣ ಬನ್ನಿ. ಸಹಜವಾಗಿ ಕಳಸ ಪ್ರತಿಷ್ಠಾಪನೆ ಯನ್ನು ಎರಡು ವಿಧವಾಗಿ ಮಾಡಲಾಗುತ್ತದೆ. ಮೊದಲನೆಯದಾಗಿ ತೆಂಗಿನಕಾಯಿ ಪೂರ್ತಿಯಾಗಿ ಅರಿಶಿಣವನ್ನು ಹಚ್ಚಿ ಕಳಸಕ್ಕೆ ಇಡುತ್ತೇವೆ. ಎರಡನೆಯದಾಗಿ ಅರಿಶಿನವನ್ನು ತೆಂಗಿನಕಾಯಿಗೆ ಪೂರ್ತಿಯಾಗಿ ಬಳಿಯದೆ ಒಂದು ಬಿಟ್ಟು ಇಟ್ಟು ಪ್ರತಿಷ್ಠಾಪನೆ ಮಾಡುತ್ತೇವೆ. ಇದರಲ್ಲಿ ಕೆಲವು ವಿಷಯಗಳಿವೆ ವಿಶೇಷ ವ್ರತಗಳನ್ನು ಒಂದು ದಿನ, ಐದು ದಿನ ಅಥವಾ ಏಳು ದಿನ ಮಾಡುವಾಗ ಕಳಸ ಪ್ರತಿಷ್ಠಾಪನೆ ಮಾಡುವಾಗ ತೆಂಗಿನಕಾಯಿಗೆ ಪೂರ್ತಿಯಾಗಿ ಅರಿಶಿನವನ್ನು ಹಚ್ಚಬೇಕು. ನಿರಂತರ ಕಳಸ ಅಥವಾ ದೈವಿಕ ಕಳಸವನ್ನು ಪ್ರತಿಷ್ಠಾಪನೆ ಮಾಡುವಾಗ ಅರಿಶಿನವನ್ನು ತೆಂಗಿನಕಾಯಿಗೆ ಪೂರ್ತಿಯಾಗಿ ಹಚ್ಚುವ ಅವಶ್ಯಕತೆ ಇಲ್ಲ. ಬದಲಿಗೆ ತೆಂಗಿನಕಾಯಿಗೆ

ಒಂದು ಬಟ್ಟನ್ನು ಇಟ್ಟು ಪ್ರತಿಷ್ಠಾಪನೆ ಮಾಡಬಹುದು. ಇದಕ್ಕಿಂತಲೂ ಮುಖ್ಯವಾದ ವಿಷಯವೇನೆಂದರೆ, ಕಳಸಕ್ಕೆ ಇಡುವ ತೆಂಗಿನಕಾಯಿಯ ಕಣ್ಣು ಕಾಣಿಸಬಾರದು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಏಕೆಂದರೆ ಕಾಯಿಯು ಅರ್ಧಂಬರ್ಧ ನಾರು ತೆಗೆದಿರುವ ಹಾಗೆ ಇರಬೇಕು.ಪೂರ್ತಿಯಾಗಿ ನಾರು ತೆಗೆದು ಇಟ್ಟರೆ ತೆಂಗಿನಕಾಯಿಯು ಸೀಳು ಬಿಡುವ ಸಾಧ್ಯತೆ ಇರುತ್ತದೆ. ಇನ್ನು ಕಳಸಕ್ಕೆ ಇಟ್ಟಿರುವ ತೆಂಗಿನಕಾಯಿ ಸೀಳು ಬಿಟ್ಟಿದೆ. ಇದರ ಹಿಂದಿನ ಕಾರಣವೇನು ಎಂದು ಹೇಳುವುದಾದರೆ, ತೆಂಗಿನಕಾಯಿಯು ವಾತಾವರಣಕ್ಕೆ ತಾಪಮಾನಕ್ಕೆ ತಕ್ಕಂತೆ ಕಾಯಿ ಸೀಳು ಬಿಟ್ಟಿರಬಹುದು. ಕಳಸಕ್ಕೆ ಇಟ್ಟಿರುವ ತೆಂಗಿನಕಾಯಿ ಸೀಳು ಬಿಟ್ಟಿದೆ ಇದರಿಂದ ಏನು ಅನಾಹುತ ಉಂಟಾಗುತ್ತದೆ ಎಂದು ನೀವು ಭಯಭೀತರಾಗುವ ಅವಶ್ಯಕತೆ ಇಲ್ಲ. ಇದರಿಂದ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ. ಕಾಯಿಯು ವಾತಾವರಣಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತದೆ. ಈ ಬಗ್ಗೆ ಜನರು ಅನೇಕ ರೀತಿಯ ಊಹಾಪೋಹಗಳನ್ನು ಹುಟ್ಟಿಸಿ ಜನರನ್ನು ಭಯ ಬೀಳಿಸುತ್ತಾರೆ. ಇದಕ್ಕೆ ನೀವು ಹೆದರುವ ಅವಶ್ಯಕತೆ ಇಲ್ಲ. ನೆಮ್ಮದಿ ಆಗಿ ಪೂಜೆ ಮಾಡಿ ದೇವರ ಕೃಪೆಗೆ ಪಾತ್ರರಾಗಿ. ಧನ್ಯವಾದಗಳು.

WhatsApp Group Join Now
Telegram Group Join Now
[irp]